ರೋಟರಿ ಸೆಂಟ್ರಲ್ ನಿಂದ ವಿಶ್ವ ಮಹಿಳಾ ದಿನಾಚರಣೆ, ರೋಟರಿ ಡೇ ಆಚರಣೆ

0

ಪುತ್ತೂರು : ರೋಟರಿ ಕ್ಲಬ್ ಪುತ್ತೂರು ಸೆಂಟ್ರಲ್ ವತಿಯಿಂದ ರೋಟರಿ ದಿನಾಚರಣೆ, ವಿಶ್ವ ಮಹಿಳಾ ದಿನಾಚರಣೆ ಮತ್ತು ಚಾರ್ಟರ್ಡ್ ದಿನಾಚರಣೆ ಮಾ.10ರಂದು ಅಶ್ಮಿ ಸಭಾಭವನದಲ್ಲಿ ಆಚರಿಸಲಾಯಿತು.

 ಮುಖ್ಯ ಅತಿಥಿಯಾಗಿ ಆಗಮಿಸಿದ ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಪ್ರಮೀಳಾ ಪಿ ರಾವ್  ಅವರು ಉತ್ತಮ ಸಮಾಜ ನಿರ್ಮಾಣದ ಹಾದಿಯಲ್ಲಿ  ಮಹಿಳಾ ಸಬಲೀಕರಣದ ಅಗತ್ಯವನ್ನು ತಿಳಿಸಿದರು ಮತ್ತು ಸಂಘ ಸಂಸ್ಥೆಗಳಲ್ಲಿ ಒದಗಿ ಬರುವ ನಾಯಕತ್ವದ ಅವಕಾಶಗಳನ್ನು ಮಹಿಳೆಯರು ಬಳಸಿಕೊಂಡು ಸಮುದಾಯ ಸೇವಾ ಕ್ಷೇತ್ರಗಳಲ್ಲಿ ಉತ್ತಮ ಕೊಡುಗೆ ನೀಡಲು ಸಾಧ್ಯವಿದೆ ಎಂದರು. ಪುತ್ತೂರು ಸೆಂಟ್ರಲ್ ರೋಟರಿ ಮೂಲಕ ಸಲ್ಲಿಸುತ್ತಿರುವ ಸಮುದಾಯ ಸೇವೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ಶ್ಯಾಮಸುಂದರ್ ರೈ ಅವರು ಮಾತನಾಡಿ, ಕಳೆದು ಒಂದು ಶತಮಾನದಲ್ಲಿ ರೋಟರಿ ಸಂಸ್ಥೆಯು ತನ್ನ ಸಮುದಾಯ ಸೇವಾ ಚಟುವಟಿಕೆಗಳ ಮೂಲಕ, ಜಗತ್ತಿನ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ ಮತ್ತು ಸೇವೆಯೇ ಸರ್ವಸ್ವ ಎಂಬ ಮೌಲ್ಯವನ್ನು ಜನಮಾನಸದಲ್ಲಿ ಉದ್ದೀಪನ ಗೊಳಿಸಿದೆ ಎಂದರು.

 ಇದೇ ಸಂದರ್ಭದಲ್ಲಿ ಚಾರ್ಟರ್ ಡೇ ಸಲುವಾಗಿ ಕ್ಲಬ್ಬಿನ ಸ್ಥಾಪಕ ಸದಸ್ಯರ  ಕೊಡುಗೆ ಮತ್ತು ನಿರಂತರ ಸೇವೆಯನ್ನು ಗುರುತಿಸಿ ಅಭಿನಂದಿಸಲಾಯಿತು.

 ಸ್ಥಾಪಕ ಅಧ್ಯಕ್ಷ ಸಂತೋಷ್ ಶೆಟ್ಟಿಯವರು ಕ್ಲಬ್ಬಿನ ಚಾರ್ಟರ್ ಸದಸ್ಯರನ್ನು ಪರಿಚಯಿಸಿ ಅವರ ಸೇವಾ ಕೊಡುಗೆಗಳನ್ನು ಸ್ಮರಿಸಿಕೊಂಡರು. ಶ್ರೀಮತಿ ದೀಪಿಕಾ ವಸಂತ್ ಪ್ರಾರ್ಥಿಸಿದರು. ಕ್ಲಬ್ ಅಧ್ಯಕ್ಷ ಚಂದ್ರಹಾಸ ರೈ ಬಿ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಜಯಪ್ರಕಾಶ್ ಎಎಲ್ ವಂದಿಸಿದರು. ದಿನದ ಕಾರ್ಯಕ್ರಮಗಳ ಆತಿಥ್ಯವನ್ನು ವಸಂತ ನಾಯಕ್ ಅಜೇರು ಹಾಗೂ ಜಯಪ್ರಕಾಶ್ ಅಮೈ ವಹಿಸಿದ್ದರು.

LEAVE A REPLY

Please enter your comment!
Please enter your name here