







ಪುತ್ತೂರು: ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಸಂಪ್ಯದಲ್ಲಿರುವ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಕಾಲೇಜಿನಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳ ಕೋರ್ಸ್ಗಳು ಲಭ್ಯವಿದ್ದು, Sri Chaitanya Institution ಸಹಯೋಗದೊಂದಿಗೆ Infinity Learn ಮುಖಾಂತರ CET, NEET ಹಾಗೂ IIT-JEE ತರಭೇತಿ ನೀಡಲಾಗುತ್ತಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ CA Foundation ತರಬೇತಿಯೊಂದಿಗೆ UPSC ತಯಾರಿಗೂ ವಿಶೇಷ ಮಾರ್ಗದರ್ಶನ ಒದಗಿಸಲಾಗುತ್ತಿದೆ.


ಅಕ್ಷಯ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ವಹಿಸಲ್ಪಡುವ ಈ ಸಂಸ್ಥೆ, ಶೈಕ್ಷಣಿಕ ಸಾಧನೆ, ಸಾಂಸ್ಕೃತಿಕ ಚಟುವಟಿಕೆಗಳು, ವ್ಯವಹಾರಿಕ ಹಾಗೂ ತಾಂತ್ರಿಕ ಹಾದಿಯಲ್ಲಿ ವಿದ್ಯಾರ್ಥಿಗಳನ್ನು ಮುನ್ನಡೆಸುವಲ್ಲಿ ಪ್ರಮುಖ ಸ್ಥಾನ ಪಡೆದಿದೆ. 2019ರಲ್ಲಿ ಸ್ಥಾಪಿತವಾದ ಈ ಸಂಸ್ಥೆ, ಉತ್ತಮ ಫಲಿತಾಂಶಗಳ ಮೂಲಕ ಪ್ರಾಂತ್ಯದಲ್ಲಿ ತನ್ನದೇ ಆದ ಗುರುತನ್ನು ನಿರ್ಮಿಸಿಕೊಂಡಿದೆ.



ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷ ತರಬೇತಿ ಒದಗಿಸಲಾಗುತ್ತಿದೆ. ಅನುಭವಸಂಪನ್ನ ಶಿಕ್ಷಕರಿಂದ ಪಠ್ಯಬೋಧನೆ, ಸ್ಪರ್ಧಾತ್ಮಕ ಮನೋಭಾವ ಬೆಳವಣಿಗೆ, ಸುಧಾರಿತ ಅಧ್ಯಯನ ವಿಧಾನಗಳ ಮೂಲಕ ವಿದ್ಯಾರ್ಥಿಗಳನ್ನು ಉತ್ತಮ ಸಾಧನೆಗೆ ಪ್ರೇರೇಪಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಸಹಾಯಕವಾಗುವಂತೆ ಕಾಲೇಜು ವತಿಯಿಂದ ಹಲವಾರು ಉಚಿತ ಕೋರ್ಸ್ಗಳು ಪ್ರಾರಂಭಗೊಂಡಿವೆ.
ಉಚಿತ CET ಕ್ರ್ಯಾಶ್ ಕೋರ್ಸ್:
ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಮಾರ್ಚ್ 26ರಿಂದ ಉಚಿತ CET ಕ್ರ್ಯಾಶ್ ಕೋರ್ಸ್ ಹಮ್ಮಿಕೊಳ್ಳಲಾಗಿದೆ. ಪ್ರತೀ ಬ್ಯಾಚ್ನಲ್ಲಿ ಕೇವಲ 30 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ. ಈ ತರಬೇತಿಯಲ್ಲಿ ಶಾರ್ಟ್ಕಟ್ ತಂತ್ರಗಳು, ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳ ಚರ್ಚೆ, ಅನುಭವಸಂಪನ್ನ ಶಿಕ್ಷಕರಿಂದ ತರಬೇತಿ, ವೈಯಕ್ತಿಕ ಗಮನ, ಮಾಕ್ ಟೆಸ್ಟ್ ಮತ್ತು ಪ್ರದರ್ಶನ ವಿಶ್ಲೇಷಣೆ, ಸಮಯ ನಿರ್ವಹಣಾ ತಂತ್ರಗಳು ಕಲಿಸಲಾಗುತ್ತದೆ.
ಉಚಿತ Spoken English ತರಬೇತಿ:
ವಿದ್ಯಾರ್ಥಿಗಳ ಇಂಗ್ಲಿಷ್ ಭಾಷಾ ಕೌಶಲ್ಯವನ್ನು ವೃದ್ಧಿಸಲು ಏಪ್ರಿಲ್ 15, 2026ರಿಂದ ಉಚಿತ Spoken English ತರಬೇತಿ ಆರಂಭವಾಗಲಿದೆ. ಈ ತರಬೇತಿಯಲ್ಲಿ ಇಂಗ್ಲಿಷ್ ಭಾಷಾಭಿವೃದ್ಧಿ, ಸಾರ್ವಜನಿಕ ಭಾಷಣ ಕೌಶಲ್ಯ, ದೈನಂದಿನ ಸಂಭಾಷಣಾಭ್ಯಾಸ, ಪದಜ್ಞಾನ ವೃದ್ಧಿ ಮತ್ತು ಆತ್ಮವಿಶ್ವಾಸ ಹೆಚ್ಚಿಸುವ ಚಟುವಟಿಕೆಗಳನ್ನು ಒಳಗೊಂಡಿದೆ.
ಬ್ರಿಡ್ಜ್ ಕೋರ್ಸ್:
9ನೇ ತರಗತಿ,SSLC ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್ ಆಯೋಜಿಸಲಾಗಿದೆ. ಈ ಕೋರ್ಸ್ನಲ್ಲಿ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ಮೂಲಭೂತ ತರಗತಿಗಳು, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ಪೂರ್ವಭಾವಿ ತಯಾರಿ, ಸ್ಪರ್ಧಾತ್ಮಕ ಪರೀಕ್ಷೆಗಳ ಅರಿವು ಮತ್ತು ವೃತ್ತಿ ಮಾರ್ಗದರ್ಶನ ನೀಡಲಾಗುತ್ತದೆ. ಈ ಕೋರ್ಸ್ ಏಪ್ರಿಲ್ 15, 2026ರಿಂದ ಆರಂಭಗೊಳ್ಳಲಿದೆ.
ಈ ಎಲ್ಲಾ ತರಬೇತಿಗಳು ಅಕ್ಷಯ ಕಾಲೇಜು, ಸಂಪ್ಯ, ಪುತ್ತೂರು ಇಲ್ಲಿ ನಡೆಯಲಿದ್ದು, ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕಾಲೇಜು ಆಡಳಿತ ಮಂಡಳಿ ವಿನಂತಿಸಿದೆ. ಹೆಚ್ಚಿನ ಮಾಹಿತಿಗಾಗಿ 08251-230030, +91 7975719385, +91 8088381678 ನಂಬರಿಗೆ ಸಂಪರ್ಕಿಸಬಹುದಾಗಿದೆ.
ಸಾಧನೆಗೈಯ್ದ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ..

ವೃತ್ತಿಪರ ಶಿಕ್ಷಣದೊಂದಿಗೆ ಆರಂಭಗೊಂಡ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆ ಇದೀಗ ಪದವಿ ಪೂರ್ವ ಶಿಕ್ಷಣ ಸಂಸ್ಥೆಯನ್ನು ಪರಿಚಯಿಸಿದೆ. ಈ ಶಿಕ್ಷಣ ಸಂಸ್ಥೆ ಆರಂಭಗೊಂಡ ಬಳಿಕ ಪದವಿಯಲ್ಲಿ ಅನೇಕ ರ್ಯಾಂಕ್ಗಳನ್ನು ಮುಡಿಗೇರಿಸಿಕೊಂಡಿದೆ. ಕೇವಲ ರ್ಯಾಂಕ್ ಮಾತ್ರವಲ್ಲ, ನಮ್ಮ ಶಿಕ್ಷಣ ಸಂಸ್ಥೆ ಪಠ್ಯೇತರ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ರಾಷ್ಟ್ರೀಯ ಹಾಗೂ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮೆರೆದಿದೆ. ಎಸೆಸ್ಸೆಲ್ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮುಂದಿನ ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಅಕ್ಷಯ ಸಂಸ್ಥೆ ಅಕ್ಷಯ ಪಾತ್ರೆಯಾಗಿ ಪರಿಣಮಿಸಲಿದೆ. ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದುಕೊಂಡವರಿಗೆ ಹಾಗೂ ವಿವಿಧ ರಂಗಗಳಲ್ಲಿ ಉತ್ತಮ ಸಾಧನೆಗೈಯ್ದವರಿಗೆ ಅಕ್ಷಯ ಸಂಸ್ಥೆ ಶುಲ್ಕದಲ್ಲಿ ವಿನಾಯಿತಿ ನೀಡಲಿದೆ.
-ಜಯಂತ್ ನಡುಬೈಲು, ಅಧ್ಯಕ್ಷರು, ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳು










