ವಸಂತಲಕ್ಷ್ಮೀ ಮತ್ತು ಶಾಂತಾ ಕುಂಟಿನಿಗೆ ಗಾನಸಿರಿ ಕರ್ನಾಟಕ ಭೂಷಣ ಪ್ರಶಸ್ತಿ

0

ಪುತ್ತೂರು: ಪುತ್ತೂರಿನ ಕಲಾ ಸಂಘಟಕರಾದ ವಸಂತಲಕ್ಷ್ಮೀ ಮತ್ತು ಶಾಂತಾ ಕುಂಟಿನಿ ಅವರು ಗಾನಸಿರಿ ಕರ್ನಾಟಕ ಭೂಷಣ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಪುತ್ತೂರಿನ ಬೊಳುವಾರು ಆಕ್ಸಿಸ್ ಬ್ಯಾಂಕ್ ಬಳಿಯ ಮಹೇಶ್ ಪ್ರಸಾದ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಾನಸಿರಿ ಕಲಾಕೇಂದ್ರದ ಗಾನ ಸಿರಿ ರಜತ ವರ್ಷ ಸಂಭ್ರಮದ ಪ್ರಯುಕ್ತ ಕಲಾ ಸೇವೆ ಮಾಡುತ್ತಿರುವವರಿಗೆ ನೀಡಲಾಗುವ ಗಾನಸಿರಿ ಕರ್ನಾಟಕ ಭೂಷಣ ಪ್ರಶಸ್ತಿಗೆ ಭಾಜನರಾಗಿರುವ ಮುಕ್ರಂಪಾಡಿ ನಿವಾಸಿಯಾಗಿರುವ ಕಲಾವಿದೆ, ನಟಿ, ಸಂಘಟಕಿ, ಸೌಂದರ್ಯ ತಜ್ಞೆ ವಸಂತಲಕ್ಷ್ಮಿ ಮತ್ತು ಗಾಯಕಿ, ಕಲಾ ಸಂಘಟಕಿ, ಉಪ್ಪಿನಂಗಡಿ ನೆಕ್ಕಿಲಾಡಿಯಲ್ಲಿರುವ ಶಾಂತಾ ಸಭಾಭವನದ ಮಾಲಕಿ ಶಾಂತಾ ಕುಂಟಿನಿ ಅವರಿಗೆ ಎ.5ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಗಾನಸಿರಿ‌ ಕಲಾಕೇಂದ್ರದ ರಜತ ವರ್ಷ ಸಂಭ್ರಮದ ಉದ್ಘಾಟನಾ ಸಮಾರಂಭದಲ್ಲಿ‌ ಪ್ರಶಸ್ತಿ ಪ್ರದಾನ‌ ನಡೆಯಲಿದೆ.‌ ವಸಂತಲಕ್ಷ್ಮಿ ಅವರು ನ್ಯಾಯವಾದಿ ಶಶಿಧರ ಬಿ.ಎನ್. ಅವರ ಪತ್ನಿ. ಶಾಂತಾ ಕುಂಟಿನಿ ಅವರು‌ ಪಾಕತಜ್ಞ ರವಿ ಕುಂಟಿನಿ ಅವರ ಪತ್ನಿ.

LEAVE A REPLY

Please enter your comment!
Please enter your name here