ಉಪ್ಪಿನಂಗಡಿ: ನಾಗಮಂಡಲೋತ್ಸವ ಸಮಿತಿ ರಚನೆ

0

ಅಧ್ಯಕ್ಷರಾಗಿ ಚಂದಪ್ಪ ಮೂಲ್ಯ, ಕಾರ್ಯಾಧ್ಯಕ್ಷರಾಗಿ ಹರಿಪ್ರಸಾದ್ ಶೆಟ್ಟಿ

ಉಪ್ಪಿನಂಗಡಿ: ಪುತ್ತಿಲ ಪರಿವಾರ ಸೇವಾ ಟ್ರಸ್ಟ್ (ರಿ) ಪುತ್ತೂರು ಇದರ ವತಿಯಿಂದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಕ್ಷೇತ್ರದಲ್ಲಿ ಎ.5ರಂದು ನಾಗಮಂಡಲ ನಡೆಯಲಿದ್ದು, ನಾಗಮಂಡಲ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಚಂದಪ್ಪ ಮೂಲ್ಯ ಹಾಗೂ ಕಾರ್ಯಾಧ್ಯಕ್ಷರಾಗಿ ಹರಿಪ್ರಸಾದ್ ಶೆಟ್ಟಿ ಬೊಳ್ಳಾವು ಅವರನ್ನು ಆಯ್ಕೆ ಮಾಡಲಾಯಿತು.


ಗೌರವಾಧ್ಯಕ್ಷರಾಗಿ ಪ್ರತಾಪ್ ಪೆರಿಯಡ್ಕ, ಹೇರಂಭ ಶಾಸ್ತ್ರಿ, ಶ್ರೀರಾಮ ಭಟ್ ಪಾತಾಳ, ಸಂಚಾಲಕರಾಗಿ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿಗಳಾಗಿ ಪ್ರಶಾಂತ್ ನೆಕ್ಕಿಲಾಡಿ, ನವೀನ್ ಕುಮಾರ್ ಕಲ್ಯಾಟೆ, ಸಹ ಸಂಚಾಲಕರಾಗಿ ಉಮೇಶ ಗೌಡ ಕೋಡಿಜಾಲು, ಅನಿಲ್ ತೆಂಕಿಲ ಮತ್ತು ಕೋಶಾಧಿಕಾರಿಯಾಗಿ ಯತೀಶ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ವಿವಿಧ ಸಮಿತಿಗಳನ್ನು ರಚಿಸಲಾಯಿತು.
ನಾಗಮಂಡಲ ಉತ್ಸವದ ಪೂರ್ವಭಾವಿಯಾಗಿ ಉಪ್ಪಿನಂಗಡಿಯ ಶ್ರೀ ಶಕ್ತಿ ಸಭಾಭವನದಲ್ಲಿ ನಡೆದ ಸಮಾಲೋಚನಾ ಸಭೆಯಲ್ಲಿ ಈ ಆಯ್ಕೆ ನಡೆಸಲಾಯಿತು.

LEAVE A REPLY

Please enter your comment!
Please enter your name here