







ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ದಿಗೆ ಶಾಸಕ ಅಶೋಕ್ ರೈ ಅವರು 2.5 ಲಕ್ಷ ರೂ. ದೇಣಿಗೆಯನ್ನು ನೀಡಿದ್ದಾರೆ. ಇದೇ ದೇವಸ್ಥಾನವನ್ನು ಜೀರ್ಣೋದ್ದಾರಗೊಳಿಸುವಲ್ಲಿ ಈ ಹಿಂದೆಯೂ ಶಾಸಕ ಅಶೋಕ್ ರೈ ನೆರವು ನೀಡಿದ್ದರು.


ಈ ಹಿಂದೆ ವಾಗ್ದಾನ ನೀಡಿದಂತೆ ಶಾಸಕರು ನೆರವನ್ನು ಹಸ್ತಂತರಿಸಿದರು. ಸಮಿತಿ ಸದಸ್ಯರಾದ ದುರ್ಗಾಪ್ರಸಾದ್ ಭಟ್ ಸ್ವೀಕರಿಸಿದರು. ಪ್ರೇಮಲತಾ ಉಪಸ್ಥಿತರಿದ್ದರು.













