







ಬರಹ : ಡಾ. ವರ್ಷಿಣಿ ಶೆಣೈ


14 ದಿನದ ಮಗು, ಬೆಳಗ್ಗಿನಿಂದ ಒಂದೇ ಸಮನೆ ರಚ್ಚೆ ಹಿಡಿದು ಅಳುತ್ತಿದೆ. ಅತಿಯಾಗಿ ಕೈ ಕಾಲು ಬಡಿಯುತ್ತ, ಮುಖವೆಲ್ಲ ಕೆಂಪಾಗುವಷ್ಟು! ಎಷ್ಟೇ ಸಮಾಧಾನ ಪಡಿಸಿದರೂ ಸಮಾಧಾನವಾಗದಷ್ಟು!!. ಫೋನ್ನಲ್ಲಿ ಮಗುವಿನ ತಾಯಿಯ ಬಳಿ ಮತ್ತಷ್ಟು ಮಾಹಿತಿ ಕೇಳಿದಾಗ, 2-3 ದಿನದಿಂದ ಕೆಮ್ಮು ಮತ್ತು ಶೀತವಿತ್ತು, ಕುಡಿಯುವ ಹಾಲಿನ ಪ್ರಮಾಣವು ಮೊದಲಿಗಿಂತ ಕಡಿಮೆಯಾಗಿತ್ತು, ನಿನ್ನೆ ಇಂದ ಉಸಿರಾಡುವಾಗ ‘ಗೊರ ಗೊರ’ ಶಬ್ದ ಕೇಳುತ್ತಿದೆ, ತಲೆ ಮತ್ತು ಕಾಲು ಬೇರೆ ದೇಹದ ಭಾಗಗಳಿಗಿಂತ ಹೆಚ್ಚು ಬಿಸಿಯಾಗಿದೆ, ಹೊದಿಸಿದ ಹೊದಿಕೆಯನ್ನು ಬೇಡವೆಂದು ಸರಿಸುತ್ತಿದೆ ಎಂದರು. ಇದೆಲ್ಲ ಮಾಹಿತಿಯ ಆಧಾರದ ಮೇಲೆ ಇದಕ್ಕೆ ಹೊಂದುವ ಹೋಮಿಯೋಪಥಿ ಔಷಧಿ ಯನ್ನು ನೀಡಲಾಯಿತು. ಮದ್ದು ಕೊಟ್ಟ 30-45 ನಿಮಿಷದಲ್ಲೇ ಅಳು ನಿಲ್ಲಿಸಿ, ಅರ್ಧ ಗಂಟೆಯೊಳಗೆ ದೇಹದ ಉಷ್ಣಾಂಶ ಸಹಜ ಸ್ಥಿತಿಗೆ ಬಂದಿತು. 2 ದಿನಗಳೊಳಗೆ ಕಫ ಕಡಿಮೆಯಾಗಿ, ಕೆಮ್ಮು ಸಹ ನಿಂತಿತು.



ಸುಮಾರು 75 ವರ್ಷದ ಮಹಿಳೆ, 2 ದಿನದಿಂದ ಅತಿಯಾದ ಚಳಿ, ಜ್ವರದಿಂದ ಬಳಲುತ್ತಿದ್ದಾರೆ. ಮೂತ್ರ ಕೋಶದ ತೊಂದರೆ ಇದ್ದ ಆಕೆ ಸುಮಾರು 3 ವರ್ಷಗಳಿಂದ ಮಲಗಿದ್ದಲ್ಲೇ ಆಗಿದ್ದಾರೆ. ಮೂತ್ರ ವಿಸರ್ಜನೆಗೆಂದು ಕ್ಯಾತಿಟರ್ ಸಹ ಹಾಕಿದ್ದಾರೆ. ಕೆಳಹೊಟ್ಟೆಯ ನೋವು ಸಹ ಇದ್ದ ಅವರಿಗೆ, ಮೂತ್ರ ಪರೀಕ್ಷೆಗೆ ಒಳಪಡಿಸಿದಾಗ ಮೂತ್ರ ನಾಳದ ಸೋಂಕು ಇರುವುದು ತಿಳಿಯಿತು. ಅವರ ದೇಹಸ್ಥಿತಿಗೆ ಹೊಂದುವ ಹೋಮಿಯೋಪಥಿ ಔಷಧಿ ನೀಡಿ ಸೋಂಕನ್ನು ಹಾಗು ಅದರಿಂದ ಕಾಣಿಸಿಕೊಂಡ ಜ್ವರವನ್ನು ಗುಣಪಡಿಸಲಾಯಿತು.
