







ಪೆರ್ನಾಜೆ: ಜನತಾ ನ್ಯೂಸ್ ಕನ್ನಡ ವತಿಯಿಂದ ಆಯೋಜಿಸಲಾಗಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲು ಜನತಾ ಅವಾರ್ಡ್ಸ್ 2026 ಕಾರ್ಯಕ್ರಮ ಬೆಂಗಳೂರಿನ ನಾಗರಭಾವಿ KLE ಲಾ ಕಾಲೇಜಿನ ಸಮೀಪ ಅರಮನೆ ವೆನ್ಯೂವಿನಲ್ಲಿ ನಡೆಯಲಿದೆ.


ಕಾರ್ಯಕ್ರಮದಲ್ಲಿ ಜೇನು ಗಡ್ಡದಾರಿ ,ಕೃಷಿ ಹವ್ಯಾಸಿ ಬರಹಗಾರ ,ಕೃಷಿ ಸಂಶೋಧನೆ ಕಲಾ ನಿರ್ದೇಶಕ ಪೆರ್ನಾಜೆ ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗಳನ್ನು ಹಾಗೂ ಇತರ ಸಾಧಕರಿಗೆ ಗೌರವ ಸಲ್ಲಿಸಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ ಎಂದು ಜನತಾ ಚಾನೆಲ್ ಆರ್ ಎನ್ ಭಾರದ್ವಾಜ್ ಮುಖ್ಯಸ್ಥರು ಹಾಗೂ ಗೋಪಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













