ಸುಡು ಬೇಸಿಗೆಯಲ್ಲಿ ಮೈ ತಂಪೆರೆಸುವ ಬಾಲವನದ ಈಜುಕೊಳ- ಏ.3ರಿಂದ ಬೇಸಿಗೆಯ 2ನೇ ಶಿಬಿರ ಪ್ರಾರಂಭ

0

ಪುತ್ತೂರು: ಬೇಸಿಗೆ ಬಂತೆಂದರೆ ಸಾಕು ಕರಾವಳಿ ಭಾಗದಲ್ಲಿ ಬಿಸಿಲು ನೆತ್ತಿ ಸುಡುವ ಭಾಸವಾಗುತ್ತದೆ. ಮಣ್ಣಿನ ಒಸರಿನಲ್ಲಿ ನೀರು ಹರಿಯುವಂತೆ ಮನುಷ್ಯನ ದೇಹದಿಂದ ಬೆವರು ಹರಿಯುತ್ತದೆ. ಹೀಗಾಗಿ ಜನರು ಪದೇ ಪದೇ ತಂಪು ಪಾನೀಯ ಸೇವಿಸುವುದಲ್ಲದೆ, ತಣ್ಣೀರಿನಲ್ಲೇ ಸ್ನಾನ ಮಾಡುತ್ತಾರೆ. ಇನ್ನೂ ಕೆಲವರಿಗೆ ನೀರಿನಲ್ಲೇ ಕುಳಿತುಕೊಳ್ಳೋಣ ಎಂಬ ಯೋಚನೆ ಬರುವಷ್ಟರ ಮಟ್ಟಿಗೆ ಸೆಕೆಯಾಗುತ್ತಿರುತ್ತದೆ. ಇಂತಹ ಸಂದರ್ಭದಲ್ಲಿ ಪುತ್ತೂರಿನ ಪರ್ಲಡ್ಕದಲ್ಲಿರುವ ಡಾ.ಶಿವರಾಮ ಕಾರಂತ ಬಾಲವನ ಈಜುಕೊಳವು ಬೇಸಿಗೆ ಶಿಬಿರವನ್ನು ಆಯೋಜಿಸುತ್ತಿದೆ.


ಮೊದಲ ಶಿಬಿರವು ಮಾ.14 ರಂದು ಪ್ರಾರಂಭವಾಗಿದ್ದು, ಎ.1ರಂದು ಕೊನೆಗೊಳ್ಳಲಿದೆ. 2ನೇ ಶಿಬಿರವು ಏ.3 ರಿಂದ 22ರ ವರೆಗೆ ನಡೆಯಲಿದ್ದು, ಏ.24 ರಿಂದ ಮೇ 12ರ ವರೆಗೆ 3ನೇ ಶಿಬಿರ, ಮೇ 14 ರಿಂದ ಜೂ.2ರ ವರೆಗೆ 4ನೇ ಶಿಬಿರ ನಡೆಯಲಿದೆ.ಫ್ಯಾಮಿಲಿ ಬ್ಯಾಚ್ ಮತ್ತು ಗ್ರೂಪ್ ಡಿಸ್ಕೌಂಟ್ ಆಫರ್ ಇದ್ದು, ಜನರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಬಾಲವನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ನಾಲ್ಕು ವರ್ಷಗಳ ಮೇಲ್ಪಟ್ಟು ಬ್ಯಾಚ್ ವೈಸ್ ಈಜು ತರಬೇತಿ ನೀಡಲಾಗುತ್ತದೆ. ಬೆಳಗ್ಗೆ 5.30 ರಿಂದ 6.15ರ ವರೆಗೆ, 6.30 ರಿಂದ 7.15ರ ವರೆಗೆ, 7.30 ರಿಂದ 8.15ರ ವರೆಗೆ, 8.30 ರಿಂದ 9.15ರ ವರೆಗೆ ನಡೆಯಲಿದೆ. ಸಂಜೆ 3.30 ರಿಂದ 4.15ರ ವರೆಗೆ, 4.30 ರಿಂದ 5.15ರ ವರೆಗೆ, ಮಕ್ಕಳು ಮತ್ತು ಮಹಿಳೆಯರಿಗೆ 5.30 ರಿಂದ 6.15ರ ವರೆಗೆ ಈಜು ತರಬೇತಿ ನಡೆಯಲಿದೆ. 6.30 ರಿಂದ 7.15ರ ವರೆಗೆ, 7.30 ರಿಂದ 8.15ರ ವರೆಗೆ ತರಬೇತಿ ನೀಡಲಾಗುತ್ತದೆ.
ಬಾಲವನದ ಈಜುಕೊಳದಲ್ಲಿ ತರಬೇತಿ ಪಡೆದ ವಿದ್ಯಾರ್ಥಿಗಳು ಭಾರತೀಯ ನೌಕಾಪಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗದಲ್ಲಿದ್ದು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಹೆಸರು ನೋಂದಾಯಿಸಿ
ಈಜು ಆರೋಗ್ಯಕ್ಕೆ ಉತ್ತಮವಾಗಿರುವುದರಿಂದ ಶಿಬಿರದಲ್ಲಿ ಪಾಲ್ಗೊಂಡು ಈಜು ಕಲಿಯುವ ಆಸಕ್ತರಿಗೆ ಇದು ಸುವರ್ಣಾವಕಾಶವಾಗಿದ್ದು, ಕೂಡಲೇ ತಮ್ಮ ಹೆಸರು ನೋಂದಾಯಿಸಿಕೊಳ್ಳಿ. ಮಾಹಿತಿಗಾಗಿ ತ್ರಿಶೂಲ್ 7899583697, ಸೀತಾರಾಮ 9743702470, ಶರ್ಮಿಳಾ 9741504834, ಶಿಶಿಲ್ 9108464327ಕ್ಕೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here