







ಕಾಣಿಯೂರು: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಚಾರ್ವಾಕ ಇಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಜ್ಯೋತಿ ಬಿ.ಯವರು ಮಾರಣಾಂತಿಕ ಖಾಯಿಲೆಯಿಂದ
ಕೆಎಂಸಿ ಆಸ್ಪತ್ರೆ, ಅತ್ತಾವರ ಮಂಗಳೂರಿನಲ್ಲಿ ಒಳರೋಗಿಯಾಗಿ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಜ್ಯೋತಿಯವರಿಗೆ ಚಾರ್ವಾಕ ಶಾಲಾ ಎಸ್ ಡಿ ಎಂ ಸಿ ನೇತೃತ್ವದಲ್ಲಿ ದಾನಿಗಳಿಂದ ಸಂಗ್ರಹಗೊಂಡ ಒಟ್ಟು ರೂ.65,020 ಮೊತ್ತವನ್ನು ಜ್ಯೋತಿಯ ತಾಯಿ ಪುಷ್ಪಾ ಬಾಂತೋಡು ಇವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ , ಚಾರ್ವಾಕ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಲೋಕೇಶ್ ಎಣ್ಮೂರು, ಶಾಲಾ ಮುಖ್ಯಗುರು ರಾಮೇಶಿ ಎಸ್.ರವರು ಹಸ್ತಾಂತರಿಸಿದರು.













