ಹೇಮಾವತಿ ವಿ ಹೆಗ್ಗಡೆಯವರ ಹುಟ್ಟುಹಬ್ಬ : ತಾಲೂಕಿನ 80 ಜನ ವಾತ್ಸಲ್ಯ ಪಲಾನುಭವಿಗಳಿಗೆ ಹಣ್ಣು ಹಂಪಲು ವಿತರಣೆ

0

ಪುತ್ತೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಪುತ್ತೂರು ವತಿಯಿಂದ ಡಾ. ಹೇಮಾವತಿ ವಿ ಹೆಗ್ಡಡೆ ಅವರ ಹುಟ್ಟುಹಬ್ಬದಂದು ಪುತ್ತೂರು ತಾಲೂಕಿನ 80 ಜನ ವಾತ್ಸಲ್ಯ ಪಲಾನುಭವಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಲಾಯಿತು.

ತಾಲೂಕಿನ ಯೋಜನಾಧಿಕಾರಿ ಶಶಿಧರ್ ಸಾಂಕೇತಿಕವಾಗಿ ಹಣ್ಣು ಹಂಪಲು ವಿತರಣೆ ಮಾಡಿದರು. ವಾತ್ಸಲ್ಯ ಫಲಾನುಭವಿ ಅವರ ಆರೋಗ್ಯ ಕ್ಷೇಮ ವಿಚಾರಿಸಿದರು.

  • ತಾಲೂಕಿನ 9 ವಲಯದ ಮೇಲ್ವಿಚಾರಕರು,ಜ್ಞಾನವಿಕಾಸ ಸಮನ್ವಯಾಧಿಕಾರಿ,ಸೇವಾಪ್ರತಿನಿಧಿಯವರು,ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here