ಕಾಣಿಯೂರು ಪ್ರಗತಿಯಲ್ಲಿ ರಾಜ್ಯ ಮಟ್ಟದ ಮಕ್ಕಳ ರಂಗ ಬಣ್ಣ ಶಿಬಿರ ‘ಪ್ರಗತಿ ಸಂಭ್ರಮ’ಕ್ಕೆ ಅದ್ದೂರಿ ಚಾಲನೆ

0

ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಅತಿಥ್ಯದಲ್ಲಿ ಬೆಳ್ಳಾರೆ ಕಲಾಮಂದಿರದ ಸಹಕಾರದೊಂದಿಗೆ ಏ 3ರಿಂದ ಏ 9ರವರೆಗೆ ನಡೆಯಲಿರುವ ಮಕ್ಕಳ ರಾಜ್ಯಮಟ್ಟದ ರಂಗ ಬಣ್ಣ ಶಿಬಿರ ಪ್ರಗತಿ ಸಂಭ್ರಮಕ್ಕೆ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಎ.3ರಂದು ಚಾಲನೆ ನೀಡಲಾಯಿತು. ಕಾಣಿಯೂರು ಕುಮಾರ್ ಕ್ಲಿನಿಕ್ ನ ವೈದ್ಯಾಧಿಕಾರಿ ಡಾ.ಉದಯ ಕುಮಾರ್ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭಹಾರೈಸಿದರು.

ಉಜಿರೆ ರುಡ್ ಸೆಟ್ ಆಸರೆ ಸಂಘದ ಸ್ಥಾಪಕಾಧ್ಯಕ್ಷ ಸುನಿಲ್ ರೈ ಪೆರುವಾಜೆ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ನಿರ್ದೇಶಕ, ಚಲನಚಿತ್ರ ನಿರ್ದೇಶಕ ನವೀನ್ ಸಾಣೆಹಳ್ಳಿ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ, ಪ್ರಗತಿ ವಿದ್ಯಾಸಂಸ್ಥೆಯ ಆಡಳಿತ ಸಮಿತಿ ಉಪಾಧ್ಯಕ್ಷ ವಿಶ್ವನಾಥ ರೈ ಮಾದೋಡಿ, ಸದಸ್ಯರಾದ ಉದಯ ರೈ ಮಾದೋಡಿ, ನಾಗೇಶ್ ರೈ ಮಾಳ, ಪ್ರಗತಿ ವಿದ್ಯಾಸಂಸ್ಥೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಿವೀಶ್ ಮುರುಳ್ಯ, ಕಾಣಿಯೂರು ಶ್ರೀ ಲಕ್ಷ್ಮೀನರಸಿಂಹ ಯುವಕ ಮಂಡಲದ ಅಧ್ಯಕ್ಷ ರಾಜೇಶ್ ಮೀಜೆ, ಆರ್ಯಭಟ ಪ್ರಶಸ್ತಿ ಪುರಸ್ಕೃತ ಕಲಾಮಂದಿರ್ ಬೆಳ್ಳಾರೆಯ ಪ್ರಮೋದ್ ಕುಮಾರ್ ರೈ ಉಪಸ್ಥಿತರಿದ್ದರು. ಶಿಬಿರದ ನಿರ್ದೇಶಕ ಗಿರಿಶಂಕರ ಸುಲಾಯ ಪ್ರಾಸ್ತಾವಿಕ ಮಾತನಾಡಿದರು. ಆಂಗ್ಲಮಾಧ್ಯಮ ವಿಭಾಗದ ಮುಖ್ಯಗುರು ನಾರಾಯಣ್ ಭಟ್ ಸ್ವಾಗತಿಸಿ, ಆಡಳಿತಾಧಿಕಾರಿ ವಸಂತ ರೈ ಕಾರ್ಕಳ ವಂದಿಸಿದರು. ಕನ್ನಡ ಮಾಧ್ಯಮ ಮುಖ್ಯಸ್ಥೆ ವಿನಯ ವಿ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ ನವೀನ್ ಸಾಣೆಹಳ್ಳಿ ಅವರಿಗೆ ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಅವರು ವೀಳ್ಯದೆಲೆ, ಶಿಬಿರದ ಲಾಂಛನ ಹಸ್ತಾಂತರ ಮಾಡಿದರು.

ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳು ಭಾಗಿ
ಜೂನಿಯರ್ ಶಂಕರ್ ಗಿಲಿ ಗಿಲಿ ಮ್ಯಾಜಿಕ್, ವಂದನಾ ರೈ ಕಾರ್ಕಳ, ವಿದ್ದು ಉಚ್ಚಿಲ ನೀನಾಸಂ, ಕ್ರಿಸ್ಟೋಫರ್ ನೀನಾಸಂ ಸೇರಿದಂತೆ ಶಿಬಿರದಲ್ಲಿ ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಮ್ಯಾಜಿಕ್- ಮಾಯಾಲೋಕ, ಗಾಂಧಾರಿ ವಿದ್ಯೆ, ಮಾತನಾಡುವ ಗೊಂಬೆ, ಮಿಮಿಕ್ರಿ, ಸಂಮೋಹಿನಿ ಶಾಸ್ತ್ರ, ಬಾನೆತ್ತರದ ಗಾಳಿಪಟ, ಅಭಿನಯ ಗೀತೆ, ವರ್ಲಿ ಚಿತ್ರಗಳು, ನೆನಪಿನ ಆಟಗಳು, ಸುಲಭ ಗಣಿತ ಅಲ್ಲದೆ ಇನ್ನು ಹಲವಾರು ತರಬೇತಿಗಳು ನಡೆಯಲಿದೆ.

LEAVE A REPLY

Please enter your comment!
Please enter your name here