ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯಲ್ಲಿ ಬಿಷಪ್ ಪೋಳಿಕಾರ್ಪೋಸ್ ಮಾರ್ ಗೀವರ್ಗೀಸ್ ಅವರ 15ನೇ ಪುಣ್ಯಸ್ಮರಣೆ

0

ನೆಲ್ಯಾಡಿ: ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿದ್ದ ದಿ. ಬಿಷಪ್ ಪೋಳಿಕಾರ್ಪೋಸ್ ಮಾರ್ ಗೀವರ್ಗೀಸ್ ಅವರ 15ನೇ ಪುಣ್ಯಸ್ಮರಣೆ ಕಾರ್ಯಕ್ರಮ ಮಾ.೭ರಂದು ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯಿತು.


ಕಾರ್ಯಕ್ರಮದ ಆರಂಭದಲ್ಲಿ ಬಿಷಪ್ ಅವರ ಭಾವಚಿತ್ರದ ಮುಂದೆ ದೀಪ ಬೆಳಗಿ ಗೌರವ ಅರ್ಪಿಸಲಾಯಿತು. ಸಂಸ್ಥೆಯ ಸಹ ಸಂಚಾಲಕರಾದ ಡೀಕನ್ ಜಾರ್ಜ್ ಅವರು ದೀಪ ಬೆಳಗಿ ಗೌರವ ಸಮರ್ಪಣೆಗೈದರು. ಸೈಂಟ್ ಆಂಟನೀಸ್ ಪ್ರೌಢಶಾಲೆಯ ಮುಖ್ಯಗುರು ಶ್ರೀಧರ ಗೌಡ ಅವರು ಮಾತನಾಡಿ, ಬಿಷಪ್ ಪೋಳಿಕಾರ್ಪೋಸ್ ಮಾರ್ ಗೀವರ್ಗೀಸ್ ಅವರು ಉದನೆಯ ಗ್ರಾಮೀಣ ಪ್ರದೇಶದಲ್ಲಿ ಸಂಸ್ಥೆಯನ್ನು ಹುಟ್ಟು ಹಾಕಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ನೀಡುವ ಮೂಲಕ ಶಿಕ್ಷಣ ಕ್ರಾಂತಿಯನ್ನು ಉಂಟುಮಾಡಿದರು. ಪೂಜ್ಯರ ನೆನಪಿಗಾಗಿ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಸ್ಕೂಲ್ ಇಂದು ತಲೆಯೆತ್ತಿ ನಿಂತಿದೆ ಎಂದರು. ಬಳಿಕ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಬಿಷಪ್ ಪೋಳಿಕಾರ್ಪೋಸ್ ಮಾರ್ ಗೀವರ್ಗೀಸ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಆಂಗ್ಲಮಾಧ್ಯಮ ವಿಭಾಗದ ಮುಖ್ಯಗುರು ಸಿಬಿಚ್ಚನ್ ಟಿ.ಸಿ., ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here