






ನೆಲ್ಯಾಡಿ: ಕಡಬ ತಾಲೂಕಿನ ಕೊಣಾಲು ಗ್ರಾಮದ ಕಡೆಂಬಿಲತ್ತಾಯ ಗುಡ್ಡೆ ಚಕ್ರವರ್ತಿ ಕೊಡಮಣಿತ್ತಾಯಿ ಮತ್ತು ಪರಿವಾರ ದೈವಗಳ 13ನೇ ವರ್ಷದ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವ ಮಾ.20 ಮತ್ತು 21ರಂದು ನಡೆಯಲಿದೆ.





ಮಾ.20ರಂದು ಕೆಮ್ಮಿಂಜೆ ಬ್ರಹ್ಮಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ಬಳ್ಳಕ್ಕುರಾಯರ ನೇತೃತ್ವದಲ್ಲಿ ಬೆಳಗ್ಗೆ 6ಕ್ಕೆ ಕಡೆಂಬಿಲ ನಾಗಬನದಲ್ಲಿ ನಾಗತಂಬಿಲ, 7 ರಿಂದ ಗಣಹೋಮ, ಕಲಶಪೂಜೆ, 10ಕ್ಕೆ ದೈವಗಳಿಗೆ ಕಲಶಾಭಿಷೇಕ, ತಂಬಿಲ, ಮಧ್ಯಾಹ್ನ 12ಕ್ಕೆ ಮಹಾಪೂಜೆ, 1 ಗಂಟೆಗೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6ಕ್ಕೆ ತೋರಣಮುಹೂರ್ತ, ಗ್ರಾಮಸ್ಥರಿಂದ ದೈವಗಳಿಗೆ ಪ್ರಾರ್ಥನೆ, ಎಣ್ಣೆತ್ತೋಡಿಯಿಂದ ಶಿರಾಡಿ ದೈವದ ಭಂಡಾರ ತರುವುದು, ಕಾಯರ್ತಡ್ಕದಿಂದ ಕಲ್ಕುಡ, ಕಲ್ಲುರ್ಟಿ, ಗುಳಿಗ ದೈವಗಳ ಭಂಡಾರ ತರುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9ಕ್ಕೆ ಅನ್ನಸಂತರ್ಪಣೆ, ನಂತರ ಚಕ್ರವರ್ತಿ ಕೊಡಮಣಿತ್ತಾಯಿ, ದೈವಂಕ್ಲು, ಮೈಸಂತಾಯ, ಕಡೆಂಬಿಲತ್ತಾಯ, ಪಂಜುರ್ಲಿ, ಶಿರಾಡಿದೈವ, ಕಲ್ಕುಡ, ಕಲ್ಲುರ್ಟಿ, ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ. ಮಾ.21ರಂದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಮಾ.೨೨ರಂದು ಮಧ್ಯಾಹ್ನ ಅಮ್ಮನವರ ಪೂಜೆ, ಭೈರವ ದೈವಕ್ಕೆ ಹರಕೆ ನಡೆಯಲಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷ ವಿಠಲ ರೈ ಕೊಣಾಲುಗುತ್ತು, ಬೈಲುವಾರು ಸಂಚಾಲಕರು ಹಾಗೂ ಆಡಳಿತ ಸಮಿತಿ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









