







ಪುತ್ತೂರು: ಪುತ್ತೂರು ಮಾಯ್ ದೆ ದೇವುಸ್ ಚರ್ಚ್ ನಲ್ಲಿ ಮೌಂಡಿ (ಪವಿತ್ರ) ಗುರುವಾರದ ಆಚರಣೆ ಎ.2ರಂದು ಭಕ್ತಿಭಾವದಿಂದ ನೆರವೇರಿತು.



ಈ ವಿಶೇಷ ಧರ್ಮಾಚರಣೆಯಲ್ಲಿ ಮುಖ್ಯ ಗುರುಗಳಾಗಿ ಮಾಯ್ ದೆ ದೇವುಸ್ ಚರ್ಚ್ ನ ಸಹಾಯಕ ಧರ್ಮಗುರು ವಂ| ಮರ್ವಿನ್ ಪ್ರವೀಣ್ ಲೋಬೊ ಬಲಿಪೂಜೆ ನೆರವೇರಿಸಿದರು.
ವಂದನೀಯ ಅಶೋಕ್ ರಾಯನ್ ಕ್ರಾಸ್ತಾರವರು ಧರ್ಮೋಪದೇಶ ನೀಡಿ ದಿನದ ಮಹತ್ವವನ್ನು ವಿವರಿಸಿ ಏಸುಕ್ರಿಸ್ತರು ತನ್ನ ಶಿಷ್ಯರ ಪಾದಗಳನ್ನು ಶುದ್ಧೀಕರಿಸುವ ಮುಖಾಂತರ ಎಲ್ಲಾ ಪ್ರಜೆಗಳಿಗೆ ಇತರರ ಪಾದಗಳನ್ನು ತೊಳೆಯಲು ತಿಳಿಸಿದರು. ಪಾದಗಳನ್ನು ತೊಳೆಯುವುದು ಅಂದರೆ ಇತರರ ಸೇವೆ ಮಾಡುವುದು. ಇತರರ ಅಗತ್ಯಗಳಿಗೆ ನಾವು ಸ್ಪಂದಿಸುವುದು ಹಾಗೆಯೇ ದಯೆಯನ್ನು ತೋರಿಸುವುದು.
ಏಸುಕ್ರಿಸ್ತರು ತನ್ನ ಶಿಷ್ಯರೊಂದಿಗೆ ಕೊನೆಯ ಭೋಜನವನ್ನು ಮಾಡಿದರು ಈ ಭೋಜನದಲ್ಲಿ ರೊಟ್ಟಿಯನ್ನು ಹಾಗೆಯೇ ದ್ರಾಕ್ಷಾ ರಸವನ್ನು ಹಂಚಿದರು ಈ ಮೂಲಕ ಯೇಸುಕ್ರಿಸ್ತರು ತಮ್ಮ ಜೀವನವನ್ನು ಪರರೊಂದಿಗೆ ಹಂಚಿಕೊಳ್ಳಲು ಕರೆಕೊಟ್ಟರು ನಾವು ಎಲ್ಲರ ಪ್ರೀತಿಯನ್ನು ಮಾಡಿ ಬದುಕಬೇಕು ಎಂದು ಹೇಳಿದರು.




ಚರ್ಚ್ ನ ಪ್ರಧಾನ ಧರ್ಮ ಗುರು ವಂ| ಲಾರೆನ್ಸ್ ಮಸ್ಕರೆನಸ್ ರವರು ಶಿಷ್ಯರ ಪಾದ ತೊಳೆಯುವ ಆಚರಣೆ ನೆರವೇರಿಸಿದರು. ವಂ| ಮ್ಯಾಕ್ಸಿಂ ಡಿಸೋಜಾರವರು ಬಲಿಪೂಜೆಯಲ್ಲಿ ಭಾಗವಹಿಸಿದರು. ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ರೋಷನ್ ಲೋಬೋ, ಪದಾಧಿಕಾರಿಗಳು, ಸದಸ್ಯರು, ಕ್ರೈಸ್ತ ಭಾಂದವರು ಉಪಸ್ಥಿತರಿದ್ದರು.
ಮೌoಡಿ ಗುರುವಾರವು ಪವಿತ್ರ ವಾರದ ಪ್ರಮುಖ ಭಾಗವಾಗಿದ್ದು, ಈ ದಿನ ಯೇಸು ತನ್ನ ಶಿಷ್ಯರೊಂದಿಗೆ ಅಂತಿಮ ಭೋಜನವನ್ನು ಮಾಡಿದ ದಿನವಾಗಿದೆ. ಈ ದಿನವೇ ಕ್ರಿಸ್ತನು ತನ್ನ ಶಿಷ್ಯರಿಗೆ ಸತ್ಯ ಸೇವೆಯ ಪಾಠವನ್ನು ಕಲಿಸಿದರು.
ಇಂದು ಶುಭ ಶುಕ್ರವಾರ ಆಚರಣೆ
ಎ.3ರಂದು ಚರ್ಚ್ ಗಳಲ್ಲಿ ಶುಭ ಶುಕ್ರವಾರ ಆಚರಣೆ ನಡೆಯಲಿದೆ. ಯೇಸುಕ್ರಿಸ್ತರನ್ನು ಶಿಲುಬೆಗೆ ಹಾಕಲ್ಪಟ್ಟ ದಿನವಾಗಿದ್ದು ಅವರು ತನ್ನ ಪ್ರಾಣ ವನ್ನು ತ್ಯಾಗ ಮಾಡಿದುದನ್ನು ಸ್ಮರಿಸುವುದು ಮಹತ್ವದಾಗಿದೆ.









