






ಬಡಗನ್ನೂರು : ಪುತ್ತೂರು ಮಾತೃ ಸಂಸ್ಥೆ ದ್ವಾರಕಾ ಪ್ರತಿಷ್ಠಾನ ವತಿಯಿಂದ ನಡೆಸಲ್ಪಪಡುವ ಪಟ್ಟೆ ಶ್ರೀಕೃಷ್ಣ ವಿದ್ಯಾಸಂಸ್ಥೆಗಳಲ್ಲಿ “ಆಕಾಶಕ್ಕೆ ಏಣಿ” ಬೇಸಿಗೆ ಶಿಬಿರ ಮಾ. 27 ರಿಂದ 31 ತನಕ ಪೂರ್ವಾಹ್ನ 9:30ರಿಂದ ಸಂಜೆ 3:30ರ ವರೆಗೆ ಶ್ರೀ ಶಾಲಾ ಆವರಣದಲ್ಲಿ ನಡೆಯಲಿದೆ.


ಶಿಬಿರದಲ್ಲಿ ಯಕ್ಷಗಾನ ಮುಖವರ್ಣಿಕೆ, ನಾಯಕತ್ವ ತರಬೇತಿ,, ಪೇಪರ್ ಕ್ರಾಫ್ಟ್, ಪ್ಲೇಕಾರ್ಡ್ ತಯಾರಿ,, ಗ್ರಾಮಾಭಿಯಾನ, ಕಥೆ-ಕವಿತೆ ರಚನೆ, ಮಾದರಿ ತಯಾರಿ, ಸಾಮಾನ್ಯ ಜ್ಞಾನ, ವಿಷಯಗಳ ಬಗ್ಗೆ ಪ್ರತ್ಯೇಕ ವಿಷಯಗಳಿಗೆ ನುರಿತ ತಜ್ಞರಿಂದ ತರಬೇತಿಯನ್ನು ವಿದ್ಯಾರ್ಥಿಗಳಿಗೆ ಉಚಿತ ವಾಗಿ ನೀಡಲಾಗುವುದು. ಶಾಲಾ ವಿದ್ಯಾರ್ಥಿಗಳು ಮತ್ತು ಇತರ ಶಾಲಾ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.



ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: +91 9035204393










