ಜಾತ್ರೆ ಸಂದರ್ಭ ಪಡೀಲ್ ಉತ್ಸವದಲ್ಲಿ ಧ್ವನಿವರ್ಧಕ ಬಳಕೆಯಲ್ಲಿ ಷರತ್ತು ಉಲ್ಲಂಘನೆ – ಮೂವರ ವಿರುದ್ಧ ಪ್ರಕರಣ ದಾಖಲು

0

ಪುತ್ತೂರು: ಪುತ್ತೂರು ಜಾತ್ರೆಯ ಸಂದರ್ಭ ಪಡೀಲ್‌ನಲ್ಲಿ ರಾತ್ರಿ ನಡೆದ ಪಡೀಲ್ ಉತ್ಸವ ಎಂಬ ಕಾರ್ಯಕ್ರಮದಲ್ಲಿ ಸಂಘಟಕರು ಧ್ವನಿವರ್ಧಕ ಬಳಕೆಯಲ್ಲಿ ಷರತ್ತು ಉಲ್ಲಂಘಿಸಿರುವ ನಿಟ್ಟಿನಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.


ಕಾರ್ಯಕ್ರಮದ ನೇತೃತ್ವ ವಹಿಸಿದ ಪಡೀಲ್ ಉತ್ಸವ ಸಮಿತಿ ಅಧ್ಯಕ್ಷ ಪ್ರಜ್ವಲ್ ರೈ ಬನ್ನೂರು, ಟೈಮ್ ಆಂಡ್ ಟೈಡ್ ಮಂಗಳೂರು ಇದರ ಸಂಚಾಲಕ ಸುರೇಶ್ ರಾವ್ ಕೊಕ್ಕಡ ಮತ್ತು ಶಿವಕುಮಾರ್ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎ.16ರಂದು ರಾತ್ರಿ ಪಡೀಲ್‌ನಲ್ಲಿ ನಡೆದ ಪಡೀಲ್ ಉತ್ಸವಕ್ಕೆ ರಾತ್ರಿ ಗಂಟೆ 10ರ ತನಕ ಧ್ವನಿವರ್ಧಕ ಬಳಸುವ ಷರತ್ತಿಗೆ ಒಳಪಟ್ಟು ಧ್ವನಿವರ್ಧಕ ಉಪಯೋಗಿಸಲು ಅನುಮತಿ ನೀಡಲಾಗಿತ್ತು. ಆದರೆ ರಾತ್ರಿ ಸಮಯ ಪೊಲೀಸರು ರೌಂಡ್ಸ್ ಸಮಯದಲ್ಲಿ ರಾತ್ರಿ ಗಂಟೆ 10ರ ನಂತರವೂ ಪಡೀಲ್ ಉತ್ಸವ ನಡೆಯತ್ತಿದ್ದು, ಈ ಕುರಿತು ಆಯೋಜಕರಲ್ಲಿ ಧ್ವನಿವರ್ಧಕವನ್ನು ಅಳವಡಿಸುವ ಕುರಿತು ಸರ್ವೋಚ್ಚ ನ್ಯಾಯಾಲಯವು ಹೊರಡಿಸಿದ ಆದೇಶದ ಬಗ್ಗೆ ತಿಳಿಸಿ ಧ್ವನಿವರ್ಧಕವನ್ನು ಸ್ಥಗಿತಗೊಳಿಸುವಂತೆ ವಿನಂತಿಸಿದರೂ ಕೂಡಾ ಆಯೋಜಕರು ಧ್ವನಿವರ್ಧಕ ಸ್ಥಗಿತಗೊಳಿಸದೆ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಧ್ವನಿವರ್ಧಕವನ್ನು ಉಪಯೋಗಿಸಿ ಕಾರ್ಯಕ್ರಮವನ್ನು ಮುಂದುವರಿಸಿದ್ದಾರೆ ಎಂದು ಆರೋಪಿಗಳ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here