ಬೆದ್ರಾಳ ನಂದಿಕೇಶ್ವರ ಭಜನಾ ಮಂದಿರದ 33ನೇ ವಾರ್ಷಿಕೋತ್ಸವ, ದೈವಗಳ ನೇಮೋತ್ಸವ ಯಶಸ್ವಿ ಸಂಪನ್ನ

0

ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಬೆದ್ರಾಳ ಶ್ರೀ ನಂದಿಕೇಶ್ವರ ಭಜನಾ ಮಂದಿರದ 33ನೇ ವರ್ಷದ ವಾರ್ಷಿಕೋತ್ಸವ ಹಾಗೂ ಶ್ರೀ ದೈವಗಳ ನೇಮೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿದೆ. ನಡೆಯಲಿದೆ.

ಮಾ.7ರಂದು ರಾತ್ರಿ ಗಂಟೆ ಭಜನಾ ಕಾರ್ಯಕ್ರಮ, ಮಾ.8ರಂದು ಬೆಳಿಗ್ಗೆ ಗಣಹೋಮ, ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ನಾಗ ಮತ್ತು ದೈವಗಳಿಗೆ ತಂಬಿಲ ಸೇವೆ, ಪ್ರಸಾದ ವಿತರಣೆ, ಭಜನಾ ಕಾರ್ಯಕ್ರಮ ಜರಗಿತು. ಸಂಜೆ  ಶ್ರೀ ದೈವಗಳ ಭಂಡಾರ ತೆಗೆಯುವ ಕಾರ್ಯಕ್ರಮ, ಬಳಿಕ ಶ್ರೀ ರಕ್ತೇಶ್ವರಿ, ಶ್ರೀ ಕಲ್ಲುರ್ಟಿ ಮತ್ತು ಶ್ರೀ ಗುಳಿಗ ದೈವಗಳ ನಡಾವಳಿ ಜರಗಿತು. ಮಧ್ಯಾಹ್ನ ಹಾಗೂ ರಾತ್ರಿ ಅನ್ನಸಂತರ್ಪಣೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡಿದ್ದರು. 

ಈ ಸಂದರ್ಭದಲ್ಲಿ ನಂದಿಕೇಶ್ವರ ಭಜನಾ ಮಂಡಳಿಯ ಮಕ್ಕಳಿಂದ ಕುಣಿತ ಭಜನೆ ನೆರವೇರಿದ್ದು, ಭಜನಾ ಮಂದಿರದ ಪದಾಧಿಕಾರಿಗಳು ದೀಪ ಬೆಳಗಿಸಿ ಉದ್ಘಾಟಿಸುವ ಮೂಲಕ ಕುಣಿತ ಭಜನೆಗೆ ಚಾಲನೆ ನೀಡಲಾಯಿತು. 

ಈ ಸಂದರ್ಭದಲ್ಲಿ ನಂದಿಕೇಶ್ವರ ಭಜನಾ ಮಂದಿರದ ಗೌರವಾಧ್ಯಕ್ಷರಾದ ಲಕ್ಷ್ಮೀಶ ತಂತ್ರಿ ಕೆಮ್ಮಿಂಜೆ, ಉದಯಕುಮಾರ್ ತಂತ್ರಿ ಕೆಮ್ಮಿಂಜೆ, ಸುಜಯಕೃಷ್ಣ ತಂತ್ರಿ ಕೆಮ್ಮಿಂಜೆ, ನವೀನ್ ಚಂದ್ರ ನಾಯೈಕ್, ಅನುವಂಶಿಕ ಮೊಕ್ತೇಸರ ವರುಣ್ ಕುಮಾರ್ ಜೈನ್ ಬೆದ್ರಾಳ, ಅಧ್ಯಕ್ಷ ಪದ್ಮನಾಭ ಪೂಜಾರಿ ಬೆದ್ರಾಳ, ಕಾರ್ಯದರ್ಶಿ ಕೇಶವ ಪೂಜಾರಿ ಬೆದ್ರಾಳ, 

ಉಪಾಧ್ಯಕ್ಷ ಅನೂಪ್ ಟಿ.ವಿ ಬೆದ್ರಾಳ, ಜೊತೆ ಕಾರ್ಯದರ್ಶಿ ಗಣೇಶ್ ಆಚಾರ್ಯ ಬೆದ್ರಾಳ, ಕೋಶಾಧಿಕಾರಿ ಪ್ರವೀಣ್ ಶೆಟ್ಟಿ ಬೆದ್ರಾಳ, ಸಂಘಟನಾ ಕಾರ್ಯದರ್ಶಿಗಳಾದ ಪ್ರಕಾಶ್ ನಾಯ್ಕ ಆರ್ಯಮುಗೇರು, ದಯಾನಂದ ಕುಲಾಲ್ ಬೆದ್ರಾಳ, ಕಿರಣ್ ಕುಮಾರ್ ಬೆದ್ರಾಳ, ವೇಣುಗೋಪಾಲ ನಾಯ್ಕ ಕೊರಜಿಮಜಲು, ನಾಗೇಶ್ ಪೂಜಾರಿ ಬೆದ್ರಾಳ, ಗೌರವ ಸಲಹೆಗಾರರಾದ ರಾಜ್‌ಕುಮಾರ್ ರೈ ಬೆದ್ರಾಳ, ಮೋಹನ್ ನಾಯಕ್ ಬೆದ್ರಾಳ, ಕೊರಗಪ್ಪ ಕುಲಾಲ್ ಬೆದ್ರಾಳ, ಬಾಬು ನಾಯ್ಕ ಕೊರಜಿಮಜಲು, ಅರುಣ್ ಕುಮಾರ್ ಜೈನ್ ಬೆದ್ರಾಳ, ಸುಧಾಕರ ಶೆಟ್ಟಿ ಬೆದ್ರಾಳ, ಶರತ್‌ಚಂದ್ರ ನಾಕ್ ಬೆದ್ರಾಳ, ಕೆ.ಚಂದ್ರ ಕೂಡಮರ, ಕೃಷ್ಣಪ್ಪ ಗೌಡ ಕಂಚಲಗುರಿ, ಮನೋಜ್ ಕುಮಾರ್ ಟಿ.ವಿ ಬೆದ್ರಾಳ, ಉಮೇಶ್ ಆಚಾರ್ಯ ಬೆದ್ರಾಳ, ಪ್ರವೀಣ್ ಪೂಜಾರಿ ಕೂಡಮರ, ಗಂಗಾಧರ ಗೌಡ ಬೆದ್ರಾಳ, ಹರೀಶ್ ಕುಲಾಲ್ ಬೆದ್ರಾಳ, ಭಜನಾ ಮಂಡಳಿ ಸಂಚಾಲಕ ವಸಂತ ನಾಯ್ಕ ಬೆದ್ರಾಳರವರ ಸಹಿತ ಪದಾಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು. 

ಸನ್ಮಾನ..
ಈ ಸಂದರ್ಭದಲ್ಲಿ ಆಯುರ್ವೇದ ರತ್ನ ಪ್ರಶಸ್ತಿ ಪುರಸ್ಕೃತರಾದ ಬ್ರಹ್ಮಶ್ರೀ ಡಾ.ಸುಜಯಕೃಷ್ಣ ತಂತ್ರಿ ಕೆಮ್ಮಿಂಜೆರವರನ್ನು ಭಜನಾ ಮಂದಿರದ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here