ಜ್ವರ ಎಂಬುದು ದೇಹದಲ್ಲಿರುವ ರೋಗದ ಒಂದು ಚಿಹ್ನೆಯೇ ಹೊರತು, ಅದುವೇ ಒಂದು ರೋಗವಲ್ಲ. ಸಾಮಾನ್ಯ ನೆಗಡಿ, ಕೆಮ್ಮಿನಿಂದ ಹಿಡಿದು, ಅತಿ ಮಾರಕ ದೀರ್ಘ ಕಾಲೀನ ತೊಂದರೆಗಳಾದ ಕ್ಯಾನ್ಸರ್, ಕ್ಷಯ, ಏಡ್ಸ್, ಮುಂತಾದ ರೋಗಗಳಲ್ಲಿ ಸಹ ಜ್ವರ ಬರುತ್ತದೆ. ವೈರಸ್ ಹಾಗು ಬ್ಯಾಕ್ಟೀರಿಯಾಗಳು (ಆಂಟಿಜೆನ್) ನಮ್ಮ ದೇಹಕ್ಕೆ ಹೊಕ್ಕಾಗ, ಪ್ರಕೃತಿ ಸಹಜವಾಗಿಯೇ ದೇಹದಲ್ಲಿ ರೋಗನಿರೋಧಕ ಶಕ್ತಿಯು ಜಾಗ್ರತವಾಗಿ, ಅದರ ವಿರುದ್ಧ ಹೋರಾಡಲು ಆಂಟಿಬಾಡೀಸ್ ಎಂಬುದು, ಸೈನಿಕರಂತೆ ಉತ್ಪತ್ತಿಯಾಗುತ್ತವೆ. ಆಂಟಿಜೆನ್ ಹಾಗು ಆಂಟಿಬಾಡಿ ಗಳ ನಡುವಿನ ಸಮರದಲ್ಲಿ ಉಷ್ಣಾಂಶ ಉತ್ಪತ್ತಿಯಾಗಿ ನಮಗೆ ಜ್ವರವೆಂದು ತೋರುತ್ತದೆ. ಈ ಸಮರವು ನಮ್ಮ ಆರೋಗ್ಯದ ಉಳಿವಿಗಾಗಿ ಪ್ರಕೃತಿ ಕೊಟ್ಟ ಬಳುವಳಿ.
ಅಲ್ಪಕಾಲೀನ ಜ್ವರಗಳಲ್ಲೊಂದಾದ influenza ವೈರಸ್ ಗಳಿಂದ ಬರುವ ಜ್ವರ 3-4 ದಿನಗಳಲ್ಲಿ ಕಡಿಮೆಯಾದರೆ, ದೀರ್ಘಕಾಲೀನ ತೊಂದರೆಗಳಿಂದ ಉಂಟಾಗುವ ಜ್ವರ ವಾರ, ತಿಂಗಳುಗಟ್ಟಲೆ ಕಾಡುತ್ತದೆ.
ದೇಹದ ಉಷ್ಣತೆಯು 98.4 ಈಲಿ ಅಥವಾ 37 ಅಲಿ ಗಿಂತ ಹೆಚ್ಚಾಗಿದ್ದರೆ, ವ್ಯಕ್ತಿಯು ಜ್ವರದಿಂದ ಬಳಲುತ್ತಿದ್ದಾನೆಂದು ಹೇಳಬಹುದು. ಕೆಲವೊಂದು ಜ್ವರಗಳು ಯಾವುದೇ ಔಷಧಿಯ ಸಹಾಯವಿಲ್ಲದೆ ಗುಣವಾದರೆ, ಮತ್ತೆ ಕೆಲವಕ್ಕೆ ಜ್ವರದ ಪೂರ್ಣತೆ ಅರಿತು ಔಷಧಿ ನೀಡಬೇಕಾಗುತ್ತದೆ. ಜ್ವರವಿದ್ದಾಗ ಇದರ ಬಗ್ಗೆ ನಿಮ್ಮ ವೈದ್ಯರ ಬಳಿ ಸಲಹೆ ಪಡೆಯುವುದು ಒಳಿತು.
