ಉಪ್ಪಿನಂಗಡಿ: ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದಲ್ಲಿ ಶ್ರೀ ದೇವರ ಆರಾಟ ಮಹೋತ್ಸವ, ಕಟ್ಟೆಪೂಜೆ

0

ಉಪ್ಪಿನಂಗಡಿ: ಇತಿಹಾಸ ಪ್ರಸಿದ್ಧ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ -ಮಹಾಕಾಳಿ ದೇವಾಲಯದ ವರ್ಷಾವಧಿ ಉತ್ಸವದ ಪ್ರಯುಕ್ತ ನಡೆದ ಶ್ರೀ ದೇವರ ಆರಾಟ ಮಹೋತ್ಸವವು ಶುಕ್ರವಾರ ರಾತ್ರಿ ಉಪ್ಪಿನಂಗಡಿಯ ಪ್ರಮುಖ ಬೀದಿಗಳಲ್ಲಿ ಸಾಗಿ ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಶ್ರೀ ದೇವರ ಅವಭೃತ ಸ್ನಾನವು ನಡೆದು ಧ್ವಜಾವರೋಹಣ ಮಾಡಲಾಯಿತು.


ಆರಾಟ ಉತ್ಸವದ ಅಂಗವಾಗಿ ಉಪ್ಪಿನಂಗಡಿಯ ಹೊಸ ಬಸ್ ನಿಲ್ದಾಣದ ಬಳಿ ಹಾಗೂ ಹಳೆ ಬಸ್ ನಿಲ್ದಾಣದ ಕಟ್ಟೆಗಳಲ್ಲಿ ಶ್ರೀ ದೇವರ ಕಟ್ಟೆ ಪೂಜೆಯು ನೆರವೇರಿತು. ಹೊಸ ಬಸ್ ನಿಲ್ದಾಣ ಬಳಿ ಪೂಜೆಯ ನೇತೃತ್ವವನ್ನು ವಿಶ್ವ ಹಿಂದೂ ಪರಿಷತ್ ವಹಿಸಿಕೊಂಡು ವಯಲಿನ್ ಸಹಿತ ಚೆಂಡೆ ವಾದನ ಹಮ್ಮಿಕೊಳ್ಳಲಾಗಿತ್ತು. ಹಳೆ ಬಸ್ ನಿಲ್ದಾಣದಲ್ಲಿ ಗೆಳೆಯರು -94 ಇದರ ನೇತೃತ್ವದಲ್ಲಿ ಭಕ್ತಿ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದೇ ವೇದಿಕೆಯಲ್ಲಿ ಗಾಂಧಾರಿ ಕಲೆಯಲ್ಲಿ ವಿಶ್ವದಾಖಲೆ ಸ್ಥಾಪಿಸಿದ ಶಮಿಕಾ ಎಂ.ಕೆ. ಹಾಗೂ ಬಡತನದ ನಡುವೆಯೂ ಸಂಶೋಧನಾತ್ಮಕ ಪಿಹೆಚ್‌ಡಿ ಪದವಿ ಪಡೆದ ನೇತ್ರಾವತಿಯವರ ಸಹಿತ ಸಾಧಕರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಕ್ , ಸಮಿತಿಯ ಸದಸ್ಯರಾದ ಹರೀಶ್ ಉಪಾಧ್ಯಾಯ , ಬಿ. ಗೋಪಾಲಕೃಷ್ಣ ರೈ, ಸೋಮನಾಥ, ಡಾ. ರಮ್ಯ ರಾಜಾರಾಮ್ , ಅನಿತಾ ಕೇಶವ ಗೌಡ, ಕೃಷ್ಣ ರಾವ್ ಅರ್ತಿಲ, ದೇವಿದಾಸ್ ರೈ ಬಿ., ಎಂ. ವೆಂಕಪ್ಪ ಪೂಜಾರಿ, ಕಾರ್ಯನಿರ್ವಹಣಾಧಿಕಾರಿ ಕವಿತ ಎಂ. , ಮಾಜಿ ಶಾಸಕ ಸಂಜೀವ ಮಟಂದೂರು, ಗೆಳೆಯರು – 94 ಉಪ್ಪಿನಂಗಡಿ ಇದರ ಅಧ್ಯಕ್ಷ ರಾಧಾಕೃಷ್ಣ ಭಟ್ ಬೊಳ್ಳಾವು, ಉಪಾಧ್ಯಕ್ಷ ಚಂದ್ರಶೇಖರ ಶೆಟ್ಟಿ, ಕೋಶಾಧಿಕಾರಿ ಪ್ರಕಾಶ್ ಆಚಾರ್ಯ, ಕಾರ್ಯದರ್ಶಿ ಅಚಲ್ ಉಬರಡ್ಕ, ಪ್ರಮುಖರಾದ ಚಂದಪ್ಪ ಮೂಲ್ಯ, ಡಾ. ರಾಜಾರಾಮ ಕೆ.ಬಿ., ಕರುಣಾಕರ ಸುವರ್ಣ, ಸುಂದರ ಗೌಡ, ಸುದರ್ಶನ ಎಂ., ಯು. ರಾಮ , ಹರಿರಾಮಚಂದ್ರ , ಕಂಗ್ವೆ ವಿಶ್ವನಾಥ ಶೆಟ್ಟಿ, ಸುಜೀರ್ ಗಣಪತಿ ನಾಯಕ್, ಕೈಲಾರ್ ರಾಜಗೋಪಾಲ ಭಟ್, ಕೆ. ಜಗದೀಶ್ ಶೆಟ್ಟಿ, ರಾಮಚಂದ್ರ ಮಣಿಯಾಣಿ, ವಿದ್ಯಾಧರ ಜೈನ್ , ಯು.ಜಿ. ರಾಧಾ, ಎನ್. ಗೋಪಾಲ ಹೆಗ್ಡೆ, ಲೋಕೇಶ್ ಹೆಗ್ಡೆ, ಗುಣಕರ ಅಗ್ನಾಡಿ, ವಿಜಯ ಕುಮಾರ್ ಕಲ್ಲಳಿಕೆ, ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿ ಕೃಷ್ಣಪ್ರಸಾದ್ ಬಡಿಲ, ದಿವಾಕರ, ಪದ್ಮನಾಭ, ಸುಧಾಕರ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here