ಮುದ್ಯ: ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡ ಮೆಟ್ಟಿಲು, ಶೌಚಾಲಯ ಉದ್ಘಾಟನೆ

0

ಉಪ್ಪಿನಂಗಡಿ: ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಬಜತ್ತೂರು ಗ್ರಾಮದ ಮುದ್ಯ ಶ್ರೀ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ನಿರ್ಮಾಣಗೊಂಡಿರುವ ದೇವಸ್ಥಾನದ ಮೆಟ್ಟಿಲು ಹಾಗೂ ಶೌಚಾಲಯದ ಉದ್ಘಾಟನೆ ಏ.7ರಂದು ನಡೆಯಿತು.


ಶಾಸಕರ ಪ್ರದೇಶಾಭಿವೃದ್ಧಿಯ 5 ಲಕ್ಷ ರೂ.ಅನುದಾನದಲ್ಲಿ ದೇವಸ್ಥಾನಕ್ಕೆ ಮೆಟ್ಟಿಲು ಹಾಗೂ 5 ಲಕ್ಷ ರೂ.ಅನುದಾನದಲ್ಲಿ ಶೌಚಾಲಯ ನಿರ್ಮಾಣಗೊಂಡಿದೆ. ಇದನ್ನು ಶಾಸಕ ಅಶೋಕ್‌ಕುಮಾರ್ ರೈ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಸುಧಾ ಡಿ.ರಾವ್, ಅರ್ಚಕ ಕೃಷ್ಣಪ್ರಸಾದ ಉಡುಪ ಎಂ., ಆಡಳಿತಾಧಿಕಾರಿ ನರಿಯಪ್ಪ ಮಠದ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ವೇಣುಗೋಪಾಲ ನಾಯಕ್ ಕುಳ್ಳಾಜೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ನೇಮಿಚಂದ್ರ ಗೌಡ ಮುದ್ಯ, ಸಂಚಾಲಕ ಗೋಪಾಲ ವಳಾಲುದಡ್ಡು, ಪ್ರಧಾನ ಕಾರ್ಯದರ್ಶಿ ನಾರಾಯಣ ಪೂಜಾರಿ ನೀರಕಟ್ಟೆ, ಕೋಶಾಧಿಕಾರಿ ಸೋಮಸುಂದರ ಕೊಡಿಪಾನ, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ವಸಂತಿಜಯಂತ ಬಿ.ಅತಿಕರಮಜಲು, ಕೋಶಾಧಿಕಾರಿ ಶ್ರೀಧರ ಪೂಜಾರಿ ಬರೆಮೇಲು ಕಾಂಚನ ಸಹಿತ ಬ್ರಹ್ಮಕಲಶೋತ್ಸವ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು, ಭಕ್ತಾದಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here