







ನೆಲ್ಯಾಡಿ: ಮಂಗಳೂರು ವಿಶ್ವವಿದ್ಯಾನಿಲಯ ಘಟಕ ಕಾಲೇಜು ನೆಲ್ಯಾಡಿ ಇಲ್ಲಿ ರಾಜ್ಯಶಾಸ್ತ್ರ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಕಾಮನಟಗಿ ಗ್ರಾಮದ ನಿವಾಸಿ ಧರ್ಮರಾಯ ಬಾಲಪ್ಪ ಹವಾಲ್ದಾರ್ ಅವರಿಗೆ ಮಾ.5ರಂದು ಮಂಗಳೂರು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಿಂದ ಪಿಎಚ್ಡಿ ಪದವಿ ನೀಡಲಾಗಿದೆ.


ಕರ್ನಾಟಕದಲ್ಲಿ ವಾಲ್ಮೀಕಿ ಸಮುದಾಯದ ರಾಜಕೀಯ ಭಾಗವಹಿಸುವಿಕೆಯ ಸಮಸ್ಯೆ ಮತ್ತು ಸವಾಲುಗಳು: ಗುಲಬರ್ಗಾ ಮತ್ತು ಯಾದಗಿರಿ ಜಿಲ್ಲೆಯ ಒಂದು ತೌಲನಿಕ ಅಧ್ಯಯನ” (2010-2018) ಎಂಬ ವಿಷಯದ ಮೇಲೆ ಇವರು ಸಂಶೋಧನೆ ನಡೆಸಿ ಈ ಪದವಿಯನ್ನು ಪಡೆದಿದ್ದಾರೆ. ಈ ಸಂಶೋಧನಾ ಕಾರ್ಯವನ್ನು ವಿಶ್ವವಿದ್ಯಾಲಯ ಕಾಲೇಜು ಹಂಪನಕಟ್ಟೆ ಮಂಗಳೂರು ಇದರ ನಿವೃತ್ತ ಸಹ ಪ್ರಾಧ್ಯಾಪಕರಾದ ಡಾ. ಶಹಬರ್ ಪಾಷಾ ಅವರ ಮಾರ್ಗದರ್ಶನದಲ್ಲಿ ಪೂರ್ಣಗೊಳಿಸಿದ್ದಾರೆ.













