







ಪುತ್ತೂರು: ವಿಕಲಚೇತನರ ಮಾಸಾಸನ ಪಿಂಚಣಿ ಪಡೆಯುವ ಬಿ.ಪಿ.ಎಲ್ ಕಾರ್ಡ್ ಹೊಂದಿದ ವಿಶೇಷ ಚೇತನರ ಆದಾಯ ಮಿತಿಯನ್ನು ರೂ.32,000 ದಿಂದ 1.20,000ಕ್ಕೆ ಹೆಚ್ಚಳ ಮಾಡಲು ಪುತ್ತೂರು ತಾಲೂಕು ಪಂಚಾಯತ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಕಲಚೇತನರ ಸೇವಾ ಕೇಂದ್ರ ಕಚೇರಿ ವತಿಯಿಂದ ಸಮಸ್ತ ವಿಕಲಚೇತನರ ಪರವಾಗಿ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈರವರಿಗೆ ಮನವಿ ಸಲ್ಲಿಸಲಾಯಿತು.


ಪುತ್ತೂರು ತಾಲೂಕು ಪಂಚಾಯತ್ ವಿಶೇಷ ಚೇತನರ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್, ಪುತ್ತೂರು ನಗರಸಭೆಯ ನಗರ ಪುನರ್ ವಸತಿ ಕಾರ್ಯಕರ್ತರಾದ ಭರತ್ ಕೆ. ಕೆದಂಬಾಡಿ, ಮಾಜಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರಾದ ಲೋಕೇಶ್ ಕೆ. ಉಪಸ್ಥಿತರಿದ್ದರು.













