







ಪುತ್ತೂರು: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಕಲಾಬಾಗಿಲು ಇಲ್ಲಿ HVP ಹ್ಯೂಮಸ್ ವ್ಯಾಪಿಲೋಮಾ ವೈರಸ್ ಇದರ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.


ಈ ಕಾರ್ಯಕ್ರಮದಲ್ಲಿ ಪುಂಜಾಲಕಟ್ಟೆಯ ವೈದ್ಯಾಧಿಕಾರಿಯಾದ ರಿತೇಶ್ ಶೆಟ್ಟಿ, ಸಿಸ್ಟರ್ ಸಂಧ್ಯಾ, ಸಿಸ್ಟರ್ ಶಮೀಲಾ ಇವರು 14 ವರುಷದ ಹೆಣ್ಣು ಮಕ್ಕಳಿಗೆ ಈ ಕಾರ್ಯಾಗಾರ ಆಯೋಜಿಸಿ ಹೆಚ್.ವಿ.ಪಿ ಲಸಿಕೆಯು ಗರ್ಭಕೋಶದ ಕ್ಯಾನ್ಸರ್ ಬರದಾಗೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಬಗ್ಗೆ ಸವಿವಿರವಾದ ಮಾಹಿತಿ ನೀಡಿದರು.



ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್, ಹೈಸ್ಕೂಲ್ ಮುಖ್ಯ ಶಿಕ್ಷಕಿ ಜಯಶ್ರೀ ಸಾಲ್ಯಾನ್ ಪೋಷಕರು ಭಾಗವಹಿಸಿದ್ದರು. ಪ್ರಾಥಮಿಕ ಮುಖ್ಯ ಶಿಕ್ಷಕಿ ಎಲ್ಸಿ ಲಸ್ರಾದೊ ಕಾರ್ಯಕ್ರಮದಲ್ಲಿ ಸ್ವಾಗತಿಸಿ ವಂದಿಸಿದರು.