ಹೋಮಿಯೋಪತಿ ವೈದ್ಯಕೀಯ ಪದ್ಧತಿಯಲ್ಲಿ ಜ್ವರಕ್ಕೆ ಸುಮಾರು 150 ಕ್ಕೂ ಹೆಚ್ಚು ಔಷಧಿಗಳು ಸೂಚಿತವಾಗಿವೆ. ಮೊದಲಿಗೆ ರೋಗಿಯ ಜ್ವರದ ಸ್ವರೂಪ ಅರಿಯಲು ಜ್ವರದ ಚರಿತ್ರೆಯನ್ನು ದಾಖಲು ಮಾಡಲಾಗುತ್ತದೆ. ಅದರಲ್ಲಿ ಜ್ವರ ಎಷ್ಟು ದಿವಸದಿಂದ ಕಾಣಿಸಿಕೊಂಡಿದೆ, ತೀವ್ರತೆ ಎಷ್ಟು, ದಿನದ ಯಾವ ಘಳಿಗೆಯಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ತಿಳಿಯಲಾಗುತ್ತದೆ. ಮುಖ್ಯವಾಗಿ ಜ್ವರದ ಕಾರಣವನ್ನು (ದೈಹಿಕ ಹಾಗು ಮಾನಸಿಕ) ತಿಳಿಯಲು ಒತ್ತು ನೀಡಲಾಗುತ್ತದೆ (ಉದಾ: ಕೋಪ, ಭಯ, ದುಃಖ, ಆಘಾತ, ನಿದ್ದೆ ಕೆಟ್ಟದ್ದು, ಅತಿಯಾಗಿ ತಿಂದದ್ದು, ದೂರ ಪ್ರಯಾಣ, ಅತಿಯಾದ ಬಿಸಿಲಿಗೆ ಅಥವಾ ಮಳೆಗೆ ಮೈ ಒಡ್ಡುವುದು ಮುಂತಾದವು) ಜ್ವರದಲ್ಲಿ ರೋಗಿಯ ಹಸಿವು, ಬಾಯಾರಿಕೆ, ಮಲಮೂತ್ರ, ನಿದ್ರೆಗಳಲ್ಲಿ ಆಗಿರುವ ಬದಲಾವಣೆಗಳನ್ನು ಅರಿಯಲಾಗುತ್ತದೆ. ಅವಶ್ಯವಿದ್ದರೆ ರಕ್ತ, ಮಲ, ಮೂತ್ರ, ಎಕ್ಸ್ ರೇ ಮುಂತಾದ ಪರೀಕ್ಷೆಗಳನ್ನು ಸೂಚಿಸಲಾಗುತ್ತದೆ. ಇವೆಲ್ಲವುಗಳನ್ನು ಒಟ್ಟಾರೆ ಪರಿಗಣಿಸಿ ವ್ಯಕ್ತಿಗೆ ಹೊಂದುವ ಹೋಮಿಯೋಪತಿ ಔಷಧಿಯನ್ನು ನಿರ್ಧರಿಸುತ್ತೇವೆ. ಒಂದೇ ಕುಟುಂಬದ ಇಬ್ಬರು ವ್ಯಕ್ತಿಗಳಿಗೆ ಜ್ವರವಿದ್ದರೆ ಅವರಿಬ್ಬರಿಗೂ ಸೂಚಿತವಾಗುವ ಔಷಧಿಗಳು ಬೇರೆಬೇರೆಯಾಗಿರುತ್ತದೆ.
ಅದೇ ಜ್ವರ ಮತ್ಯಾವುದಾದರೂ ದೀರ್ಘಕಾಲೀನ ರೋಗಗಳಿಂದ ಬರುತ್ತಿದ್ದರೆ ಅವನ ಮೂಲ ವ್ಯಕ್ತಿತ್ವದ ಅಧ್ಯಯನ ಮಾಡಿ ಔಷಧಿಯನ್ನು ಆಯ್ಕೆಮಾಡಲಾಗುತ್ತದೆ.
ಎಲ್ಲ ತರಹದ ಜ್ವರಗಳಲ್ಲಿ ರೋಗಿಗೆ ಹೊಂದುವ ಅಲ್ಪ ಪ್ರಮಾಣದ ಹೋಮಿಯೋಪಥಿ ಔಷಧದಿಂದ ಆತನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ತೊಂದರೆಯನ್ನು ಗುಣಪಡಿಸುವುದರಿಂದ ರೋಗವು ಕಡಿಮೆ ಅವಧಿಯಲ್ಲೂ, ಯಾವುದೇ ಅಡ್ಡ ಪರಿಣಾಮವಿಲ್ಲದೆ ಗುಣವಾಗುವುದರ ಜೊತೆಗೆ, ಮತ್ತೆ ಮರುಕಳಿಸುವ ಸಾಧ್ಯತೆಯೂ ಬಹಳ ಕಡಿಮೆ.

ಡಾ. ವರ್ಷಿಣಿ ಶೆಣೈ,BHMS, SCPH plus.
ವಿಜಯ ಹೋಮಿಯೋ ಕ್ಲಿನಿಕ್, ಪುತ್ತೂರು ಮತ್ತು ಬೆಳ್ಳಾರೆ
Ph.no: 9740681381
E-mail: [email protected]










