







ಕಾಣಿಯೂರು: ಚಾರ್ವಾಕ ಸ. ಉ.ಹಿ. ಪ್ರಾ. ಶಾಲೆಯ ವಿದ್ಯಾರ್ಥಿನಿ ಜ್ಯೋತಿ ಯವರು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜ್ಯೋತಿಯವರ ಚಿಕಿತ್ಸೆಗಾಗಿ ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಸಂಚಾಲಕರು, ಶಿಕ್ಷಕರಿಂದ ಸಂಗ್ರಹಗೊಂಡ ರೂ 10000 ಮೊತ್ತವನ್ನು ಸಂಸ್ಥೆಯ ಸಂಚಾಲಕ ಜಯಸೂರ್ಯ ರೈ ಮಾದೋಡಿ ಅವರ ನೇತೃತ್ವದಲ್ಲಿ ಚಾರ್ವಾಕ ಶಾಲಾ ಮುಖ್ಯಗುರುಗಳಿಗೆ ಹಸ್ತಾಂತರ ಮಾಡಲಾಯಿತು.












