ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯ ಮೂವರು ವಿದ್ಯಾರ್ಥಿಗಳು ಇನ್‌ಸ್ಪೈಯರ್ ಅವಾರ್ಡ್‌ಗೆ ಆಯ್ಕೆ

0

ಪುತ್ತೂರು ತಾಲೂಕಿನಲ್ಲಿ ಒಂದೇ ಶಾಲೆಯಿಂದ ಗರೀಷ್ಠ ವಿದ್ಯಾರ್ಥಿಗಳು ಆಯ್ಕೆಯಾದ ಶಾಲೆ

ಪುತ್ತೂರು: ವಿದ್ಯಾರ್ಥಿಗಳ ಅನ್ವೇಷಣಾ ಸಾಮರ್ಥ್ಯವನ್ನು ಗುರುತಿಸುವ ಸಲುವಾಗಿ ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ನಡೆಸಲ್ಪಡುವ ಇನ್ಸ್ಪೈರ್ ಅವಾರ್ಡ್ ಮಾನಕ್ ಪ್ರಶಸ್ತಿ ೨೦೨೫-೨೬ ನೇ ಸಾಲಿನಲ್ಲಿ ಸರಕಾರಿ ಪ್ರೌಢಶಾಲೆ ಬೆಟ್ಟಂಪಾಡಿ ವಿದ್ಯಾಸಂಸ್ಥೆಯ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ತಾಲೂಕಿನಲ್ಲಿ ಒಂದೇ ಶಾಲೆಯಿಂದ ಅತೀ ಹೆಚ್ಚು ವಿದ್ಯಾರ್ಥಿಗಳು ಇನ್ಸ್ಪೈರ್ ಆವಾರ್ಡ್‌ಗೆ ಆಯ್ಕೆಯಾದ ಕೀತೀಗೆ ಪಾತ್ರವಾಗಿದೆ.

9ನೇ ತರಗತಿಯ ವಿದ್ಯಾರ್ಥಿ ಗಗನ್ (ಮಾಧವ ಮತ್ತು ಸೀತಾ ಮುಂಡೂರು ದಂಪತಿ ಪುತ್ರ ) HAPTI LINK XR TOUCH ಯೋಜನೆ , 10ನೇ ತರಗತಿ ವಿದ್ಯಾರ್ಥಿನಿ ಸ್ವಾತಿ ಡಿ (ಉದಯ ಮತ್ತು ಪ್ರವೀಣ ಕುಮಾರಿ ದೂಮಡ್ಕ ದಂಪತಿ ಪುತ್ರಿ)ALSIMA AI POWERED PROTECTOR ಯೋಜನೆ ಹಾಗೂ 8ನೇ ತರಗತಿ ವಿದ್ಯಾರ್ಥಿನಿ ವೀಕ್ಷ (ಬಾಲಕೃಷ್ಣ ಮತ್ತು ಸವಿತಾ ಕಕ್ಕೂರು ದಂಪತಿ ಪುತ್ರಿ) TEMPOLINK SMART ಎಂಬ ವಿಜ್ಞಾನ ಯೋಜನೆಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ತಾವು ಮಂಡಿಸಿದ ವಿಜ್ಞಾನ ಯೋಜನೆಗೆ ಮೂವರು ವಿದ್ಯಾರ್ಥಿಗಳು ತಲಾ ರೂ.10,000 ನಗದು ಪುರಸ್ಕಾರವನ್ನು ಪಡೆದಿರುತ್ತಾರೆ. ಮುಖ್ಯಶಿಕ್ಷಕ ವಿಜಯ ಕುಮಾರ್ ಎಂ. ಮಾರ್ಗದರ್ಶನದಲ್ಲಿ ವಿಜ್ಞಾನ ಶಿಕ್ಷಕಿ ಸಿಂಧು ವಿ.ಕೆ ಅವರು ವಿದ್ಯಾರ್ಥಿಗಳಿಗೆಮಾರ್ಗದರ್ಶನ ನೀಡಿರುತ್ತಾರೆ. ವಿದ್ಯಾರ್ಥಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಹಾಗೂ ಶಾಲಾ ಮುಖ್ಯಗುರುಗಳು ಅಭಿನಂದಿಸಿರುತ್ತಾರೆ.

LEAVE A REPLY

Please enter your comment!
Please enter your name here