ಪ್ರಸಾದ ದಂತ ಚಿಕಿತ್ಸಾಲಯ, ಎಂಡೋಡಾಂಟಿಕ್ ಸೆಂಟರ್ ನ ಬೆಳ್ಳಿಹಬ್ಬದ ಪ್ರಯುಕ್ತ ಉಚಿತ ದಂತ ತಪಾಸಣೆ, ಚಿಕಿತ್ಸಾ ಶಿಬಿರ

0

ಪುತ್ತೂರು: ಕಲ್ಲಾರೆ ಕೃಷ್ಣ ಆರ್ಕೇಡ್ ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಸಾದ ದಂತ ಚಿಕಿತ್ಸಾಲಯ ಆಂಡ್ ಎಂಡೋಡಾಂಟಿಕ್ ಸೆಂಟರ್ ನ ಬೆಳ್ಳಿಹಬ್ಬದ ಪ್ರಯುಕ್ತ ಲೋಕವಿಕಾಸ ಪ್ರತಿಷ್ಠಾನದ ಸಹಯೋಗದೊಂದಿಗೆ ಮಾ.22 ರಂದು ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ಬೆಳಿಗ್ಗೆಯಿಂದ ಅಪರಾಹ್ನದವರೆಗೆ ಪ್ರಸಾದ ದಂತ ಚಿಕಿತ್ಸಾಲಯದಲ್ಲಿ ಜರಗಿತು.

ಚಿಕಿತ್ಸಾಲಯದ ಮುಖ್ಯಸ್ಥ ಡಾ.ಕೃಷ್ಣಪ್ರಸಾದ್ ರವರ ಹೆತ್ತವರಾದ ಎಸ್.ಜಿ ಕೃಷ್ಣ ದಂಪತಿ ಬೆಳ್ಳಿ ಹಬ್ಬದ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಶಿಬಿರದಲ್ಲಿ ಸೂಕ್ತ ಸಲಹೆ, ಟೆಂಪರರಿ ಫಿಲ್ಲಿಂಗ್, ಎಕ್ಸ್ ರೇ, ಹಲ್ಲು ಕೀಳುವುದು, ಹಲ್ಲು ಶುಚಿಗೊಳಿಸುವುದು ಮಾಡಲಾಯಿತು. ಸುಮಾರು 75 ಮಂದಿ ಫಲಾನುಭವಿಗಳು ಈ ಶಿಬಿರದಲ್ಲಿ ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು. ಲೋಕವಿಕಾಸ ಪ್ರತಿಷ್ಠಾನದ ಅಧ್ಯಕ್ಷ ಜಯರಾಮ ಆಚಾರ್, ನಿರ್ದೇಶಕ ಡಾ.ಹರ್ಷಪ್ರಸಾದ್ ಎಲ್ ಸಹಿತ ಹಲವರು ಉಪಸ್ಥಿತರಿದ್ದರು. ಸಂಸ್ಥೆಯ ಡಾ.ಕೃಷ್ಣಪ್ರಸಾದ್ ಎಲ್ ಸ್ವಾಗತಿಸಿ, ಡಾ.ಅಮೃತಾ ಕೆ.ಪ್ರಸಾದ್ ವಂದಿಸಿದರು. ಸಂಸ್ಥೆಯ ಸಿಬ್ಬಂದಿ ಸಹಕರಿಸಿದರು.

LEAVE A REPLY

Please enter your comment!
Please enter your name here