ಮುದ್ಯ ಬ್ರಹ್ಮಕಲಶೋತ್ಸವಕ್ಕೆ ಚಾಲನೆ : ಹಸಿರುವಾಣಿ ಸಮರ್ಪಣೆ | ವಿವಿಧ ಕಾರ್ಯಕ್ರಮ ಉದ್ಘಾಟನೆ

0

ಉಪ್ಪಿನಂಗಡಿ: ಬಜತ್ತೂರು ಗ್ರಾಮದ ಮುದ್ಯ ಪಾರಂತಿ ಕ್ಷೇತ್ರ ಶ್ರೀ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುವ ನವೀಕರಣ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಏ.7ರಂದು ವಿದ್ಯುಕ್ತವಾಗಿ ಚಾಲನೆ ನೀಡಲಾಗಿದೆ. ಏ.12ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ಸಂಭ್ರಮ ನಡೆಯಲಿದೆ.

ಬ್ರಹ್ಮಕಲಶೋತ್ಸವಕ್ಕೆ ಚಾಲನೆ;
ಬ್ರಹ್ಮಕಲಶೋತ್ಸವಕ್ಕೆ ಬೆಳಗ್ಗೆ 8.45ಕ್ಕೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸಂಚಾಲಕರಾದ ಅರುಣ್‌ಕುಮಾರ್ ಪುತ್ತಿಲ ಅವರು ದೇವಸ್ಥಾನದಲ್ಲಿ ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಬಳಿಕ ದಿ| ಅನಂತಕೃಷ್ಣ ಉಡುಪ ಸ್ಮರಣಾರ್ಥ ಸಭಾ ವೇದಿಕೆಯಲ್ಲಿ ನಡೆಯುವ ಭಜನಾ ಕಾರ್ಯಕ್ರಮಗಳಿಗೆ ದೇವಸ್ಥಾನದ ಆಡಳಿತಾಧಿಕಾರಿ ನರಿಯಪ್ಪ ಮಠದ ಅವರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅರುಣ್‌ಕುಮಾರ್ ಪುತ್ತಿಲ ಅವರು, ದೇವಸ್ಥಾನದ ಜೀರ್ಣೋದ್ಧಾರ, ಬ್ರಹ್ಮಕಲಶ ಭಕ್ತರಿಗೆ ಜೀವನದಲ್ಲಿ ಸಿಗುವ ಬಹುದೊಡ್ಡ ಅವಕಾಶ. ಈ ಯೋಗ ಭಾಗ್ಯವನ್ನು ಈ ಭಾಗದ ಜನತೆಗೆ ದೇವರು ಕರುಣಿಸಿದ್ದಾರೆ. ದೇವಸ್ಥಾನಗಳ ಮೂಲಕ ಧಾರ್ಮಿಕ ವ್ಯವಸ್ಥೆಗೆ ಶಕ್ತಿ ತುಂಬುವ, ಹಿಂದುತ್ವ, ಧರ್ಮಸಂರಕ್ಷಣೆಯ ಕೆಲಸ ಆಗಬೇಕು. ಹಿಂದೂ ಸಮಾಜದ ಮುಂದೆ ಇರುವ ನೂರಾರು ಸವಾಲು, ಆಚರಣೆಗಳಿಗೆ ಇರುವ ಅಡಚಣೆ ನಿವಾರಣೆಯಾಗಬೇಕೆಂದು ಹೇಳಿದರು. ಆಡಳಿತಾಧಿಕಾರಿ ನರಿಯಪ್ಪ ಮಠದ ಮಾತನಾಡಿ, ಈ ಪುಣ್ಯ ಕಾರ್ಯಕ್ರಮದ ಸಂತಸ, ಸಂಭ್ರಮ ಊರಿನ ಪ್ರತಿ ಮನೆಯಲ್ಲಿಯೂ ಇದೆ. ಆರು ದಿನಗಳ ಕಾಲ ನಡೆಯುವ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಊರಿನ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇಲ್ಲಿನ ಎಲ್ಲಾ ಅಡೆತಡೆಗಳನ್ನು ದೇವರು ನಿವಾರಣೆ ಮಾಡಿದ್ದು ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದೆ. ನಾವೆಲ್ಲಾ ಒಂದೂ ಎಂಬ ಭಾವನೆಯಿಂದ ಎಲ್ಲರೂ ಭಾಗವಹಿಸಬೇಕು ಎಂದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರು, ಅರ್ಚಕರು, ಬ್ರಹ್ಮಕಲಶೋತ್ಸವ, ಜೀರ್ಣೋದ್ದಾರ ಸಮಿತಿ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಹಸಿರುವಾಣಿ ಸಮರ್ಪಣೆ;
ಬ್ರಹ್ಮಕಲಶೋತ್ಸವಕ್ಕೆ ಬೃಹತ್ ಹಸಿರುವಾಣಿ ಸಮರ್ಪಣೆ ಆಗಿದೆ. ಬೆಳಗ್ಗೆ ನಡ್ಪ ದೇವಸ್ಥಾನ, ಕಾಂಚನ, ಶಾಂತಿನಗರ ಭಜನಾ ಮಂದಿರ, ಬೆದ್ರೋಡಿ ಭಜನಾ ಮಂದಿರ, ಪೆರಿಯಡ್ಕ ಭಜನಾ ಮಂದಿರ, ವಳಾಲು ಹಾಲಿನ ಡೈರಿ, ಪಡ್ಪು ದೈವಸ್ಥಾನ, ಮುಗೇರಡ್ಕ ದೈವಸ್ಥಾನ ಸೇರಿದಂತೆ ವಿವಿಧ ಕಡೆಗಳಿಂದ ಹಸಿರುವಾಣಿ ಹೊತ್ತ ವಾಹನಗಳು ವಳಾಲು ಜಂಕ್ಷನ್‌ಗೆ ಆಗಮಿಸಿತು. ಅಲ್ಲಿ ಪುತ್ತೂರು ಶಾಸಕರೂ, ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರೂ ಆದ ಅಶೋಕ್ ಕುಮಾರ್ ರೈ ಅವರು ತೆಂಗಿನಕಾಯಿ ಒಡೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಅಲ್ಲಿಂದ ಭಜನೆ, ಚೆಂಡೆಯೊಂದಿಗೆ ಶಾಸಕರ ಸಹಿತ ಬ್ರಹ್ಮಕಲಶೋತ್ಸವ, ಜೀರ್ಣೋದ್ಧಾರ ಸಮಿತಿಯ ಪ್ರಮುಖರು ಕಾಲ್ನಗಡಿಗೆಯಲ್ಲಿ ಟೋಲ್‌ಗೇಟ್ ತನಕ ಆಗಮಿಸಿದರು. ಬಳಿಕ ದೇವಸ್ಥಾನದ ತನಕ ವಾಹನದಲ್ಲಿ ತೆರಳಲಾಯಿತು. ಮರಣಿಗೆಯಲ್ಲಿ ಆಗಮಿಸಿದ ನೂರಾರು ಬೈಕ್‌ಗಳು, ಹಸಿರುವಾಣಿ ಹೊತ್ತ ಪಿಕಪ್, ಜೀಪು ಸಹಿತ ಇತರೇ ಸುಮಾರು ೫೦ಕ್ಕೂ ಹೆಚ್ಚು ವಾಹನಗಳು ನೀರಕಟ್ಟೆ, ಕಾಂಚನ ಕ್ರಾಸ್, ಕಾಂಚನ, ಮಂಜಿಪಳ್ಳ ಮೂಲಕ ದೇವಸ್ಥಾನಕ್ಕೆ ಆಗಮಿಸಿತು. ದೇವಸ್ಥಾನದಲ್ಲಿ ಹಸಿರುವಾಣಿಗೆ ಅರ್ಚಕರು ಪೂಜೆ ನೆರವೇರಿಸಿ ಪ್ರಾರ್ಥಿಸಿದರು. ಬಳಿಕ ಹೊರೆಕಾಣಿಕೆ ಸುವಸ್ತುಗಳನ್ನು ಉಗ್ರಾಣದಲ್ಲಿ ತುಂಬಿಸಲಾಯಿತು.


