ಉಪ್ಪಿನಂಗಡಿ: ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನ : ಅಷ್ಟಮಿ 3ನೇ ಮಖೆಕೂಟ ಸಂಪನ್ನ

0

ಉಪ್ಪಿನಂಗಡಿ: ಇತಿಹಾಸ ಪ್ರಸಿದ್ಧ ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದಲ್ಲಿ ಮಂಗಳವಾರದಂದು ಅಷ್ಟಮಿ 3ನೇ ಮಖೆಕೂಟ ಹಾಗೂ ರಥೋತ್ಸವವು ನಡೆಯಿತು.
ಮಖೆ ಜಾತ್ರೆಯ ಪ್ರಯುಕ್ತ ಮಂಗಳವಾರ ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ ನಡೆಯಿತು. ಬಳಿಕ ರಥಬೀದಿಯಲ್ಲಿ ರಥೋತ್ಸವವು ಜರಗಿತು. ಬಳಿಕ ಬಲಿಯಾಗಿ ಮಹಾಪೂಜೆ ನಡೆಯಿತು ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಭರತನಾಟ್ಯ, ಹಾಗೂ ಉಬಾರ್ ರಂಗಸಂಗಮ ಕಲಾವಿದರಿಂದ ‘ಡಬ್ಬಲ್ ಗೇಮ್’ ರಡ್ಡ್ ಮೋನೆದ ನಡುಟು ತುಳು ನಾಟಕ ಪ್ರದರ್ಶನಗೊಂಡಿತು.


ಬುಧವಾರದಂದು ಪ್ರಾತಃಕಾಲ ನದಿಯಲ್ಲಿ ಪವಿತ್ರ ಮಖೆ ತೀರ್ಥಸ್ನಾನ ನಡೆದು, ಬೆಳಗ್ಗೆ ಬಲಿ ಹೊರಟು ಉತ್ಸವ, ದರ್ಶನಬಲಿ, ಬಟ್ಟಲು ಕಾಣಿಕೆ, ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ಕೊಟ್ಟು, ಮಹಾಪೂಜೆ ನಡೆಯಿತು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಿತು.


ಈ ವೇಳೆ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೖಕ್‌ , ಸಮಿತಿಯ ಸದಸ್ಯರಾದ ಹರೀಶ್ ಉಪಾಧ್ಯಾಯ , ಬಿ ಗೋಪಾಲಕೃಷ್ಣ ರೈ, ಸೋಮನಾಥ, ಜಿ. ಕೃಷ್ಣರಾವ್ ಆರ್ತಿಲ, ಶ್ರೀಮತಿ ಡಾ. ರಮ್ಯ ರಾಜಾರಾಮ್, ದೇವಿದಾಸ ರೈ ಬಿ., ಶ್ರೀಮತಿ ಅನಿತಾ ಕೇಶವ ಗೌಡ, ಎಂ. ವೆಂಕಪ್ಪ ಪೂಜಾರಿ ಕಾರ್ಯನಿರ್ವಹಣಾಧಿಕಾರಿ ಕವಿತ ಎಂ. , ಪ್ರಮುಖರಾದ ವಸಂತ ಕುಮಾರ ತಾಳ್ತಜೆ, ಚಂದಪ್ಪ ಮೂಲ್ಯ, ರಾಮಚಂದ್ರ ಮಣಿಯಾಣಿ, ವೆಂಕಟರಮಣ ರಾವ್, ಡಾ. ರಾಜಾರಾಮ ಕೆ.ಬಿ., ಕರುಣಾಕರ ಸುವರ್ಣ, ಸುಂದರ ಗೌಡ , ಸುದರ್ಶನ ಎಂ., ಯು. ರಾಮ , ಹರಿರಾಮಚಂದ್ರ , ಮಹೇಶ್ ಬಜತ್ತೂರು, ಕಂಗ್ವೆ ವಿಶ್ವನಾಥ ಶೆಟ್ಟಿ, ವಾಸುದೇವ ಪ್ರಭು, ಕೆ. ಬಾಲಚಂದ್ರ ಶೆಟ್ಟಿ, ಉಷಾ ಮುಳಿಯ, ಕೆ. ಉದಯ ಕುಮಾರ್, ಕಾಮಾಕ್ಷಿ ಜಿ. ಹೆಗ್ಡೆ, ಕೈಲಾರ್ ರಾಜಗೋಪಾಲ ಭಟ್, ಮಹೇಶ್ ಕಿಣಿ, ಕೆ. ಜಗದೀಶ್ ಶೆಟ್ಟಿ, ಶರತ್ ಕೋಟೆ, ಜಯಪ್ರಕಾಶ್ ಶೆಟ್ಟಿ, ವಿದ್ಯಾಧರ ಜೈನ್ , ಸಚಿನ್ ಎ.ಎಸ್., ತಿಮ್ಮಪ್ಪ ಗೌಡ , ಕೃಷ್ಣ ಶೆಣೈ , ಜ್ಯೋತಿ ಹೇರಂಭ ಶಾಸ್ತ್ರಿ, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು , ಸುಧಾಕರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here