ಎ.11ರಿಂದ ಎ.ವಿ.ಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನಲ್ಲಿ ಬೇಸಿಗೆ ಶಿಬಿರ

0

ಪುತ್ತೂರು: ಬನ್ನೂರು ಅಲುಂಬುಡದಲ್ಲಿ ಕಾರ್ಯಚರಿಸುತ್ತಿರುವ ಎವಿಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಎ.11 ರಿಂದ 16ರ ತನಕ ಬೇಸಿಗೆ ನಡೆಯಲಿದೆ. ಎಲ್ ಕೆ ಜಿ ಯಿಂದ 10ನೇ ತರಗತಿವರೆಗಿನ ಮಕ್ಕಳಿಗೆ ನಡೆಯುವ ಈ ಶಿಬಿರದಲ್ಲಿ ನಾಟಕ, ಕಥೆ, ಕವನ ರಚನೆ, ಕರಕುಶಲ ಕಲೆ, ಚಿತ್ರಕಲೆ, ಕಸೂತಿ, ಶಿಶು ಗೀತೆ, ಯೋಗ, ನೃತ್ಯ, ಆಟೋಟ ಇತ್ಯಾದಿಗಳನ್ನು ಕಲಿಸಿಕೊಡಲಾಗುವುದು.


ಪ್ರತಿದಿನ ಬೆಳಿಗ್ಗೆ 9.30 ರಿಂದ ಸಂಜೆ 4 ಗಂಟೆಯವರೆಗೆ ನಡೆಯುವ ಈ ಶಿಬಿರವು ನಾಳೆ ಆರಂಭವಾಗಲಿದ್ದು ಮೂಡುಬಿದರೆ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ಚಿತ್ರಕಲಾ ಶಿಕ್ಷಕ ಭಾಸ್ಕರ ನೆಲ್ಯಾಡಿ ಅವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಶಾರದಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ದಯಾಮಣಿ ಭಾಗವಹಿಸಲಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಅಧ್ಯಕ್ಷ ವೆಂಕಟರಮಣ ಗೌಡ ಕಳುವಾಜೆ ರವರು ವಹಿಸಿಕೊಳ್ಳಲಿರುವರು. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರಮೇಶ ಉಳಯ, ತಾರಾನಾಥ ಸವಣೂರು, ಚರಣ್ ಕುಮಾರ್ ಪುದು, ಕು.ವಿದ್ಯಾಶ್ರೀ, ದಿನೇಶ್ ಎಂ. ಪಿ , ಡಾ. ಅನುಪಮಾ, ನಿಖಿತಾ ಪಾಣಜೆಯವರು ಭಾಗವಹಿಸಲಿರುವರು.


ಸನ್ಮಾನ:
ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆಗೈದಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಬೆಂಗಳೂರು ಇವರಿಂದ ವಿದ್ಯಾರತ್ನ ಪ್ರಶಸ್ತಿಗೆ ಭಾಜನರಾದ ಸುಳ್ಯ ಶ್ರೀ ಶಾರದಾ ಪದವಿಪೂರ್ವ ಕಾಲೇಜು ಇಲ್ಲಿನ ಪ್ರಾಂಶುಪಾಲೆ ದಯಾಮಣಿ ಯವರನ್ನು ಸನ್ಮಾನಿಸಲಾಗುವುದು. ಎ.19ರಂದು ಸಮರೋಪ ಕಾರ್ಯಕ್ರಮ ನಡೆಯಲಿದ್ದು ಸಾಕ್ಸೋ ಫೋನ್ ವಾದಕ ವೇಣುಗೋಪಾಲ್ ಇವರನ್ನು ಎವಿಜಿ ಕಲಾಸಿರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ಗಾನಸಿರಿ ಕಲಾ ಶಾಲೆಯ ನಿರ್ದೇಶಕರು ಡಾ. ಕಿರಣ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಶಿಬಿರದಲ್ಲಿ ಭಾಗವಹಿಸುವ ಮಕ್ಕಳಿಗೆ ಉಪಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗುವುದು. ಭಾಗವಹಿಸಲು ಇಚ್ಚಿಸುವ ಮಕ್ಕಳು ಎ.11ರಂದು ಸ್ಥಳದಲ್ಲಿ ನೇರವಾಗಿ ನೋಂದಣಿ ಮಾಡಿಕೊಳ್ಳಬಹುದು. ಎಂದು ಶಾಲಾ ಸಂಚಾಲಕರಾದ ಎ.ವಿ ನಾರಾಯಣ ಹಾಗೂ ಶಿಬಿರ ನಿರ್ದೇಶಕಿ ರಾಧಾ ರವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

LEAVE A REPLY

Please enter your comment!
Please enter your name here