ಪುತ್ತೂರು ಐಸಿರಿ ಬಂಟ ಮಹಿಳಾ ನೃತ್ಯ ತಂಡ ಉದ್ಘಾಟನೆ

0

ಪುತ್ತೂರು: ತಾಲೂಕು ಮಹಿಳಾ ಬಂಟರ ವಿಭಾಗದ ಐಸಿರಿ ಬಂಟ ಮಹಿಳಾ ನೃತ್ಯ ತಂಡ ಪುತ್ತೂರು ಇದರ ಉದ್ಘಾಟನೆಯು ಮಾ.17 ರಂದು ಪುತ್ತೂರು ಎಂ.ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು.

ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮತ್ತು ತಾಲೂಕು ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ನರಿಮೊಗರುರವರು ದೀಪ ಬೆಳಗಿಸಿ ಐಸಿರಿ ಬಂಟ ಮಹಿಳಾ ನೃತ್ಯ ತಂಡವನ್ನು ಉದ್ಘಾಟನೆಗೈದರು.

ಬಂಟರ ಸಂಘದ ಪ್ರಮುಖರಾದ ಬೂಡಿಯಾರ್ ರಾಧಾಕೃಷ್ಣ ರೈ, ‘ಸಹಕಾರರತ್ನ’ ದಂಬೆಕ್ಕಾನ ಸದಾಶಿವ ರೈ, ದಯಾನಂದ ರೈ ಮನವಳಿಕೆಗುತ್ತು, ಜೈರಾಜ್ ಭಂಡಾರಿ ಡಿಂಬ್ರಿ, ಸಾಜ ರಾಧಾಕೃಷ್ಣ ಆಳ್ವ, ಜಯಪ್ರಕಾಶ್ ರೈ ನೂಜಿಬೈಲು, ರಮೇಶ್ ರೈ ಡಿಂಬ್ರಿ, ರವಿಪ್ರಸಾದ್ ಶೆಟ್ಟಿ ಬನ್ನೂರು, ನಿತ್ಯಾನಂದ ಶೆಟ್ಟಿ ಮನವಳಿಕೆ, ಸಂತೋಷ್ ಶೆಟ್ಟಿ ಸಾಜ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಇಂದು ಶೇಖರ್ ಶೆಟ್ಟಿ, ಎಂ. ಆರ್.ಜಯಕುಮಾರ್ ರೈ ಮಿತ್ರಂಪಾಡಿ, ಯುವ ಬಂಟರ ಸಂಘದ ಅಧ್ಯಕ್ಷ ಭಾಗ್ಯೇಶ್ ರೈ ಕೆಯ್ಯೂರು ಹಾಗೂ ಮಹಿಳಾ ಬಂಟರ ವಿಭಾಗದ ಉಪಾಧ್ಯಕ್ಷರುಗಳು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ತಾಲೂಕು ಮಹಿಳಾ ಬಂಟರ ವಿಭಾಗದ ಪ್ರಧಾನ ಕಾರ‍್ಯದರ್ಶಿ ಕುಸುಮ ಪಿ.ಶೆಟ್ಟಿ ಸ್ವಾಗತಿಸಿ, ಕೋಶಾಽಕಾರಿ ಅರುಣಾ ಡಿ.ರೈ ವಂದಿಸಿದರು.

LEAVE A REPLY

Please enter your comment!
Please enter your name here