ಕಡಬ ಸರಸ್ವತೀ ಪ್ರೌಢ ಶಾಲೆ: ಎಸ್.ಎಸ್.ಎಲ್.ಸಿ ಪರೀಕ್ಷೆ ಶೇ.97 ಫಲಿತಾಂಶ

0

ಕಡಬ ಸರಸ್ವತೀ ಪ್ರೌಢ ಶಾಲೆ: ಎಸ್.ಎಸ್.ಎಲ್.ಸಿ ಪರೀಕ್ಷೆ ಶೇ.97 ಫಲಿತಾಂಶ

ಕಡಬ: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಕಡಬ ಸರಸ್ವತೀ ಪ್ರೌಢಶಾಲೆಯಿಂದ ಒಟ್ಟು 33 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 07 ಡಿಸ್ಟಿಂಕ್ಷನ್, 15 ಪ್ರಥಮ ಶ್ರೇಣಿ, 8 ದ್ವಿತೀಯ ಶ್ರೇಣಿಯೊಂದಿಗೆ ಹಾಗೂ 2 ತೃತೀಯ ಶ್ರೇಣಿಯೊಂದಿಗೆ ಉತ್ತೀರ್ಣಗೊಂಡು ಶಾಲಾ ಫಲಿತಾಂಶ ಶೇ 97% ದಾಖಲಾಗಿದೆ.


ಕೇನ್ಯ ಗ್ರಾಮದ ಕಾಯಂಬಾಡಿ ಮನೆ ಸೀತಾರಾಮ ಗೌಡ ಕೆ ಹಾಗೂ ಯೋಗಿತ ಕೆ ದಂಪತಿ ಪುತ್ರಿ ಸಿಂಚನ ಕೆ ಎಸ್ 584(93.44%) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾಳೆ, ಕೊಣಾಜೆ ಗ್ರಾಮದ, ಬೊಳೋಳಿ ಮನೆಯ ನಾರಾಯಣ ಗೌಡ ಬಿ ಹಾಗೂ ಪುಷ್ಪಾವತಿ ಕೆ ಇವರ ಪುತ್ರ ಪೂರ್ವಿತ್ ಎನ್ ಪಿ ಇವನು 574(91.84%) ಮತ್ತು ಗೋಪಾಲಕೃಷ್ಣ ಹಾಗೂ ಮೋಹಿನಿ ದಂಪತಿ ಪುತ್ರಿ ಸಿಂಚನ 574(91.84%) ಅಂಕ ಪಡೆದು ವಿಶಿಷ್ಟ ಶ್ರೇಣಿಯೊಂದಿಗೆ ಶಾಲೆಗೆ ದ್ವಿತೀಯ ಸ್ಥಾನಿಯಾಗಿರುತ್ತಾರೆ.


ಕಡಬ ಗ್ರಾಮದ ಅಲಾರ್ಮೆ ಮನೆಯ ಕುಮಾರ ಗೌಡ ಹಾಗೂ ವಿಮಲ ದಂಪತಿ ಪುತ್ರಿ ದೀಪ್ತಿ ಇವಳು 571(91.36%), ಕುಟ್ರುಪ್ಪಾಡಿ ಗ್ರಾಮದ, ಮಠಂತ್ತಾಡಿ ಮನೆಯ ಜನಾರ್ಧನ ಗೌಡ ಹಾಗೂ ಉಮಾವತಿ ಕೆ ಎಲ್ ಇವರ ಪುತ್ರಿ ರಕ್ಷಾ ಎಂ ಜೆ 567(90.72%), ಕುತ್ಕೂಂಜ ಗ್ರಾಮದ ಕರ್ಮಾಜೆ ಮನೆಯ ನಾರಾಯಣ ಹಾಗೂ ನಳಿನಿ ದಂಪತಿ ಪುತ್ರ ಚಿಂತನ್ ಕೆ 557(89.12%), ಎಡಮಂಗಲ ಗ್ರಾಮದ ಪರ್ಲಮನೆಯ ಪ್ರವೀಣ್‌ಕುಮಾರ್ ಪಿ ಹಾಗೂ ಗೀತಾವತಿ ಕೆ ಸಿ ದಂಪತಿ ಪುತ್ರ ಕೀರ್ತನ್‌ಕುಮಾರ್ ಪಿ 543 (86.88%) ಅಂಕಗಳೊಂದಿಗೆ ವಿಶಿಷ್ಟ ಶ್ರೇಣಿಯನ್ನು ಪಡೆದುಕೊಂಡಿರುತ್ತಾರೆ.


ಒಟ್ಟು 33 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 07 ಮಂದಿ ವಿದ್ಯಾರ್ಥಿಗಳು ಅತ್ಯನ್ನುತ ಶ್ರೇಣಿ, 15 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 08 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯೊಂದಿಗೆ ಹಾಗೂ 02 ಮಂದಿ ವಿದ್ಯಾರ್ಥಿಗಳು ತೃತೀಯ ಶ್ರೇಣಿಯೊಂದಿಗೆ ಉತ್ತೀರ್ಣರಾಗಿ ಶಾಲಾ ಫಲಿತಾಂಶ ಶೇ 97ರಷ್ಟು ಲಭಿಸಿದೆ.

LEAVE A REPLY

Please enter your comment!
Please enter your name here