ಪುತ್ತೂರು ಮಾಯ್ ದೆ ದೇವುಸ್ ಚರ್ಚ್‌ನಲ್ಲಿ ಈಸ್ಟರ್ ಹಬ್ಬ ಆಚರಣೆ

0

ಪುತ್ತೂರು: ಪುತ್ತೂರಿನ ಮಾಯ್ ದೆ ದೇವುಸ್ ಚರ್ಚ್‌ನಲ್ಲಿ ಯೇಸಕ್ರಿಸ್ತನ ಪುನರ್ಜನ್ಮವನ್ನು ಸಾರುವ ಈಸ್ಟರ್ ಹಬ್ಬವನ್ನು ಎ.4 ಮತ್ತು 5ರಂದು ಆಚರಿಸಲಾಯಿತು.


ಚರ್ಚ್ ವಠಾರದ ಎಲ್ಲಾ ವಿದ್ಯುತ್ ಬೆಳಕನ್ನು ನಂದಿಸಿ ನಂತರ ಒಂದು ದೊಡ್ಡ ಮೇಣದ ಬತ್ತಿಗೆ, ಯೇಸುವನ್ನು ಶಿಲುಬೆಗೆ ಏರಿಸಿದಾಗ ಹೊಡೆದಿರುವಂತಹ ಮೊಳೆಗಳನ್ನು ಚುಚ್ಚಲಾಗಿ, ತದನಂತರ ಆಶೀರ್ವದಿಸಿದ ಹೊಸ ಬೆಂಕಿಯಿಂದ ಮೇಣದ ಬತ್ತಿಯನ್ನು ಹೊತ್ತಿಸಲಾಗುತ್ತದೆ. ಧಾರ್ಮಿಕ ವಿಧಿವಿಧಾನಗಳು, ಬೈಬಲ್‌ನ ಹಳೆ ಒಡಂಬಡಿಕೆಯ ಮೂರು ವಚನಗಳು, ಸ್ತುತಿ ಗೀತೆಗಳು, ಆದ ನಂತರ ಪುನರುತ್ಥಾನ ಯೇಸುವಿನ ಪ್ರತಿಮೆಯು ಅನಾವರಣಗೊಳಿಸಲಾಗುತ್ತದೆ. ಚರ್ಚ್‌ನ ಪ್ರಧಾನ ಧರ್ಮಗುರು ವಂ| ಲಾರೆನ್ಸ್ ಮಸ್ಕರೇನಸ್‌ರವರು ಮೇಣದ ಬತ್ತಿಯನ್ನು ಹೊತ್ತಿಸಿದರು. ಭಕ್ತಾದಿಗಳು ಯೇಸು ಕ್ರಿಸ್ತರ ಜ್ಯೋತಿಯೆಂದು ಉದ್ಗರಿಸಿ ದೇವರಿಗೆ ಮಹಿಮೆ ಸಲ್ಲಲಿ ಎಂದು ಜೈಕಾರ ಹಾಕಿದರು.

ಬಳಿಕ ವಂ| ಲಾರೆನ್ಸ್ ಮಸ್ಕರೇನಸ್‌ರವರ ನೇತೃತ್ವದಲ್ಲಿ ಬಲಿ ಪೂಜೆ ನಡೆಯಿತು. ಬಲಿ ಪೂಜೆಯಲ್ಲಿ ಚರ್ಚ್‌ನ ಸಹಾಯಕ ಧರ್ಮಗುರು ಪ್ರವಚನ ನೀಡಿ ಯೇಸು ಕ್ರಿಸ್ತನ ಪುನರುತ್ಥಾನವು ಭರವಸೆಯ ಬೆಳಕು, ಬಿಡುಗಡೆಯ ಬೆಳಕು ಮತ್ತು ಜಯದ ಬೆಳಕು ಹೀಗೆ ಮೂರು ವಿಷಯಗಳ ಬಗ್ಗೆ ಸಂದೇಶ ನೀಡಿದರು. ವಂ.ಮ್ಯಾಕ್ಸಿಮ್ ಡಿಸೋಜಾರವರು ಪಾತ್ರೆಯಲ್ಲಿ ಇಟ್ಟಿರುವ ನೀರನ್ನು ಮೇಣದ ಬತ್ತಿಯನ್ನು ಮುಳುಗಿಸುವುದರ ಮುಖಾಂತರ ಆಶೀರ್ವದಿಸಿ ಮೇಣದಬತ್ತಿಯಿಂದ ಎಲ್ಲಾ ಭಕ್ತಾದಿಗಳು ಯೇಸು ಕ್ರಿಸ್ತರು ನಮಗೆ ನೀಡಿರುವ ಪುನರುತ್ಥಾನವನ್ನು ವಿಶ್ವಾಸಿಸುತ್ತೇವೆ ಎನ್ನುವ ವಾಗ್ದಾನವನ್ನು ನವೀಕರಿಸಿ ನಂತರ ಪವಿತ್ರ ನೀರನ್ನು ಭಕ್ತಾದಿಗಳಿಗೆ ಸಿಂಪಡಿಸಿ ಪಾವನ ಮಾಡಿದರು. ವಂ| ಅಶೋಕ್ ರಾಯನ್ ಕ್ರಾಸ್ತರವರು ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು. ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ರೊಶನ್ ಲಸ್ರಾದೊ, ಸಮಿತಿ ಪದಾಧಿಕಾರಿಗಳು, ಸದಸ್ಯರು, ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು. ಕ್ರಿಸ್ತನ ಪುನರ್ಜನ್ಮ ಪ್ರಯುಕ್ತ ಸಾವಿರಾರು ಭಕ್ತಾದಿಗಳಿಗೆ ತಿಂಡಿ ಮತ್ತು ಪಾನೀಯಗಳನ್ನು ವಿತರಿಸಲಾಯಿತು.

LEAVE A REPLY

Please enter your comment!
Please enter your name here