






ಉಪ್ಪಿನಂಗಡಿ: ಮಂಗಳೂರುನಲ್ಲಿ ಪ್ರಧಾನ ಕಛೇರಿ ಹೊಂದಿರುವ ಶ್ರೀರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯ ಉಪ್ಪಿನಂಗಡಿ ಶಾಖೆಯ ಗ್ರಾಹಕ-ಸಂಪರ್ಕ ಸಭೆ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜರಗಿತು.


ಸಂಘದ ಅಧ್ಯಕ್ಷ ಜೈರಾಜ್ ರೈ ಬಿ.ಕೆ.ಯವರು ಅಧ್ಯಕ್ಷತೆ ವಹಿಸಿ ಮಾತಾನಾಡಿ ಗ್ರಾಹಕರೊಂದಿಗೆ ಬಾಂದವ್ಯ ವೃದ್ಧಿಗಾಗಿ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಘವು 2030 ವರ್ಷಾಂತ್ಯಕ್ಕೆ 2000 ಕೋಟಿ ಒಟ್ಟು ವ್ಯವಹಾರ, 20ಕೋಟಿ ನಿವ್ವಳ ಲಾಭದೊಂದಿಗೆ 35 ರಿಂದ 40 ಶಾಖೆಗಳನ್ನು ಹಾಗೂ ಸ್ವಂತ ಕೇಂದ್ರ ಕಛೇರಿ ಕಟ್ಟಡವನ್ನು ಲೋಕಾರ್ಪಣೆ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದು ತಮ್ಮೆಲ್ಲರ ಸಹಕಾರದಿಂದ ಅದನ್ನು ಸಾಧಿಸುವೆವು ಎಂಬ ಭರವಸೆ ಇದೆ ಎಂದು ತಿಳಿಸಿದರು.



ಸಂಘದ ನಿರ್ದೇಶಕರು ಮತ್ತು ಶಾಖಾ ಉಸ್ತುವಾರಿ ನಿರ್ದೇಶಕ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿಯವರು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಾಖಾಸಲಹಾ ಸಮಿತಿ ಸದಸ್ಯ ಸುಧಾಕರ ಶೆಟ್ಟಿ, ಪ್ರಕಾಶ್ ಭಟ್, ಕಂಗೈ ವಿಶ್ವನಾಥ ಶೆಟ್ಟಿ, ಉದಯ್ ಕುಮಾರ್, ಕರುಣಾಕರ ಕುಮಾರ್ ಉಪಸ್ಥಿತರಿದ್ದರು. 6 ಮಂದಿ ಉತ್ತಮ ಗ್ರಾಹಕರನ್ನು ಗೌರವಿಸಲಾಯಿತು. ಶಾಖಾ ವ್ಯವಸ್ಥಾಪಕಿ ಮಿಸ್ರಿಯಾ ಪಿ.ಐ ಶಾಖಾ ವರದಿ ಮಂಡಿಸಿದರು. ಮಹಾ ಪ್ರಬಂಧಕ ಗಣೇಶ್ ಜಿ.ಕೆ ವಂದಿಸಿದರು. ಸಿಬ್ಬಂದಿ ಉಷಾ ಬಿ. ಪ್ರಾರ್ಥಿಸಿ, ವಿಧೀಶಾ ಕಾರ್ಯಕ್ರಮ ನಿರೂಪಿಸಿದರು.










