







ಪುತ್ತೂರು: ಹನುಮಗಿರಿಯ ಬ್ರಹ್ಮಕಲಶೋತ್ಸವಕ್ಕೆ ತೆಂಗಿನಕಾಯಿ ಸಮರ್ಪಣೆಗಾಗಿ ಪುತ್ತೂರು ನಗರದ ವಿವಿಧ ಕೇಂದ್ರ ಗಳನ್ನು ಗುರುತಿಸಿದ್ದಂತೆ ತೆಂಗಿನ ಕಾಯಿ ಸಂಗ್ರಹಿಸುವ ಕಾರ್ಯಕ್ರಮ ನಡೆಯಿತು.


ಕೇಂದ್ರಗಳಾದ ಬೊಳುವಾರು ಆಂಜನೇಯ ಮಂತ್ರಾಲಯ, ಬನ್ನೂರು ಶಿವಪಾರ್ವತಿ ದೇವಸ್ಥಾನ, ಕಲ್ಲೇಗ ಶ್ರೀ ದೇವಿ ಭಜನಾಮಂದಿರ, ಮಹಾಲಿಂಗೇಶ್ವರ ಕಟ್ಟೆ ಕಾರ್ಜಾಲು, ವಿಜಯ ಸುಪಾರಿ ಹಾಲ್, ಶ್ರೀ ರಾಘವೇಂದ್ರ ಸ್ವಾಮಿ ಮಠ ಕಲ್ಲಾರೆಯಿಂದ ತೆಂಗಿನಕಾಯಿಯನ್ನು ಸಂಗ್ರಹಿಸಲಾಯಿತು.



ಪುತ್ತೂರು ನಗರದ ನಾರಿಕೇಳ ಸಂಗ್ರಹ ಸಮಿತಿಯ ಸಂಚಾಲಕ ಸುಂದರ ಪೂಜಾರಿ ಬಡಾವು ರವರ ನೇತೃತ್ವದಲ್ಲಿ ನಗರ ಸಮಿತಿ ಅಧ್ಯಕ್ಷ ಲೋಕೇಶ ಹೆಗ್ಡೆಯವರ ಉಪಸ್ಥಿತಿಯಲ್ಲಿ ಸಂಗ್ರಹಣ ಕಾರ್ಯಕ್ರಮ ನಡೆಯಿತು. ಕಲ್ಲೇಗ ದೈವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಅಜಿತ್ ಕುಮಾರ್, ಕಲ್ಲೇಗ ರೂರಲ್ ಡೆವೆಲಪ್ಮೆಂಟ್ ಟ್ರಸ್ಟ್ನ ಅಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ಗಂಗಾದರ, ಮಾಧವ ಕಲ್ಲೇಗ, ವಿಶ್ವನಾಥ ಗೌಡ ಬನ್ನೂರು, ರಾಧಾಕೃಷ್ಣ ನಂದಿಲ, ರಾಮಭಟ್ ವಿಜಯಾ ಸುಪಾರಿ, ಮತ್ತು ಮನೋಹರ ಕಲ್ಲಾರೆಯವರು ಸಹಕರಿಸಿದರು. ಸುಮಾರು 2ಸಾವಿರ ದಷ್ಟು ತೆಂಗಿನಕಾಯಿ ಸಂಗ್ರಹವಾಗಿದ್ದು, ಹೊರೆ ಕಾಣಿಕೆಯೊಂದಿಗೆ ಇದನ್ನು ಹನುಮಗಿರಿಗೆ ತಲುಪಿಸಲಾಯಿತು.










