ಪುತ್ತೂರು: ಪಾರ್ಶ್ವವಾಯು ಖಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿಗೆ ಅರುಣ ಸಾರಥಿ ಸಂಘಟನೆ ವತಿಯಿಂದ ಧನಸಹಾಯ

0

ಪುತ್ತೂರು: ಪಾರ್ಶ್ವವಾಯು ಖಾಯಿಲೆಯಿಂದ ಬಳಲುತ್ತಿರುವ ಕುಂಜೂರುಪಂಜ ನಿವಾಸಿ ಜಿನ್ನಪ್ಪ ನಾಯ್ಕ ಅವರಿಗೆ “ಅರುಣ ಸಾರಥಿ” ಚಾಲಕರ ಸಂಘಟನೆಯ ವತಿಯಿಂದ ₹10,000 ಧನಸಹಾಯವನ್ನು ನೀಡಲಾಯಿತು. ಈ ಧನಸಹಾಯವನ್ನು “ಪುತ್ತಿಲ ಪರಿವಾರ ಸೇವಾ ಟ್ರಸ್ಟ್” ಸಂಚಾಲಕರಾದ ಅರುಣ್ ಕುಮಾರ್ ಪುತ್ತಿಲ ಅವರ ಉಪಸ್ಥಿತಿಯಲ್ಲಿ ಹಸ್ತಾಂತರಿಸಲಾಯಿತು.
ಸಮಾಜದಲ್ಲಿರುವ ಅಶಕ್ತರು ಮತ್ತು ಸಂಕಷ್ಟದಲ್ಲಿರುವವರಿಗೆ ನೆರವು ನೀಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ “ಅರುಣ ಸಾರಥಿ” ಸಂಘಟನೆಯು ಇದುವರೆಗೆ ಒಟ್ಟು ₹1,80,000ಕ್ಕೂ ಅಧಿಕ ಧನಸಹಾಯವನ್ನು ನೀಡಿರುವುದಾಗಿ ತಿಳಿದುಬಂದಿದೆ.
ಈ ಸಂದರ್ಭದಲ್ಲಿ ಸಂಘಟನೆಯ ಸದಸ್ಯರಾದ ಸಂದೇಶ್ ನಾಯ್ಕ ಕೆಯ್ಯೂರು, ಯೋಗೀಶ್ ಸಂಪ್ಯ, ಗಣರಾಜ್ ಭಟ್ (ಖುಷಿ) ಮುಕ್ರಂಪಾಡಿ, ಶ್ರೀಕಾಂತ್ ಆಚಾರ್ ಹಿಂದಾರ್, ಪ್ರವೀಣ್ ಭಂಡಾರಿ, ಸಚಿನ್ ವಳತ್ತಡ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here