







ರಾಮಕುಂಜ: ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ(ಡಿಎಸ್ಟಿ)ಯ ಜಿಲ್ಲಾ ಮಟ್ಟದ ಇನ್ಸ್ಪೈರ್ ಅವಾರ್ಡ್ಗೆ ರಾಮಕುಂಜ ಶ್ರೀ ರಾಮಕುಂಜೇಶ್ವರ ಸಂಸ್ಕೃತ ಹಿ.ಪ್ರಾ.ಶಾಲಾ ೬ನೇ ತರಗತಿ ವಿದ್ಯಾರ್ಥಿ ಹೃತ್ವಿಕ್ ಬಿ.ಆಯ್ಕೆಯಾಗಿದ್ದಾರೆ.


ಇವರು ಸಿದ್ಧಪಡಿಸಲಿರುವ ಕಾರ್ಶೆಡ್ ಆಟೋಮೆಟಿಕ್ ಡೋರ್ ಓಪನ್ ಸೆನ್ಸಾರ್ ಸಿಸ್ಟಮ್ ಇನ್ಸ್ಪೈರ್ ಅವಾರ್ಡ್ಗೆ ಆಯ್ಕೆಯಾಗಿದೆ. ಶಾಲಾ ಮುಖ್ಯಶಿಕ್ಷಕಿ ಸುಶೀಲ ಹಾಗೂ ವಿಜ್ಞಾನ ಶಿಕ್ಷಕಿ ನಿರ್ಮಲಾದೇವಿ ಮಾರ್ಗದರ್ಶನ ನೀಡಿದ್ದರು. ಈತ ರಾಮಕುಂಜ ಗ್ರಾಮದ ಬಾರಿಂಜ ನಿವಾಸಿ, ಸುದ್ದಿಬಿಡುಗಡೆ ಪತ್ರಿಕೆ ವರದಿಗಾರ ಹರೀಶ್ ಹಾಗೂ ಚಿತ್ರಾವತಿ ದಂಪತಿ ಪುತ್ರ.













