






ಪುತ್ತೂರು : ಸವಣೂರು ಗ್ರಾಮದ ಮಾಲೆತ್ತಾರು ಗ್ರಾಮ ದೈವ ಶಿರಾಡಿ, ಪರಿವಾರ ದೈವಗಳ ದೈವಸ್ಥಾನದ ಆಶ್ರಯದಲ್ಲಿ ಎ. 2 ರಂದು ರಾತ್ರಿ ಶಿರಾಡಿ ಗ್ರಾಮ ದೈವದ ಪ್ರಾಯಶ್ಚಿತ್ತ ನೇಮೋತ್ಸವ, ಅನ್ನಸಂತರ್ಪಣೆ ನಡೆಯಿತು.



ಎ. 6 ಮತ್ತು 7 ರಂದು ಶ್ರೀ ಶಿರಾಡಿ ಗ್ರಾಮ ದೈವ, ಮಹಮ್ಮಾಯಿ ಅಮ್ಮನವರ ಗೊಂದೋಳು ಪೂಜೆ ಹಾಗೂ ಪರಿವಾರ ದೈವಗಳ ನೇಮೋತ್ಸವ ಹಾಗೂ ಅನ್ನಸಂತರ್ಪಣೆ ನಡೆಯಿತು. ಎ. 8 ಮತ್ತು 9 ರಂದು ಶ್ರೀ ಶಿರಾಡಿ ಗ್ರಾಮ ದೈವ, ಪರಿವಾರ ದೈವಗಳ ದೊಂಪದ ಬಲಿ ನೇಮೋತ್ಸವ ಗ್ರಾಮ ದೈವಸ್ಥಾನ ಕಂರ್ಬಡ್ಕದಲ್ಲಿ ನಡೆಯಿತು ಹಾಗೂ ಎ. 8 ರಂದು ರಾತ್ರಿ ಸವಣೂರು ಮಾಲೆತ್ತಾರು ದೇವಸ್ಥಾನದಲ್ಲಿ ಅನ್ನಸಂತರ್ಪಣೆ ನಡೆಯಿತು.




ಎ. 9 ರಂದು ರಾತ್ರಿ ಸುಣ್ಣಾಜೆ ಬಂಗೋಳಿಯಲ್ಲಿ ಗ್ರಾಮ ದೈವ, ಗುಳಿಗ ದೈವದ ನೇಮೋತ್ಸವ ನಡೆದು ಮಾರಿ ಹೊರಡುವ ಕಾರ್ಯಕ್ರಮ ಹಾಗೂ ಅನ್ನಸಂತರ್ಪಣೆ ಜರಗಿತು. ದೈವಸ್ಥಾನದ ಆಡಳಿತ ಮೊಕ್ತೇಸರ ವೆಂಕಪ್ಪ ಶೆಟ್ಟಿ ಸವಣೂರುಗುತ್ತು ಮತ್ತು ಸಮಿತಿಯ ಅಧ್ಯಕ್ಷ ದಯಾನಂದ ಮಾಲೆತ್ತಾರು, ಕಾರ್ಯದರ್ಶಿ ಚೇತನ್ ಕುಮಾರ್ ಕೋಡಿಬೈಲು ಮತ್ತು ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮದ ಎಲ್ಲಾ ಗ್ರಾಮಸ್ಥರು ಉಪಸ್ಥಿತರಿದ್ದರು