ಈ ವೇಳೆ ಮಾತನಾಡಿದ ಶಾಸಕರೂ, ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರೂ ಆದ ಅಶೋಕ್ ಕುಮಾರ್ ರೈ ಅವರು, ಬ್ರಹ್ಮಕಲಶೋತ್ಸವಕ್ಕೆ ಹಸಿರುವಾಣಿ ಸಮರ್ಪಣೆ ಯಶಸ್ವಿಯಾಗಿ ನಡೆದಿದೆ. ಮುಂದೆ ಆರು ದಿನ ನಡೆಯುವ ಬ್ರಹ್ಮಕಲಶೋತ್ಸವದ ಯಶಸ್ವಿಗೆ ಎಲ್ಲಾ ಸ್ವಯಂ ಸೇವಕರು ತಮಗೆ ನೀಡಿರುವ ಜವಾಬ್ದಾರಿಗಳನ್ನು ಉತ್ತಮವಾಗಿ ನಿರ್ವಹಿಸಬೇಕು. ಸ್ವಚ್ಛತೆಗೆ ಆದ್ಯತೆ ಕೊಡಬೇಕು. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸ್ವಯಂ ಸೇವಕರದ್ದು ಎಂದರು. ಉಗ್ರಾಣ ಮುಹೂರ್ತ ನೆರವೇರಿಸಿದ ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ, ದೇವಸ್ಥಾನದ ಬ್ರಹ್ಮಕಲಶೋತ್ಸವದ ಕಣ್ತುಂಬಿಕೊಳ್ಳುವ ಯೋಗ ಭಾಗ್ಯ ಭಕ್ತರಿಗೆ ಲಭಿಸಿದೆ. ಈ ಪುಣ್ಯ ಕಾರ್ಯದಲ್ಲಿ ಎಲ್ಲರೂ ಸಮರ್ಪಣಾ ಭಾವದಿಂದ ತೊಡಗಿಕೊಳ್ಳಬೇಕೆಂದು ಹೇಳಿದರು.


ದೇವಸ್ಥಾನದ ಮೊಕ್ತೇಸರರಾದ ಸುಧಾ ಡಿ.ರಾವ್ ದಾದುಕೋಡಿ, ಪ್ರಧಾನ ಅರ್ಚಕ ಕೃಷ್ಣಪ್ರಸಾದ್ ಉಡುಪ ಎಂ., ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ವೇಣುಗೋಪಾಲ ನಾಯಕ್ ಕುಳ್ಳಾಜೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನೇಮಿಚಂದ್ರ ಗೌಡ ಮುದ್ಯ, ಸಂಚಾಲಕ ಗೋಪಾಲ ವಳಾಲು ದಡ್ಡು, ಪ್ರಧಾನ ಕಾರ್ಯದರ್ಶಿ ನಾರಾಯಣ ಪೂಜಾರಿ ನೀರಕಟ್ಟೆ, ಕೋಶಾಧಿಕಾರಿ ಸೋಮಸುಂದರ ಕೊಡಿಪಾನ, ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ವಸಂತಿಜಯಂತ ಬಿ.ಅತಿಕರಮಜಲು, ಕೋಶಾಧಿಕಾರಿ ಶ್ರೀಧರ ಪೂಜಾರಿ ಬರೆಮೇಲು ಕಾಂಚನ, ಉಪಾಧ್ಯಕ್ಷರಾದ ಸಂತೋಷ್‌ಕುಮಾರ್ ಜೈನ್ ಬಾರಿಕೆ, ದಾಮೋದರ ಗೌಡ ಶೇಡಿಗುತ್ತು, ಮನೋಹರ ಗೌಡ ಅಂತರ, ಜೊತೆ ಕಾರ್ಯದರ್ಶಿಗಳಾದ ಧನಂಜಯ ಗೌಡ ಪಂಚಶ್ರೀ ಬಾರಿಕೆ, ಬೇಬಿಗೋಪಾಲ ಬಾರಿಕೆ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಜಗದೀಶ್ ರಾವ್ ಮಣಿಕ್ಕಳ, ಶಿವರಾಮ ಪ್ರಸಾದ್ ಬಜತ್ತೂರು, ಚಂದ್ರಹಾಸ ಗೌಡ ದೇವಸ್ಯಗುತ್ತು, ಕಾರ್ಯದರ್ಶಿಗಳಾದ ಶರತ್ ಗೌಡ ಮುದ್ಯ, ಭವ್ಯಬಾಲಕೃಷ್ಣ ಶೆಟ್ಟಿ ಪಂಜಳ, ಗೌರವ ಸಲಹೆಗಾರರಾದ ಗಂಗಾಧರ ಗೌಡ ಪಿ.ಎನ್.