ವಿಠಲ ರೈ ಹಾಗೂ ವಿಮಲ ರೈಯವರ ವೈವಾಹಿಕ ಜೀವನದ ಸುವರ್ಣ ಸಂಭ್ರಮಾಚರಣೆ

0

ಪುತ್ತೂರು: ಕುರಿಯ ಗ್ರಾಮದ ಸಂಪ್ಯದಮೂಲೆ ಎಸ್ ವಿಠಲ ರೈ ಮತ್ತು ಕಾಸ್ಪಾಡಿಗುತ್ತು ವಿಮಲ ಎಸ್ ರೈಯವರ ವೈವಾಹಿಕ ಜೀವನದ ಸುವರ್ಣ ಸಂಭ್ರಮಾಚರಣೆ ಕಾರ್ಯಕ್ರಮವು ಏ.25ರಂದು ದೇವರ ಕಾರ್ಯಕ್ರಮದೊಂದಿಗೆ ಕೆಮ್ಮಾಯಿ ಬೀರ್ನಹಿತ್ಲು ಕೃಷ್ಣಾ ಫಾರ್ಮ್ ಹೌಸ್‌ನಲ್ಲಿ ಜರಗಿತು. ಚಿದಾನಂದ ರೈ ಕೆಮ್ಮಾಯಿ ಮತ್ತು ರಮಾನಂದ ರೈ ಕೈಕಾರ ರವರು ಸುವರ್ಣ ಸಂಭ್ರಮದಲ್ಲಿರುವ ದಂಪತಿಗಳಿಗೆ ಎಲ್ಲರ ಪರವಾಗಿ ಶುಭ ಹಾರೈಸಿದರು.


ಈ ಸಂದರ್ಭದಲ್ಲಿ ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿ, ಹೋಟೆಲ್ ಅಶ್ವಿನಿಯ ಮಾಲಕ ದೇರ್ಲ ಕರುಣಾಕರ ರೈ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರುಗಳಾದ ಈಶ್ವರ ಬೆಡೇಕರ್, ಮಹಾಬಲ ರೈ ವಲತ್ತಡ್ಕ, ಬೂಡಿಯಾರು ರಾಧಾಕೃಷ್ಣ ರೈ, ಬೂಡಿಯಾರು ಪುರುಷೋತ್ತಮ ರೈ, ಎಂ.ಆರ್ ಜಯಣ್ಣ, ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಬಂಧುಮಿತ್ರರು, ಕುಟುಂಬಸ್ಥರು ಉಪಸ್ಥಿತರಿದ್ದು, ದಂಪತಿಗಳಿಗೆ ಶುಭಹಾರೈಸಿದರು. ಬೆಳ್ಳಾರೆ ಫ್ರೆಂಡ್ಸ್ ಕೆಟರರ್‍ಸ್‌ನ ಮಾಲಕರಾದ ಪ್ರೀತಂ ರೈಯವರು ಸಂಪೂರ್ಣ ಸಹಕಾರ ನೀಡಿದರು.

ನಟ್‌ಫಿಕ್ಸ್ ಡ್ರೈಫ್ರೂಟ್ಸ್ ಬೊಳುವಾರು ಇದರ ಮಾಲಕ ಸುಹಾಸ್ ರೈ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

LEAVE A REPLY

Please enter your comment!
Please enter your name here