






ಪುತ್ತೂರು: ಪಿಳಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮಂಗಳೂರು ಹಾಗೂ ಶೆಲ್ ನೆಕ್ಸ್ಪ್ಲೋರರ್ಸ್ ಸಹಯೋಗದೊಂದಿಗೆ ಆಯೋಜಿಸಲಾದ ವಿಜ್ಞಾನ ಮಾದರಿಗಳ ಪ್ರದರ್ಶನಕ್ಕೆ ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಾದ ಭುವನ್ ಮತ್ತು ಸನಿಹ ರೈರವರು “ಫೀಲ್ಡ್ ಶೀಲ್ಡ್ ಫೈರ್ ರೋಬೋಟ್” ಎಂಬ ವಿಜ್ಞಾನ ಮಾದರಿಯನ್ನು ಪ್ರದರ್ಶಿಸಿ ಉತ್ತಮ ಪ್ರಶಂಸೆ ಪಡೆದಿದ್ದಾರೆ. ಇವರಿಗೆ ಶಾಲಾ ವಿಜ್ಞಾನ ಸಹಶಿಕ್ಷಕಿ ಗೀತಾ ಲೋಬೋ ಮತ್ತು ರೀಟಾ ಮಸ್ಕರೇನಸ್ ಮಾರ್ಗದರ್ಶನ ನೀಡಿದ್ದಾರೆ.