ನೆಕ್ಕರಾಜೆ, ಶ್ರೀಧರ ರಾವ್ ದಾದುಕೋಡಿ, ಗೋಪಾಲಕೃಷ್ಣ ರಾವ್ ಗಾಣದಮೂಲೆ, ಶ್ರೀಧರ ಗೌಡ ನಡ್ಪ, ಮುಕುಂದ ಗೌಡ ಬಜತ್ತೂರು, ವಸಂತ ಗೌಡ ಪಿಜಕ್ಕಳ, ಉದಯರಾವ್ ಮಣಿಕ್ಕಳ, ಸುಧಾಕರ ಮುಗೇರಡ್ಕ, ಮೋನಪ್ಪ ಗೌಡ ನಾಗೋಜಿ, ಮೋನಪ್ಪ ಪೂಜಾರಿ ಡೆಂಬಳೆ, ಸಿದ್ದಪ್ಪ ನಾಯ್ಕ ಬೆದ್ರೋಡಿ, ಜೀರ್ಣೋದ್ದಾರ ಸಮಿತಿ ಸದಸ್ಯರಾದ ತಿಮ್ಮಪ್ಪ ಗೌಡ ಉಪಾತಿಪಾಲು, ರುಕ್ಮಯ್ಯ ಗೌಡ ಪುಯಿಲ, ಸುರೇಶ್ ನಂಜಳಿ, ಮಹೇಂದ್ರ ವರ್ಮ ಪಡ್ಪು, ಮಾಧವ ಪೂಜಾರಿ ಒರುಂಬೋಡಿ, ಶ್ರೀಧರ ಗೌಡ ಮುದ್ಯ, ಪೂವಪ್ಪ ಪೂಜಾರಿ ಕೊಡಿಪಾನ, ವಸಂತ ಗೌಡ ಗುಡ್ಡೆತ್ತಡ್ಕ, ಉಮೇಶ ಓಡ್ರಪಾಲು, ಶಶಿಧರ ಗೌಡ ಮುದ್ಯ, ಗೋಪಾಲ ಬಾರಿಕೆ, ದಯಾನಂದ ಆರಾಲುತೋಟ, ದಿನೇಶ್ ಮಂಜಿಪಲ್ಲ, ಜಗದೀಶ ಬಾರಿಕೆ, ಸದಾನಂದ ಪೂಜಾರಿ ಶಿಬಾರ್ಲ, ಅವಿನಾಶ್ ಉಪಾತಿಪಾಲು, ವಸಂತ ನಾಕ್ ಗಾಣದಮೂಲೆ, ಮನೋಜ್‌ಕುಮಾರ್ ಸುಳ್ಯ ಮಣಿಕ್ಕಳ, ವಸಂತ ಗೌಡ ಕಾಂಚನ, ಸೀತಾರಾಮ ಶೇಡಿ, ವಾಸು ಡಿ.ದಡ್ಡು, ಶ್ರೀಧರ ಮಂಜಿಪಲ್ಲ, ವಿಶ್ವನಾಥ ಗೌಡ ಪಿಜಕ್ಕಳ, ಸಂತೋಷ್‌ಕುಮಾರ್ ಪಂರ್ದಾಜೆ, ವಿನೋದ್ ನಾಗನಡಿ, ಸುಂದರ ಪುಣ್ಕೆತ್ತಡಿ, ಗಂಗಾಧರ ಕೆ.ಎಸ್.ಮೇಲೂರು, ಸದಾನಂದ ಕೋಡಿ, ಸುನಿತಾ ಕೊಡಿಪಾನ ಸೇರಿದಂತೆ ವಿವಿಧ ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತಾಧಿಗಳು, ಗ್ರಾಮಸ್ಥರು ಹಸಿರುವಾಣಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಆಡಳಿತಾಧಿಕಾರಿ ನರಿಯಪ್ಪ ಮಠದ ವಂದಿಸಿದರು. ಜಗದೀಶ ಬಾರಿಕೆ, ಮೋಹನಚಂದ್ರ ಪದಕ, ಗಣೇಶ್‌ಕುಲಾಲ್, ಧನಂಜಯ ಗೌಡ ಪಂಚಶ್ರೀ ಬಾರಿಕೆ ಮತ್ತಿತರರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಭಜನೆ;
ಬೆಳಗ್ಗೆ ಶ್ರೀ ಸುಬ್ರಹ್ಮಣ್ಯೇಶ್ವರ ಭಜನಾ ಮಂಡಳಿ ಶಾಂತಿನಗರ, ಶ್ರೀ ರಾಮ ಭಜನಾ ಮಂಡಳಿ ಅಯೋಧ್ಯನಗರ ಪೊರೋಳಿ, ಶ್ರೀ ದೇವಿ ಭಜನಾ ಮಂಡಳಿ ವರ್ನಡ್ಕ, ಮಧ್ಯಾಹ್ನ ಶ್ರೀ ಮಹಾವಿಷ್ಣು ಭಜನಾ ಮಂಡಳಿ ಕೊಣಾಲು ತಿರ್ಲೆ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಸಂಜೆ ಪ್ರಗತಿಪರ ಕೃಷಿಕರಾದ ಯಶೋಧ ಸದಾನಂದ ಸಾನಿಧ್ಯ ನಿಲಯ ಅವರು ದೀಪ ಪ್ರಜ್ವಲಿಸುವ ಮೂಲಕ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪ್ಪಿನಂಗಡಿ ಶ್ರೀ ಶ್ರೀಗುರು ಸಾರ್ವಭೌಮ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು.

ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ;
ಸಂಜೆ ಕ್ಷೇತ್ರಕ್ಕೆ ಆಗಮಿಸಿದ ತಂತ್ರಿಗಳಾದ ಬ್ರಹ್ಮಶ್ರೀ ಇಡಂಬಳ್ಳಿ ತರನನಲ್ಲೂರು ಸತೀಶನ್ ನಂಬೂದರಿಪ್ಪಾಡ್ ಹಾಗೂ ಪುರೋಹಿತರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಬಳಿಕ ಸಾಮೂಹಿಕ ಶ್ರೀ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಆಚಾರ್ಯವರಣ, ಅಂಕುರಾರೋಪಣ, ಸ್ವಸ್ತಿ ಪುಣ್ಯಾಹ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತುಕಲಶ ಪೂಜೆ, ವಾಸ್ತುಬಲಿ, ವಾಸ್ತು ಕಲಶಾಭಿಷೇಕ, ವಾಸ್ತು ಪುಣ್ಯಾಹ, ರಾತ್ರಿ ಪೂಜೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ;
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾತ್ರಿ ಜಗದೀಶ ಬಾರಿಕೆ ಮತ್ತು ಬಳಗ ಬಜತ್ತೂರು ಇವರಿಂದ ಕಲಾ ಸಂಗಮ, ವಿದುಷಿ ಪ್ರತಿಭಾ ಪ್ರವೀಣ್‌ಕುಮಾರ್ ಗಾಣದಮೂಲೆ ಮತ್ತು ಬಳಗದವರಿಂದ ಭಕ್ತಿ ಸಂಗೀತ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ, ರಾತ್ರಿ ಅನ್ನಸಂತರ್ಪಣೆ ನಡೆಯಿತು.

ನಿರೀಕ್ಷೆಗೂ ಮೀರಿ ಹಸಿರುವಾಣಿ ಸಮರ್ಪಣೆ;
ಬ್ರಹ್ಮಕಲಶೋತ್ಸವಕ್ಕೆ ನಮ್ಮ ನಿರೀಕ್ಷೆಗೂ ಮೀರಿ ಹಸಿರುವಾಣಿ ಸಮರ್ಪಣೆಯಾಗಿದೆ. ಪಿಕಪ್, ಕಾರು, ಜೀಪು ಸಹಿತ ಸುಮಾರು 50ಕ್ಕೂ ಹೆಚ್ಚು ವಾಹನಗಳಲ್ಲಿ ದೇವಸ್ಥಾನಕ್ಕೆ ಹಸಿರುವಾಣಿ ಆಗಮಿಸಿದೆ. ಸುಬ್ರಹ್ಮಣ್ಯ, ಸೌತಡ್ಕ, ಪುತ್ತೂರು, ಉಪ್ಪಿನಂಗಡಿ ಸಹಿತ ಸಮೀಪದ ದೇವಸ್ಥಾನ, ದೈವಸ್ಥಾನಗಳಿಂದಲೂ ಹಸಿರುವಾಣಿ ಬಂದಿದೆ. ಶಾಸಕರಿಂದಲೂ 1 ಲಾರಿಯಲ್ಲಿ ತೆಂಗಿನಕಾಯಿ, ಸೀಯಾಳ, ಅಕ್ಕಿ, ತರಕಾರಿ ಸಹಿತ ಇನ್ನಿತರ ವಸ್ತುಗಳು ಬಂದಿವೆ. ಹಸಿರುವಾಣಿ ಸಮರ್ಪಣೆ ಮಾಡಿದ ಎಲ್ಲಾ ಭಕ್ತರಿಗೆ ದೇವಸ್ಥಾನದ ವತಿಯಿಂದ ಕೃತಜ್ಞತೆ ಸಲ್ಲಿಸುತ್ತೇವೆ.
