ಮೂಡಬಿದ್ರೆ ಸ್ವಾಮಿ ಸ್ಟ್ರೆಂತ್ & ಫಿಟ್ನೆಸ್ ನಲ್ಲಿ ಬಾಡಿಬಿಲ್ಡಿಂಗ್ ಸ್ಪರ್ಧೆ-ಪುತ್ತೂರಿನ ಕ್ರಿಸ್ಟೋಫರ್ ಫಿಟ್ನೆಸ್ ನ ಮೂವರಿಗೆ ಪ್ರಶಸ್ತಿ

0

ಪುತ್ತೂರು: ಮೂಡಬಿದ್ರೆ ಸ್ವಾಮಿ ಸ್ಟ್ರೆಂತ್ & ಫಿಟ್ನೆಸ್ ನ ವತಿಯಿಂದ ಮಾ.28ರಂದು ಮೂಡಬಿದ್ರೆ ಸಮಾಜ ಮಂದಿರದಲ್ಲಿ ನಡೆದ ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ ಪುತ್ತೂರಿನ ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಕಾಂಪ್ಲೆಕ್ಸ್ ನಲ್ಲಿನ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಕ್ರಿಸ್ಟೋಫರ್ ಫಿಟ್ನೆಸ್ ಸಂಸ್ಥೆಯ ಮೂವರಿಗೆ ಪ್ರಶಸ್ತಿ ಲಭಿಸಿರುತ್ತದೆ.


ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರ್ ನ ಭವಿಷ್ ರವರು ಬೆದ್ರ ಕಾಸಿಕ್ ಜ್ಯೂನಿಯರ್ ವಿಭಾಗದಲ್ಲಿ ಪ್ರಥಮ, ಮೆನ್ಸ್ ಫಿಸಿಕ್ ಜ್ಯೂನಿಯರ್ ಹಾಗೂ ಜೀನ್ಸ್ ಮಾಡೆಲ್ ನಲ್ಲಿ ಪ್ರಶಸ್ತಿ ಗಳಿಸಿದ್ದು ಭವಿಷ್ ರವರು ಪ್ರಥಮ ಬಾರಿ ಬಾಡಿ ಬಿಲ್ಡಿಂಗ್ ನಲ್ಲಿ ನಾಲ್ಕನೇ ಸ್ಥಾನ ಗಳಿಸಿರುತ್ತಾರೆ. ಯೋಗೀಶ್ ರವರು ಮುಕ್ತ ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ, ಮುಕ್ತ ಮೆನ್ಸ್ ಫಿಸಿಕ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿರುತ್ತಾರೆ. ಅಕ್ಷಯ್ ರವರು ಮೆನ್ಸ್ ಫಿಸಿಕ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನದೊಂದಿಗೆ ಪ್ರಥಮ ಬಾರಿ ಬಾಡಿಬಿಲ್ಡಿಂಗ್ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿರುತ್ತಾರೆ. ಇವರುಗಳಿಗೆ ಕ್ರಿಸ್ಟೋಫರ್ ಫಿಟ್ನೆಸ್ ಸೆಂಟರಿನ ಜಿಮ್ ತರಬೇತುದಾರ ನವನೀತ್ ಬಜಾಜ್ ರವರು ತರಬೇತಿ ನೀಡಿರುತ್ತಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here