ಉದ್ಯಮಿ ಎಂ.ಆರ್ ಜಯಕುಮಾರ್ ರೈರವರ ಹುಟ್ಟು ಹಬ್ಬದಂಗವಾಗಿ ಪ್ರಜ್ಞಾ ಆಶ್ರಮಕ್ಕೆ ವ್ಹೀಲ್ ಚೇರ್ ಕೊಡುಗೆ

0

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಸಿಟಿ ಪೂರ್ವಾಧ್ಯಕ್ಷ ಹಾಗೂ ಉದ್ಯಮಿ ಎಂ.ಆರ್ ಜಯಕುಮಾರ್ ರೈ ಹಾಗೂ ಅವರ ಪತ್ನಿ ಸ್ವರ್ಣ ಜೆ.ರೈರವರ ಜೊತೆಗೂಡಿ ಹುಟ್ಟು ಹಬ್ಬದಂಗವಾಗಿ ಬೀರಮಲೆ ಪ್ರಜ್ಞಾ ಆಶ್ರಮಕ್ಕೆ ವ್ಹೀಲ್ ಚೇರ್, ಸಿಹಿತಿಂಡಿ, ಪಾನೀಯ ಅನ್ನು ಕೊಡುಗೆಯಾಗಿ ರೋಟರಿ ಕ್ಲಬ್ ಪುತ್ತೂರು ಸಿಟಿ ಅಧ್ಯಕ್ಷ ಉಲ್ಲಾಸ್ ಪೈರವರ ಮೂಲಕ ಆಶ್ರಮದ ಮುಖ್ಯಸ್ಥ ಅಣ್ಣಪ್ಪ ದಂಪತಿಗೆ  ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಪ್ರಜ್ಞಾ ಆಶ್ರಮದ ಸದಸ್ಯರು ಜಯಕುಮಾರ್ ರೈರವರ ಹುಟ್ಟು ಹಬ್ಬದ ಆಚರಣೆಯನ್ನು ದೀಪ ಬೆಳಗಿಸುವ ಹಾಗೂ ಸಿಹಿ ತಿಂಡಿ ನೀಡುವ ಮೂಲಕ ಆಚರಿಸಲಾಯಿತು. ಅಲ್ಲದೆ ಉದ್ಯಮಿ ಗೋವಾ ಬಂಟರ ಸಂಘದ ಅಧ್ಯಕ್ಷ ಶಶಿಧರ್ ರೈರವರು ಆಶ್ರಮಕ್ಕೆ ರೂ.5 ಸಾವಿರ ನೀಡಿ ಶುಭ ಕೋರಿದರು. ಹುಟ್ಟು ಹಬ್ಬವನ್ನು ಆಚರಿಸಿದ ಉದ್ಯಮಿ ಜಯಕುಮಾರ್ ರೈರವರು ವಿಶೇಷ ಚೇತನರನ್ನು ಬಹಳ ಕಾಳಜಿಯಿಂದ ಆರೈಕೆ ಮಾಡುತ್ತಿರುವ ಅಣ್ಣಪ್ಪ ದಂಪತಿಗಳ ಕರ್ತವ್ಯವನ್ನು ಶ್ಲಾಘಿಸಿದರು ಅಲ್ಲದೆ ಇಂತಹ ಸಂಸ್ಥೆಗೆ ಕೊಡುಗೆ ನೀಡಲು ಸಂತೋಷ ಆಗುತ್ತದೆ ಎಂದರು.

ರೋಟರಿ ಕ್ಲಬ್ ಪೂರ್ವಾಧ್ಯಕ್ಷರಾದ ಜ್ಯೋ ಡಿ’ಸೋಜ, ಜೋನ್ ಕುಟಿನ್ಹಾ, ನಟೇಶ್ ಉಡುಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಜ್ಞಾ ಆಶ್ರಮದ ಅಣ್ಣಪ್ಪರವರು ಜಯಕುಮಾರ್ ರೈರವರ ಕೊಡುಗೆಯನ್ನು ಶ್ಲಾಘಿಸಿ ವಂದಿಸಿದರು.

LEAVE A REPLY

Please enter your comment!
Please enter your name here