







ಪುತ್ತೂರು: ಮಂಜ ಅನ್ಸ್ವಾರಿಯ ಜಮಾಅತ್ ವತಿಯಿಂದ ಇಬ್ಬರು ಮದ್ರಸ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.



ಪವಿತ್ರ ರಂಝಾನ್ ತಿಂಗಳಲ್ಲಿ ಪ್ರತಿದಿನ ರಾತ್ರಿ ನಮಾಜ್ಗೆ ಹಾಜರಾದ ಇಬ್ಬರು ವಿದ್ಯಾರ್ಥಿಗಳು ಹಾಗೂ ಶಾಲಾ ರಜಾ ದಿನಗಳಲ್ಲಿಯೂ ಪವಿತ್ರ ಖುರ್ಆನ್ ಮಸೀದಿಯಲ್ಲೇ ಕುಳಿತು ಸಂಪೂರ್ಣ ಪಾರಾಯಣ ಮಾಡಿದ ಒಬ್ಬ ವಿದ್ಯಾರ್ಥಿಗೆ ಈದ್ ದಿನದಂದು ಜಮಾಅತ್ ವತಿಯಿಂದ ಕ್ಯಾಶ್ ಅವಾರ್ಡ್ ನೀಡಿ ಗೌರವಿಸಲಾಯಿತು. ಜಮಾಅತ್ ಅಧ್ಯಕ್ಷ ಅಬ್ದುಲ್ ಹಕೀಮ್ ನೇತೃತ್ವದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಮಿತಿಯ ಸದಸ್ಯರು ಮತ್ತು ಜಮಾಅತ್ ಪ್ರತಿನಿಧಿಗಳು ಉಪಸ್ಥಿತರಿದ್ದರು. ಜಮಾಅತ್ ಖತೀಬ್ ಹನೀಫ್ ಅಸ್ಲಮಿ ದುವಾಶೀರ್ವಚನ ನೀಡಿ ಈದ್ ಸಂದೇಶ ನೀಡಿದರು. ಸಹ ಅಧ್ಯಾಪಕ ಅಬ್ದುಲ್ ಮಜೀದ್ ಇಮ್ದಾದಿ ಉಪಸ್ಥಿತರಿದ್ದರು.













