ಎ.5ರಿಂದ 7: ಕುದ್ಮಾರು ಶಾಲೆಯಲ್ಲಿ ಚಿಣ್ಣರ ವೈಭವ

0

ಕಾಣಿಯೂರು: ಕುದ್ಮಾರು ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎ. 5ರಿಂದ 7ರವರೆಗೆ ಚಿಣ್ಣರ ವೈಭವ ಬೇಸಿಗೆ ಶಿಬಿರ ನಡೆಯಲಿದೆ. ಕುದ್ಮಾರು ಶಾಲೆ, ಎಸ್‌ಡಿಎಂಸಿ, ಹಿರಿಯ ವಿದ್ಯಾರ್ಥಿ ಸಂಘದ ವತಿಯಿಂದ ಮೂರು ದಿನ ಪ್ರಸಿದ್ಧ ಸಂಪನ್ಮೂಲ ತಂಡದಿಂದ ವಿದ್ಯಾರ್ಥಿಗಳಿಗಾಗಿ ವಿಶೇಷ ಶಿಬಿರ ಹಮ್ಮಿಕೊಂಡಿದ್ದು, ಕುದ್ಮಾರು ಶಾಲಾ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಸುತ್ತಮುತ್ತಲಿನ ಶಾಲಾ ವಿದ್ಯಾರ್ಥಿಗಳಿಗೂ ಅವಕಾಶ ಕಲ್ಪಿಸಲಾಗಿದೆ.


ಎ. 5ರಂದು ಹಿರಿಯ ರಂಗ ನಿರ್ದೇಶಕ ಡಾ. ಜೀವನ್ ರಾಮ್ ಸುಳ್ಯ ಶಿಬಿರಕ್ಕೆ ಚಾಲನೆ ನೀಡಲಿರುವರು. ಎಸ್‌ಕೆಪಿಎ ಮಾಜಿ ಜಿಲ್ಲಾಧ್ಯಕ್ಷ, ನ್ಯೂಸ್‌ ಕಾರ್ಕಳ ಆಡಳಿತ ನಿರ್ದೇಶಕ ಪದ್ಮಪ್ರಸಾದ್ ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಸವಣೂರು ಕ್ಲಸ್ಟರ್ ಸಿಆರ್‌ಪಿ ಜಯಂತ್ ವೈ., ಯುವಜನ ಒಕ್ಕೂಟದ ಜಿಲ್ಲಾಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ್ತಿ ನವ್ಯಾಶ್ರೀ ಖಂಡಿಗ ಉಪಸ್ಥಿತರಿರುವರು. ಅಂದು ಡಾ. ಜೀವನ್‌ ರಾಂ ಸುಳ್ಯ, ಅಂತಾರಾಷ್ಟ್ರೀಯ ಮಯೂರ ವಿದ್ಯಾರತ್ನ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವಂದನಾ ರೈ ಕಾರ್ಕಳ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿರುವರು. ಏಪ್ರಿಲ್ 6ರಂದು ಶಿಬಿರ ಹಿನ್ನೋಟ ಕಾರ್ಯಕ್ರಮದಲ್ಲಿ ಬಿಎಸ್‌ಎನ್‌ಎಲ್‌ ನಿವೃತ್ತ ಜೆಟಿಒ ಶೂರಪ್ಪ ಗೌಡ ಪಟ್ಟೆತ್ತಾನ, ಅಂಕಲ್ ಸ್ವೀಟ್ಸ್ ಗ್ರೂಪ್ ಮಾಲಕ ಕುಶಾಲಪ್ಪ ಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು ಯೋಜನಾಧಿಕಾರಿ ಯಶೋಧರ್‌ ಕೆಡೆಂಜಿ, ಪಿಡಬ್ಲ್ಯುಡಿ ಗುತ್ತಿಗೆದಾರ ಲೋಕೇಶ್ ಬಿ.ಎನ್. ಉಪಸ್ಥಿತರಿರುವರು. ಏಪ್ರಿಲ್ 7ರ ಅಪರಾಹ್ನ 3 ಗಂಟೆಗೆ ನಡೆಯುವ ಸಮಾರೋಪ ಸಮಾರಂಭ ನಡೆಯಲಿದ್ದು, ಎಸ್‌ಡಿಎಂಸಿ ಅಧ್ಯಕ್ಷ ದೇವರಾಜ್ ನೂಜಿ ಅಧ್ಯಕ್ಷತೆ ವಹಿಸಲಿರುವರು. ಕುದ್ಮಾರು ಶಾಲಾ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಜನಾರ್ದನ ಗೌಡ ಕೂರ, ಆದಿಶಕ್ತಿ ಲ್ಯಾಡರ್ಸ್‌ ಮಾಲಕ ಮಾಲಕ ಚಂದ್ರಶೇಖರ್ ಬರೆಪ್ಪಾಡಿ, ನಿವೃತ್ತ ಮುಖ್ಯಶಿಕ್ಷಕರಾದ ಕುಶಾಲಪ್ಪ ಬಿ. ಹಾಗೂ ಸೀತಾರಾಮ ಕೆ.ಜಿ. ಅತಿಥಿಗಳಾಗಿ ಉಪಸ್ಥಿತರಿರುವರು.

