ಓಲಾಡಿ ಸುವರ್ಣ ಕುಟುಂಬ ತರವಾಡಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

0

ಪುತ್ತೂರು : ತಾಲೂಕಿನ ಶಾಂತಿಗೋಡು ಗ್ರಾಮದ ಸುವರ್ಣ ಕುಟುಂಬ ತರವಾಡು ಓಲಾಡಿನಲ್ಲಿ ಏ.21ರಿಂದ ಏ.25ವರೆಗೆ ಕುಕ್ಕೇ ಶ್ರೀ ಸುಬ್ರಹ್ಮಣ್ಯದ ಪರ್ವತಮುಖ ವೇದ ಮೂರ್ತಿ ರಘುರಾಮ ಅಮ್ಮಣ್ಣಾಯರ ನೇತೃತ್ವದಲ್ಲಿ ನಡೆಯಲಿರುವ ಧರ್ಮದೈವ ಜುಮಾದಿ, ಜುಮಾದಿ ಬಂಟ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಮತ್ತು ತರವಾಡು ಮನೆಯ ಗೃಹಪ್ರವೇಶ ಹಾಗೂ ನೇಮೋತ್ಸವ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಆರಂಭಗೊಂಡಿದ್ದು , ಏ.22ರಂದು ಪ್ರಾತಃಕಾಲ ಮಹಾಗಣಪತಿ ಹೋಮ ನೆರವೇರಿತು. ಬಳಿಕ ಗಂಟೆ 9 ರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಗಂಟೆ 11.20ರ ನಂತರ ಮಿಥುನ ಲಗ್ನದಲ್ಲಿ ಗೃಹಪ್ರವೇಶ , ಮುಡಿಪು ಸೇವೆ, ಸತ್ಯನಾರಾಯಣ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ಜರುಗಿತು. ಸಾಯಂಕಾಲ ಗಂಟೆ 6 ರಿಂದ ಸ್ಥಳಶುದ್ದಿ, ಸಪ್ತಶುದ್ದಿ, ದೇವತಾ ಪ್ರಾರ್ಥನೆ, ವಾಸ್ತು ರಕ್ಷೋಘ್ನ ಹೋಮ, ವಾಸ್ತು ಬಲಿ, ಬಿಂಬ ಶುದ್ದಿ, ಬಿಂಬಾಧಿವಾಸ, ಪ್ರಾಕಾರ ಬಲಿ ಬಳಿಕ ಪ್ರಸಾದ ವಿತರಣೆ ನಡೆದು ಅನ್ನಸಂತರ್ಪಣೆಯು ನಡೆಯಿತು.


ಈ ವೇಳೆ ಕುಟುಂಬದ ಯಜಮಾನ ನಾರಾಯಣ ಪೂಜಾರಿ ಓಲಾಡಿ , ಅಧ್ಯಕ್ಷ ಸಚ್ಚಿಂದ್ರ ಸುವರ್ಣ ಬೊಳಿಯಾಲ , ಕಾರ್ಯದರ್ಶಿ ಕಿಶೋರ್ ಕುಮಾರ್ ಬಿ ಮತ್ತು ಖಜಾಂಚಿ ವಿನಯ ಕುಮಾರ್ ಬಿ ಸಹಿತ ಸುವರ್ಣ ಕುಟುಂಬ ಸೇವಾ ಟ್ರಸ್ಟ್ ನ ಎಲ್ಲಾ ಸದಸ್ಯರು , ಕುಟುಂಬ ವರ್ಗದವರು ಹಾಗೂ ಭಕ್ತಾದಿಗಳು ಹಾಜರಿದ್ದರು.

ಇಂದು ಓಲಾಡಿಯಲ್ಲಿ…
ಏ.23ರಂದು ಬೆಳಿಗ್ಗೆ ಗಂಟೆ 6.೦೦ರಿಂದ ಮಹಾಗಣಪತಿ ಹೋಮ, ಪಂಚವಿಂಶತಿ ಕಲಶ ಪ್ರತಿಷ್ಠೆ, ಕಲಶ ಪೂಜೆ ನಡೆಯಿತು. ಬೆಳಿಗ್ಗೆ 8.೦2ರ ವೃಷಭಲಗ್ನ ಶುಭ ಮುಹೂರ್ತದಲ್ಲಿ ಧರ್ಮದೈವ ಜುಮಾದಿ, ಜುಮಾದಿ ಬಂಟ, ವರ್ಣಾರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಕೊರತ್ತಿ, ಕಲ್ಲಲ್ತಾಯ ಗುಳಿಗ, ಪುನಪ್ರತಿಷ್ಠೆ ಬ್ರಹ್ಮ ಕಲಶಾಭಿಷೇಕ, ಮಹಾಪೂಜೆ, ಪ್ರಾರ್ಥನೆ, ಅನ್ನಸಂತರ್ಪಣೆ. ಸಂಜೆ ಗಂಟೆ 5.೦೦ ಕ್ಕೆ ದೈವಗಳ ಭಂಡಾರ ತೆಗೆದು ರಾತ್ರಿ ಗಂಟೆ 7.೦೦ಕ್ಕೆ ಕಲ್ಲಲ್ತಾಯ ಗುಳಿಗ ನೇಮ, ರಾತ್ರಿ ಗಂಟೆ 9.೦೦ಕ್ಕೆ ಅನ್ನಸಂತರ್ಪಣೆ ರಾತ್ರಿ ಗಂಟೆ 9.3೦ಕ್ಕೆ ವರ್ಣಾರ, ಪಂಜುರ್ಲಿ ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಕೊರತ್ತಿ ನೇಮ ನಡೆಯಲಿದೆ.


ಏ.24ರಂದು ಪ್ರಾತಃ ಕಾಲ ಧರ್ಮದೈವ ಜುಮಾದಿ, ಜುಮಾದಿ ಬಂಟ ದೈವದ ನೇಮ, ಮಧ್ಯಾಹ್ನ 1.೦೦ಕ್ಕೆ :ಅನ್ನಸಂತರ್ಪಣೆ,ಏ.25ರಂದು ದೈವಗಳಿಗೆ ತಂಬಿಲ ನಡೆಯಲಿದೆಯೆಂದು ಸುವರ್ಣ ಕುಟುಂಬ ಓಲಾಡಿ ಸೇವಾ ಟ್ರಸ್ಟ್ ನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here