ಶ್ರೀ ಮುತ್ತು ಮಾರಿಯಮ್ಮನವರ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಹಾಗೂ ಕುಂಭಾಭಿಷೇಕ

0

ಕೆಯ್ಯೂರು: ಕೆಯ್ಯೂರು ಗ್ರಾಮದ ಕಣಿಯಾರು ಮಲೆ ಅರ್ತ್ಯಡ್ಕ ಶ್ರೀ ಮುತ್ತು ಮಾರಿಯಮ್ಮ ದೇವಿ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಪುನರ್ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ. ಹಾಗೂ ಕುಂಭಾಭಿಷೇಕವು ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ, ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಎ.30 ಮತ್ತು ಮೇ.1ರಂದು ಕಣಿಯಾರುಮಲೆ ಅರ್ತ್ಯಡ್ಕದಲ್ಲಿ ನಡೆಯಲಿದೆ. 

ಕಾರ್ಯಕ್ರಮಗಳು 
ಎ.30ರಂದು  ಸಂಜೆ 6 ಗಂಟೆಗೆ ಕ್ಷೇತ್ರದ ತಂತ್ರಿಗಳಿಗೆ ಹಾಗೂ ವೈದಿಕರಿಗೆ ಪೂರ್ಣ ಕುಂಭ ಸ್ವಾಗತ, ರಾತ್ರಿ 7 ಪುಣ್ಯಾಹವಾಚನ  ಸ್ಥಳಶುದ್ದಿ ,ಪ್ರಸಾದ ಶುದ್ದಿ ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಂತ , ಅನ್ನ ಸಂತರ್ಪಣೆ, ಮೇ.1ರಂದು ಪೂರ್ವಾಹ್ನ ಗಂಟೆ 5ರಿಂದ ಗಣಪತಿ ಹೋಮ, ಬ್ರಹ್ಮ ಕಲಶಪೂಜೆ,  ಪೂರ್ವಾಹ್ನ 7.30ರ ವೃಷಭ ಲಗ್ನದ ಸುಮುಹೂರ್ತದಲ್ಲಿ  “ಪ್ರತಿಷ್ಠೆ , ಬ್ರಹ್ಮ ಕಲಶಾಭಿಷೇಕ” ಮಹಾಪೂಜೆ ನಿತ್ಯ ನೈಮಿತ್ಯಾದಿಗಳ ನಿರ್ಣಯ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಧ್ಯಾಹ್ನ ಸಭಾ ಕಾರ್ಯಕ್ರಮ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಡೆಯಲಿದೆ.
 
ಸಭಾ ಕಾರ್ಯಕ್ರಮ
ಸಭಾಧ್ಯಕ್ಷತೆ ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಮಳ ರಾಮಚಂದ್ರ, ಮುಖ್ಯ ಅತಿಥಿಯಾಗಿ ಶಾಸಕರಾದ ಅಶೋಕ್ ಕುಮಾರ್ ರೈ, ಧಾರ್ಮಿಕ ಪ್ರವಚನಕಾರರು ಲಕ್ಷ್ಮೀಶ ದಬ್ಲಡ್ಕ, ಶ್ರೀ ಕ್ಷೇತ್ರ ಕೆಯ್ಯೂರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ. ಎ.ಕೆ.ಜಯರಾಮ ರೈ ಕೆಯ್ಯೂರು, ಪೋಲಿಸ್ ಉಪನಿರೀಕ್ಷಕರು ಮಂಗಳೂರು ವಿಜಯರಾಜ್, ಶ್ರೀರಾಮ ಫ್ಯಾಬ್ರಿಕೇಷನ್ ಮತ್ತು ಇಂಜಿನಿಯರ್ ಕಾಂಟ್ರಾಕ್ಟರ್ ಮಂಗಳೂರು ಮಾಲಕರು ರಾಮನ್, ಕೆಯ್ಯೂರು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಕೆ ಶರತ್ ಕುಮಾರ್ ಮಾಡಾವು, ಕೆಯ್ಯೂರು  ವಲಯ ಕಾಂಗ್ರೆಸ್ ಅಧ್ಯಕ್ಷ ಜಯಂತ ಪೂಜಾರಿ ಕೆಂಗುಡೇಲು, ಸಿ. ಎ ಬ್ಯಾಂಕ್ ಕೊಳ್ತಿಗೆ ಅಧ್ಯಕ್ಷರು ತೀರ್ಥಾನಂದ ದುಗ್ಗಲ, ಷಣ್ಮುಖ ದೇವ ಪ್ರೌಢಶಾಲಾ ಪೆರ್ಲಂಪಾಡಿ ಸಂಚಾಲಕರು ಶಿವರಾಮ ಭಟ್ ಬೀರ್ನಕಜೆ ಉಪಸ್ಥಿತರಿರುವರು ಎಂದು  ಶ್ರೀ ಮುತ್ತು ಮಾರಿಯಮ್ಮ ದೇವಸ್ಥಾನ ಸೇವಾ ಟ್ರಸ್ಟ್ ಕಣಿಯಾರು ಮಲೆ, ಅರ್ತ್ಯಡ್ಕ, ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here