







ಪುತ್ತೂರು: ಕೋಡಿಂಬಾಡಿಯ ಶಾಂತಿನಗರ ಸರ್ಕಾರಿ ಪ್ರೌಢ ಶಾಲೆಗೆ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಲಭಿಸಿದೆ.


ಪರೀಕ್ಷೆಗೆ ಹಾಜರಾದ ಎಲ್ಲಾ 29 ವಿದ್ಯಾರ್ಥಿಗಳು ಉತ್ತೀರ್ಣಗೊಳ್ಳುವ ಮೂಲಕ ಈ ಸಾಧನೆ ಮಾಡಲಾಗಿದೆ. ಡಿಸ್ಟಿಂಕ್ಷನ್ ನಲ್ಲಿ 7, ಪ್ರಥಮ ದರ್ಜೆಯಲ್ಲಿ 20 ಮತ್ತು ದ್ವೀತೀಯ ದರ್ಜೆಯಲ್ಲಿ ಈರ್ವರು ತೇರ್ಗಡೆಯಾಗಿದ್ದಾರೆ.



593 ಅಂಕ ಗಳಿಸಿರುವ ಪವನ್ ಶಾಲೆಗೆ ಪ್ರಥಮ ಮತ್ತು 591 ಅಂಕ ಗಳಿಸಿರುವ ಧನ್ವಿತ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ದಿಶಾಲ್ 572, ಅನ್ವಿತಾ 571 ಮತ್ತು ಚಿಂತನ 561 ಅಂಕ ಗಳಿಸಿದ್ದಾರೆ ಎಂದು ಮುಖ್ಯೋಪಾಧ್ಯಾಯ ವಿಷ್ಣುಪ್ರಸಾದ್ ಸಿ. ತಿಳಿಸಿದ್ದಾರೆ










