






ಪುತ್ತೂರು : ಪ್ಯಾರಾಮೆಡಿಕಲ್ ಬೋರ್ಡ್ ಕರ್ನಾಟಕ ನಡೆಸಿದ 2024-25 ನೇ ಸಾಲಿನ ವಾರ್ಷಿಕ ಪರೀಕ್ಷೆಯಲಿ ಪುತ್ತೂರಿನ ಹೆಚ್.ಪಿ.ಆರ್ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾಥಿ೯ಗಳು ಉತ್ತಮ ಸಾಧನೆ ತೋರಿದ್ದಾರೆ.


ತೃತೀಯ ವರ್ಷದ ಪ್ಯಾರಾಮೆಡಿಕಲ್ ನ ಡಿ.ಎಮ್.ಎಲ್.ಟಿ ವಿಭಾಗದಲ್ಲಿ ಫಾತಿಮತ್ ಸಫ(81.3%),ಆಲ್ ರಾಹಿಲ್(80.5%),ಕೆ.ಎ.ಸುಹೈಬತುಲ್ ಅಸ್ಲಾಮಿಯ(77.5%),ಹರ್ಷಿಣಿ.ಎ(77.1%),ನೆಬಿಸತುಲ್ ಮಿಶ್ರಿಯ(78 %), ಚರೀಷ್ಮಾ ಕೆ.ಎಲ್(75.6%), ಮೈಮಾನತ್ ರಝೀನ(75%),ದ್ವೀತಿಯ ವರ್ಷದ ಪ್ಯಾರಾಮೆಡಿಕಲ್ ನ ಡಿ.ಎಮ್.ಎಲ್.ಟಿ ವಿಭಾಗದಲ್ಲಿ ಯಾಸ್ಮಿನ್(76.75%) ಹಾಗೂ ಪ್ರಥಮ ವರ್ಷದ ಪ್ಯಾರಾಮೆಡಿಕಲ್ ನ ಡಿ.ಎಮ್.ಎಲ್.ಟಿ ವಿಭಾಗದಲ್ಲಿ ಸಫ್ ನಾಝ್(78%),ಅಶ್ವಿತ ಡಿಸೋಜ(76.25%), ಪೂಜಾ (75.25%) ಇವರು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.



ಪ್ರಥಮ ವರ್ಷದ ಫಾತಿಮತ್ ಸಫ್‌ವಾನ ಭೌತಶಾಸ್ತ್ರದಲ್ಲಿ 100 ಕ್ಕೆ 100 ಅಂಕ ಪಡೆದಿದ್ದಾರೆ.ತೃತೀಯ ವರ್ಷದ ಪ್ಯಾರಾಮೆಡಿಕಲ್ ವಿಭಾಗದಲ್ಲಿ 37 ಮಂದಿ, ದ್ವೀತಿಯ ವರ್ಷದ ಪ್ಯಾರಾಮೆಡಿಕಲ್ ವಿಭಾಗದಲ್ಲಿ 11 ಮಂದಿ ಹಾಗೂ ಪ್ರಥಮ ವರ್ಷದ ಪ್ಯಾರಾಮೆಡಿಕಲ್ ವಿಭಾಗದಲ್ಲಿ15 ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಹೆಚ್‌ಪಿಆರ್ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿಗಳ ಸಾಧನೆ:
2024-25ನೇ ಸಾಲಿನ ಅರೆವೈದ್ಯಕೀಯ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ವರ್ಷದಲ್ಲಿ 10 ಮಂದಿ, ದ್ವಿತೀಯ ವರ್ಷದಲ್ಲಿ 07 ಮಂದಿ ಹಾಗೂ ತೃತೀಯ ವರ್ಷದಲ್ಲಿ 30 ಮಂದಿ ವಿದ್ಯಾರ್ಥಿಗಳು ಉತ್ತಮ ಸ್ಥಾನದಲ್ಲಿ ತೇರ್ಗಡೆಯಾಗಿದ್ದಾರೆ.










