ಏ.20:ಅಕ್ಷಯ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ “ಪ್ರಿನ್ಸ್ ಅಂಡ್ ಪ್ರಿನ್ಸೆಸ್ ಫ್ಯಾಷನ್ ಶೋ- ಸೀಸನ್ 2 ಸ್ಪರ್ಧೆ

0

ಪುತ್ತೂರು: ತನ್ನ ವಿನೂತನವಾದ ಸಾಧನೆ ಹಾಗೂ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿರುವ ಅಕ್ಷಯ ಕಾಲೇಜು ಪುತ್ತೂರಿನ ಫ್ಯಾಶನ್ ಡಿಸೈನ್ ವಿಭಾಗ ಹಾಗೂ ಸಾಂಸ್ಕೃತಿಕ ಮತ್ತು ಲಲಿತಕಲಾ ಸಂಘದ ವತಿಯಿಂದ ಏ.20ರಂದು ದ.ಕ ಜಿಲ್ಲಾ ಮಟ್ಟದ ಪ್ರಿನ್ಸ್ ಅಂಡ್ ಪ್ರಿನ್ಸೆಸ್ ಫ್ಯಾಷನ್ ಶೋ -ಸೀಸನ್ 2 ಸ್ಪರ್ಧೆಯನ್ನು ಆಯೋಜಿಸಿದೆ. ಬೆಳಿಗ್ಗೆ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದ್ದು ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್ ರವರು ಅಧ್ಯಕ್ಷತೆ ವಹಿಸಲಿದ್ದಾರೆ.

ಶಂಕರ್ ಗ್ರೂಪ್ ಪುತ್ತೂರು ಇದರ ವ್ಯವಸ್ಥಾಪಕ ನಿರ್ದೇಶಕ ಸತ್ಯ ಶಂಕರ್ ಭಟ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಅಂತರಾಷ್ಟ್ರೀಯ ರೂಪದರ್ಶಿ ತಾಷ್ಮಾ ಚೇತನ್ ಭಾಗವಹಿಸಲಿದ್ದಾರೆ. ಅಪರಾಹ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ಅಕ್ಷಯ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಯಂತ ನಡುಬೈಲ್ ರವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಮಂಗಳೂರು ಮರ್ಸಿ ಬ್ಯೂಟಿ ಅಕಾಡೆಮಿಯ ಮಾಲಕಿ ಮರ್ಸಿ ವೀಣಾ ಡಿ ‘ಸೋಜಾ, ಪುತ್ತೂರು ರೆಡ್ ಬುಟಿಕ್ ಮತ್ತು ಸ್ಟೈಲ್ ಸ್ಟುಡಿಯೋ ಮಾಲಕಿ ಮೋನಿಷಾ ಕಂಪರವರು ಭಾಗವಹಿಸಲಿದ್ದಾರೆ ಎಂದು ಅಕ್ಷಯ ಕಾಲೇಜಿನ ಪ್ರಾಂಶುಪಾಲ ಸಂಪತ್ ಪಿ.ಪಕ್ಕಳ, ಆಡಳಿತಾಧಿಕಾರಿ ಅರ್ಪಿತ್ ಟಿ.ಎರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

3 ವಿಭಾಗದಲ್ಲಿ ಸ್ಪರ್ಧೆಗಳು..ಸ್ಪರ್ಧೆಗಳಲ್ಲಿ ವಿಭಾಗ-1 ರಲ್ಲಿ ವಯಸ್ಸು 5 ರಿಂದ 9, ವಿಭಾಗ-2 ರಲ್ಲಿ ವಯಸ್ಸು 10 ರಿಂದ 14, ವಿಭಾಗ-3ರಲ್ಲಿ ವಯಸ್ಸು 15 ರಿಂದ 18 ಹೀಗೆ ಒಟ್ಟು 3 ವಿಭಾಗಗಳಲ್ಲಿ ಪ್ರತ್ಯೇಕವಾಗಿ ನಡೆಯಲಿವೆ. ರೂ. 200/- ಪ್ರವೇಶ ಶುಲ್ಕವಿದ್ದು, ಪ್ರತೀ ವಿಭಾಗದಲ್ಲೂ 6 ಪ್ರಶಸ್ತಿಗಳಿವೆ ಮತ್ತು ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ವಿತರಿಸಲಾಗುತ್ತದೆ.


ಈ ಬಾರಿ ನೇರ ಸ್ಪರ್ಧೆ..
ಸೀಸನ್ ಒಂದರಲ್ಲಿ 180ಕ್ಕೂ ಅಧಿಕ ಸ್ಪರ್ದಿಗಳು ಭಾಗವಹಿಸಿದ್ದು, ಆಡಿಶನ್ ಹಾಗೂ ಫೈನಲ್ ಪ್ರತ್ಯೇಕವಾಗಿ ನಡೆದಿರುತ್ತದೆ. ಆದರೆ ಸೀಸನ್ 2 ರಲ್ಲಿ ಯಾವುದೇ ಆಡಿಶನ್ ಇರದೆ ನೇರ ಸ್ಪರ್ಧೆಯು ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ  9901320353, 9972405809, 9108009795 ಸಂಪರ್ಕಿಸಬಹುದು ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here