ಬಲ್ಯ: ಬೈಕ್,ಕಾರು ಡಿಕ್ಕಿ-ಬೈಕ್ ಸವಾರರಿಗೆ ಗಾಯ

0

ನೆಲ್ಯಾಡಿ: ಬೈಕ್ ಹಾಗೂ ಕಾರು ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರರು ಗಾಯಗೊಂಡಿರುವ ಘಟನೆ ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಲ್ಯ ಕ್ರಾಸ್‌ನಲ್ಲಿ ನಡೆದಿದೆ.
ಬೈಕ್ ಸವಾರ ಪ್ರಶಾಂತ್ (25ವ.) ಹಾಗೂ ಸಹಸವಾರ ಷಣ್ಮುಖಪ್ಪ (39ವ.) ಎಂಬವರು ಗಾಯಗೊಂಡಿದ್ದು ಅವರಿಗೆ ಕಡಬ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಗಾಯಾಳುಗಳು ಹಾಗೂ ಅವರ ಸ್ನೇಹಿತರು ಆರು ಬೈಕ್‌ಗಳಲ್ಲಿ ಹುಬ್ಬಳ್ಳಿಯಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆಂದು ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದವರು ಬಲ್ಯದಲ್ಲಿ ನೆಲ್ಯಾಡಿ ಕ್ರಾಸ್ ಬಳಿ ತಲುಪಿದಾಗ ಒಳ ರಸ್ತೆಯಿಂದ ರವಿ ಸಂಪಂಗಿ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಕಾರು (ಕೆಎ 41, ಎಂಸಿ 7284) ಮುಖ್ಯ ರಸ್ತೆಗೆ ಏಕಾಏಕಿ ಬಂದ ವೇಳೆ ಪ್ರಶಾಂತ್ ಅವರು ಚಲಾಯಿಸುತ್ತಿದ್ದ ಬೈಕ್‌ಗೆ (ಕೆಎ 63, ಇ1559) ಡಿಕ್ಕಿಯಾಗಿದೆ. ಘಟನೆಯಲ್ಲಿ ಬೈಕ್ ಸವಾರ ಪ್ರಶಾಂತ್ ಹಾಗೂ ಸಹ ಸವಾರ ಷಣ್ಮುಖಪ್ಪ ಗಾಯಗೊಂಡಿದ್ದಾರೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಕೇಸು ದಾಖಲಾಗಿದೆ.

LEAVE A REPLY

Please enter your comment!
Please enter your name here