ಪಲ್ಲತಡ್ಕ ಶ್ರೀ ಹೊಸಮ್ಮ ‌ದೈವಸ್ಥಾನಕ್ಕೆ ಶಿವರಾಮ್ ದುಗ್ಗಪ್ಪ ರೈ ಕೊಡಂಬು,ಪುಣೆ ಇವರ ಸೇವಾರ್ಥವಾಗಿ ನಂದಾದೀಪ ಸಮರ್ಪಣೆ ಮತ್ತು ನೇಮೋತ್ಸವದ ಪ್ರಯುಕ್ತ ತುಲಾಭಾರ ಸೇವೆ

0

ಕೆಯ್ಯೂರು: ಮಾಡಾವು ಪಲ್ಲತಡ್ಕ ಶ್ರೀ ಹೊಸಮ್ಮದೈವಸ್ಥಾನ ಪಲ್ಲತ್ತಡ್ಕದಲ್ಲಿ ಶ್ರೀ ಹೊಸಮ್ಮ ದೈವದ ನೇಮೋತ್ಸವದ ಪ್ರಯುಕ್ತ ಎ5ರಂದು ಬೆಳಿಗ್ಗೆ ಶ್ರೀ ಮಹಾಗಣಪತಿ ಹೋಮ, ಕಳಶ ಪೂಜೆ, ಶ್ರೀ ನಾಗದೇವರಿಗೆ ತಂಬಿಲ ಸೇವೆ, ಪರಿವಾರ ದೈವಗಳ ತಂಬಿಲ, ಶ್ರೀ ವೆಂಕಟರಮಣ ದೇವರ ಸೇವೆ ನಡೆಯಿತು.

ಶಿವರಾಮ್ ದುಗ್ಗಪ್ಪ ರೈ ಕೊಡಂಬು ಹೋಟೆಲ್ ಸಮಯ ಪ್ಯಾಲೇಸ್  ಪುಣೆ ಮತ್ತು ಮನೆಯವರ ಹರಕೆಯ ಸೇವಾರ್ಥವಾಗಿ ಪಲ್ಲತ್ತಡ್ಕ ಶ್ರೀ ಹೊಸಮ್ಮ ದೈವಸ್ಥಾನಕ್ಕೆ ನಂದಾದೀಪವನ್ನು ಪ್ರಜ್ವಲಿಸುವ ಮೂಲಕ ದೈವಸ್ಥಾನಕ್ಕೆ ಸಮರ್ಪಿಸಿದರು ಹಾಗೂ ಪ್ರತಿ ವರ್ಷ ನೇಮೋತ್ಸವದ ಪ್ರಯುಕ್ತ ಭಕ್ತಾದಿಗಳಿಗೆ ಇವರ ಸೇವಾರ್ಥವಾಗಿ ಅನ್ನಸಂತರ್ಪಣೆ ನಡೆಯುತ್ತದೆ. ವರ್ಷದಲ್ಲಿ ಎರಡು ದಿವಸ ನಡೆಯುವ ತುಲಾಭಾರ ಸೇವೆಯು ಅಕ್ಕಿ, ಬೆಲ್ಲದಿಂದ, ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅದ್ಯಕ್ಷ ಎಸ್.ಬಿ. ಜಯರಾಮ ರೈ ಬಳಜ್ಜ, ಕಾರ್ಯದರ್ಶಿ ಗೋಪಾಲಕೃಷ್ಣ ಮಾಡಾವು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಜಯಂತ ನಡುಬೈಲು, ಪಲ್ಲತ್ತಡ್ಕ ಕುಟುಂಬಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here