ವಿಟ್ಲ: ಸಾವಿತ್ರಿ ಅಮ್ಮ ನಿಧನ – ಸಾವಿನಲ್ಲೂ ಸಾರ್ಥಕತೆ

0

ವಿಟ್ಲ: ಶ್ರೀ ಧರ್ಮಸ್ಥಳ ಮೇಳದ ಯಕ್ಷಗಾನ ಕಲಾವಿದ ದಿವಂಗತ ‘ರಸಿಕರತ್ನ’ ಗೋಪಾಲಕೃಷ್ಣ ಜೋಷಿಯವರ ಪತ್ನಿ ವಿಟ್ಲದ ಅಡ್ಡದ ಬೀಡಿ ನಿವಾಸಿ ಸಾವಿತ್ರಿ ಅಮ್ಮ (92 ದ.)ರವರು ಏ.7ರಂದು ನಿಧನರಾದರು.


ಕಳೆದ ಎರಡು ತಿಂಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ದೈಗೋಳಿಯ ಶ್ರೀಸಾಯಿ ನಿಕೇತನ ಸೇವಾಶ್ರಮದಲ್ಲಿ ತಜ್ಞ ವೈದ್ಯರ ಆರೈಕೆಯಲ್ಲಿದ್ದರು. ಏ.6ರಂದು ರಾತ್ರಿ ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿದ್ದು, ಏ.7ರಂದು ಮುಂಜಾನೆ ಕೊನೆಯುಸಿರೆಳೆದಿದ್ದಾರೆ. ಸಾವಿತ್ರಿ ಅಮ್ಮ ಅವರು ಜೀವಿತಾವಧಿಯಲ್ಲಿ ವ್ಯಕ್ತಪಡಿಸಿದ್ದ ಇಚ್ಛೆಯಂತೆ, ಅವರ ಕಣ್ಣುಗಳನ್ನು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಕಣ್ಣಿನ ಆಸ್ಪತ್ರೆಗೆ ದಾನ ಮಾಡಲಾಯಿತು. ಈ ಮೂಲಕ ಸಾವಿನಲ್ಲೂ ಪರರಿಗೆ ಬೆಳಕಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ವಿಟ್ಲದ ಹಿಂದೂ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು. ಮೃತರು ಒಬ್ಬ ಪುತ್ರ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here