ಸನ್ಮಾನ
ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಬೆಳಿಗ್ಗೆ ಒಂದು ಗಂಟೆ ಕಾಲ ಕುದ್ಮಾರು ಮುಖ್ಯರಸ್ತೆ ಬದಿ ಸ್ವಚ್ಛತಾ ಕಾರ್ಯ ಮಾಡುತ್ತಿರುವ ಅಕ್ಷಯ್ ಬರೆಪ್ಪಾಡಿ ಹಾಗೂ ಸತೀಶ್‌ ಆರ್ವಾರ ಅವರನ್ನು ಸನ್ಮಾನಿಸಲಾಗುವುದು.

ಸಂಪನ್ಮೂಲ ವ್ಯಕ್ತಿಗಳು
ಹಿರಿಯ ರಂಗ ನಿರ್ದೇಶಕ ಡಾ. ಜೀವನ್ ರಾಂ ಸುಳ್ಯ, ಶಿಕ್ಷಕಿ ವಂದನಾ ರೈ ಕಾರ್ಕಳ, ರಾಷ್ಟ್ರೀಯ ಜೇಸಿ ತರಬೇತಿದಾರ ಸೀತಾರಾಮ ಕೇವಳ, ಜೈನ್ ಡೀಮ್ಡ್ ಟು ಬಿ ಯೂನಿವರ್ಸಿಟಿ ಬೆಂಗಳೂರು ಇಲ್ಲಿನ ಗ್ರಂಥಾಪಾಲಕರಾದ ಡಾ. ಮೀರಾಮಣಿ, ಖ್ಯಾತ ವೈದ್ಯ ಡಾ. ಸುಬ್ರಮಣ್ಯ ಭಟ್ ಬರೆಪ್ಪಾಡಿ, ಇಂಗ್ಲೀಷ್‌ ಉಪನ್ಯಾಸಕ ಅಬ್ದುಲ್ ಸಮದ್, ಕೋಡಿಂಬಾಡಿ ಸಿಆರ್‌ಪಿ ದೇವಕಿ, ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ, ರಂಗಾಯಣ ಕಲಾವಿದ ರಾಕೇಶ್ ಆಚಾರ್ಯ ಬನಾರಿ ಭಾಗವಹಿಸಲಿದ್ದಾರೆ.

ಮಕ್ಕಳಲ್ಲಿ ಅಭಿನಯ, ಮಾತುಗಾರಿಕೆ,‌ ಪಠ್ಯೇತರ ಕಲಿಕೆ, ಸೃಜನಶೀಲತೆ ಮೂಡಿಸುವ ಸದುದ್ದೇಶದಿಂದ ಕುದ್ಮಾರು ಶಾಲೆಯಲ್ಲಿ ಶಿಬಿರ ಆಯೋಜಿಸಲಾಗಿದೆ. ಕುದ್ಮಾರು ಶಾಲಾ ವಿದ್ಯಾರ್ಥಿಗಳು ಮಾತ್ರವಲ್ಲದೇ ಸುತ್ತಮುತ್ತಲಿನ ಶಾಲಾ ವಿದ್ಯಾರ್ಥಿಗಳಿಗೂ ಶಿಬಿರದಲ್ಲಿ ಭಾಗವಹಿಸಲು ಅವಕಾಶವನ್ನು ಕಲ್ಪಿಸಲಾಗಿದೆ.

LEAVE A REPLY

Please enter your comment!
Please enter your name here