-ವಸಂತ ಗೌಡ ಪಿಜಕ್ಕಳ
ಸಂಚಾಲಕರು, ಹೊರೆಕಾಣಿಕೆ ಸಮಿತಿ

ಶಾಸಕರಿಂದ 1 ಲಾರಿ ಹಸಿರುವಾಣಿ;
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರೂ ಆಗಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು 1 ಲಾರಿಯಷ್ಟು ಹಸಿರುವಾಣಿ ಸಮರ್ಪಣೆ ಮಾಡಿದ್ದಾರೆ. ಶಾಸಕರ ಮಂಗಳೂರಿನ ಜಾಗದಲ್ಲಿದ್ದ ತೆಂಗಿನ ಮರಗಳಿಂದ ಸಂಗ್ರಹಿಸಿದ ಸುಮಾರು 1 ಸಾವಿರಕ್ಕೂ ಹೆಚ್ಚು ತೆಂಗಿನಕಾಯಿ, ಸಿಯಾಳದ ಜೊತೆಗೆ ಶಾಸಕರ ವತಿಯಿಂದ ಅಕ್ಕಿ, ತರಕಾರಿ ಸಹಿತ ಇತರೇ ಸುವಸ್ತುಗಳನ್ನು ದೇವಸ್ಥಾನಕ್ಕೆ ಸಮರ್ಪಣೆ ಮಾಡಲಾಗಿದೆ. ಹೊರೆಕಾಣಿಕೆ ಮೆರವಣಿಗೆ ಆರಂಭದಲ್ಲೇ ಆಗಮಿಸಿದ ಶಾಸಕರೂ ಹೊರೆಕಾಣಿಕೆ ಮೆರವಣಿಗೆ ಜೊತೆಗೆ ದೇವಸ್ಥಾನಕ್ಕೆ ಆಗಮಿಸಿ ಮಧ್ಯಾಹ್ನದ ತನಕ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ದೇವಸ್ಥಾನದಲ್ಲಿ ಇಂದು;
ಬ್ರಹ್ಮಕಲಶೋತ್ಸವದ 2ನೇ ದಿನವಾದ ಏ.8ರಂದು ವಿವಿಧ ವೈಧಿಕ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ ಹಾಗೂ ಸಂಜೆ ವೈದಿಕ ಕಾರ್ಯಕ್ರಮ ನಡೆಯಲಿದೆ. ಭಜನಾ ಕಾರ್ಯಕ್ರಮಕ್ಕೆ ಬೆಳಗ್ಗೆ ಉಪ್ಪಿನಂಗಡಿಯ ದಂತ ವೈದ್ಯ ಡಾ.ರಾಜಾರಾಮ್ ಕೆ.ಬಿ., ಸಂಜೆ ಉಡುಪಿ ವೈಟ್ ಲೋಟಸ್ ಹೋಟೆಲ್‌ನ ಅಜಯ್ ಶೆಟ್ಟಿ ಅವರು ದೀಪ ಪ್ರಜ್ವಲಿಸಿ ಚಾಲನೆ ನೀಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾತ್ರಿ 8 ಗಂಟೆಗೆ ಶ್ರೇಷ್ಠ ರಾವ್ ಬಳಗದವರಿಂದ ಸುಗಮ ಸಂಗೀತ, 8.30ರಿಂದ ಯಜ್ಞೇಶ್ ಆಚಾರ್ ಮತ್ತು ಬಳಗ ಸುಬ್ರಹ್ಮಣ್ಯ ಇವರಿಂದ ಸುಗಮ ಸಂಗೀತ ನಡೆಯಲಿದೆ.

LEAVE A REPLY

Please enter your comment!
Please enter your name here